ನವದೆಹಲಿ: ಫೆಬ್ರುವರಿ 16 ರಂದು ಸುಪ್ರಿಂ ಕೋರ್ಟ್ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ರಚಿಸುವ ನಿಟ್ಟಿನಲ್ಲಿ ತೀರ್ಪನ್ನು ನೀಡಿತ್ತು. ಈ ಕೋರ್ಟ್ ನ ನಿರ್ದೇಶನದನ್ವಯ ಭಾರತ ಸರ್ಕಾರವು ಅಂತರಾಜ್ಯ ನದಿ ವಿವಾದ ಕಾಯ್ದೆ 1956 ರನ್ವಯ ಪ್ರಾಧಿಕಾರ ರಚನೆಗೆ ಮುಂದಾಗಿತ್ತು, ಈಗ ಪ್ರಾಧಿಕಾರ ರಚನೆ ವಿಚಾರವಾಗಿ ಅದು ಅಧಿಕೃತವಾಗಿ ಭಾರತ ಸರ್ಕಾರದ ಗ್ಯಾಜೆಟ್ ನಲ್ಲಿ ಪ್ರಕಟವಾಗಿದೆ. ಆ ಮೂಲಕ ಹಲವು ತಿಂಗಳಗಳ ಕಾಲ ಕಗ್ಗಂಟಾಗಿದ್ದ ಪ್ರಾಧಿಕಾರ ವಿಷಯಕ್ಕೆ ಕೊನೆಗೂ ತೆರೆ ಬಿದ್ದಿದೆ.


COMMERCIAL BREAK
SCROLL TO CONTINUE READING

ಭಾರತ ಸರ್ಕಾರದ ಜಲ ಸಂಪನ್ಮೂಲ ಮತ್ತು ನದಿ ಅಭಿವೃದ್ದಿ ಸಚಿವಾಲಯ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ಸರ್ಕಾರಿ ಗ್ಯಾಜೆಟ್ ನಲ್ಲಿ ಪ್ರಕಟಿಸಲು ಸೂಚಿಸಿದೆ. ಆ ಮೂಲಕ ಇನ್ನು ಮುಂದೆ ಈ ಪ್ರಾಧಿಕಾರವು  ಮೂರು ರಾಜ್ಯ ಮಟ್ಟು ಕೇಂದ್ರಾಡಳಿತ ಪ್ರದೇಶದ ಮಧ್ಯ ಕಗ್ಗಂಟಾಗಿದ್ದ ನೀರು ಹಂಚಿಕೆ ವಿಚಾರದ ಕುರಿತಾಗಿ ಮಹತ್ಬದ ಪಾತ್ರ ವಹಿಸಲಿದೆ ಎಂದು ತಿಳಿದುಬಂದಿದೆ. ಕಳೆದ ಮೇ ತಿಂಗಳಲ್ಲಿ  ಭಾರತ ಸರ್ಕಾರ ಸಲ್ಲಿಸಿದ್ದ ಪ್ರಾಧಿಕಾರದ ರಚನೆಯ ಕುರಿತ ದಾಖಲೆಗೆ ಸುಪ್ರಿಂ ಕೋರ್ಟ್ ಒಪ್ಪಿಗೆ ಸೂಚಿಸಿತ್ತು. ಆದರೆ ಅದು ಸರ್ಕಾರದ ಗ್ಯಾಜೆಟ್ ನಲ್ಲಿ  ಪ್ರಕಟವಾಗುವುದಷ್ಟೇ ಬಾಕಿ ಉಳಿದಿತ್ತು. ಈಗ  ಹಿರಿಯ ಜಂಟಿ ಆಯುಕ್ತ  ಆರ್.ಕೆ.ಕನೋಡಿಯಾ ಅವರು ಭಾರತ ಸರ್ಕಾರಿ  ಮುದ್ರಣದ ಮ್ಯಾನೇಜರ್ ಅವರಿಗೆ ಪ್ರಾಧಿಕಾರ ರಚನೆ ಕುರಿತಾಗಿ ಗ್ಯಾಜೆಟ್ ನಲ್ಲಿ  ಪ್ರಕಟಿಸಲು ನಿರ್ದೇಶನ ನೀಡಿದ್ದಾರೆ.ಆ ಮೂಲಕ ಈಗ ಪ್ರಾಧಿಕಾರಕ್ಕೆ ಅಧಿಕೃತ ಮಾನ್ಯತೆ ಸಿಕ್ಕಂತಾಗಿದೆ 


ಫೆಬ್ರುವರಿ 16 ರಂದು  ಮುಖ್ಯ ನ್ಯಾಯಮೂರ್ತಿ  ದೀಪಕ್ ಮಿಶ್ರಾ, ಎ ಎಂ. ಖಾನ್ವಿಲ್ಕರ್,ಡಿ.ವೈ ಚಂದ್ರಚೂಡ್ ಅವರನ್ನು ಒಳಗೊಂಡ ತ್ರೀ ಸದಸ್ಯ ಪೀಠವು ಪ್ರಾಧಿಕಾರ ರಚನೆಯ ಕುರಿತಾಗಿ ತೀರ್ಪನ್ನು ನೀಡಿತ್ತು. ಆದರೆ  ಭಾರತ ಸರಕಾರವು ಈ ಆದೇಶವನ್ನು  ಪಾಲಿಸಲು ಮೂರು ತಿಂಗಳ ಕಾಲಾವಧಿಯನ್ನು ತೆಗೆದುಕೊಂಡು ಕೊನೆಗೂ ಮೇ ತಿಂಗಳಲ್ಲಿ ಅದು ಪ್ರಾಧಿಕಾರವನ್ನು ರಚಿಸಿತ್ತು. ಈಗ ಅದು ಗ್ಯಾಜೆಟ್ ನಲ್ಲಿ ಪ್ರಕಟವಾಗುವುದರ ಮೂಲಕ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ಅಧಿಕೃತ ಮನ್ನಣೆ ದೊರೆತಂತಾಗಿದೆ ಎನ್ನಬಹುದು .