ನವದೆಹಲಿ: Old Vehicles Latest News - ಸರ್ಕಾರಿ ಇಲಾಖೆಗಳು 2022ರ ಏಪ್ರಿಲ್ 1 ರಿಂದ 15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಳೆಯದಾದ ವಾಹನಗಳ ನೋಂದಣಿಯನ್ನು ನವೀಕರಿಸಲು ಸಾಧ್ಯವಿಲ್ಲ. ಈ ಕುರಿತು  ಕೇಂದ್ರ ರಸ್ತೆ ಸಾರಿಗೆ ಮತ್ತು ಹೆಚ್ಚಾರಿ ಸಚಿವಾಲಯ ಸರ್ಕಾರದ ಮುಂದೆ ಪ್ರಸ್ತಾವನೆಯೊಂದನ್ನಿಟ್ಟಿದೆ. ಇದು ಒಂದು ವೇಳೆ ಅಂತಿಮಗೊಂಡರೆ ಈ ಪ್ರಸ್ತಾವನೆ ಶೀಘ್ರವೇ ಜಾರಿಗೆ ತರಲಾಗುವುದು ಎಂದಿದೆ. ಸುದ್ದಿ ಸಂಸ್ಥೆ PTI ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಸಚಿವಾಲಯ ಈ ಕುರಿತಾದ ನಿಯಮಗಳಲ್ಲಿ ತಿದ್ದುಪಡಿ ತರಲು ಅಧಿಸೂಚನೆ ಜಾರಿಗೊಳಿಸಿ ಸಂಬಂಧ ಪಟ್ಟ ಇಲಾಖೆಗಳಿಂದ ಸಲಹೆಗಳನ್ನು ಕೋರಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Airbag mandatory: ಏಪ್ರಿಲ್ 1 ರಿಂದ ಇನ್ನೂ ಸುರಕ್ಷಿತವಾಗಲಿದೆ ನಿಮ್ಮ ಕಾರಿನ ಪ್ರಯಾಣ


ಈ ಕುರಿತು ಟ್ವೀಟ್ ಮಾಡಿದ ಸಚಿವಾಲಯ (Ministry of Road Transport and Highways)
ವರದಿಗಳ ಪ್ರಕಾರ, ಒಂದೊಮ್ಮೆ ಈ ಪ್ರಸ್ತಾವನೆಗೆ ಅನುಮೋದನೆ ದೊರೆತರೆ ಈ ನಿಯಮ ಎಲ್ಲಾ ಸರ್ಕಾರಿ ವಾಹನಗಳು- ಕೇಂದ್ರ ಹಾಗೂ ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶ, ಸಾವಜನಿಕ ಯೋಜನೆಗಳು, ನಗರ ಸರ್ಕಾರಿ ಸಂಸ್ಥೆಗಳು ಹಾಗೂ ಸ್ವಾಯತ್ತ ಸಂಸ್ಥೆಗಳಿಗೆ ಅನ್ವಯಿಸಲಿದೆ ಎಂದು ಈ ಅಧಿಸೂಚನೆಯಲ್ಲಿ ಹೇಳಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, "ಎಲ್ಲಾ ಸರ್ಕಾರಿ ಇಲಾಖೆಗಳು 2022ರ ಏಪ್ರಿಲ್ 1 ರಿಂದ 15 ವರ್ಷಗಳಿಗಿಂತ ಹೆಚ್ಚು ಹಳೆಯದಾದ ವಾಹನಗಳ ನೋಂದಣಿ ಮಾಡಿಸಲು ಸಾಧ್ಯವಿಲ್ಲ" ಎಂದು ಹೇಳಿದೆ.


ಇದನ್ನೂ ಓದಿ-ಡಿಎಲ್, ಆರ್.ಸಿ ಮತ್ತಿತರ ವಾಹನಗಳಿಗೆ ಸಂಬಂಧಿಸಿದ ದಾಖಲೆಗಳ ಸಿಂಧುತ್ವ ಅವಧಿ ವಿಸ್ತರಣೆ


ಇತ್ತೀಚೆಗಷ್ಟೇ ವೆಹಿಕಲ್ ಜಂಕ್ ಪಾಲಸಿ ಘೋಷಿಸಲಾಗಿದೆ (Vehicle junk policy has recently been announced)
ಇದಕ್ಕೂ ಮೊದಲು ಫೆಬ್ರುವರಿ 1 ರಂದು ಮಂಡಿಸಲಾಗಿರುವ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ವಾಹನ ಜಂಕ್ ಪಾಲಿಸಿ ಯಾರಿಗೆ ತರುವುದಾಗಿ ಘೋಷಣೆ ಮಾಡಿತ್ತು. ಇದರ ಅಡಿ ಖಾಸಗಿ ವಾಹನಗಳಿಗೆ 20 ವರ್ಷ ಹಾಗೂ ವಾಣಿಜ್ಯಾತ್ಮಕ ವಾಹನಗಳಿಗೆ 15 ವರ್ಷಗಳು ಪೂರ್ಣಗೊಂಡ ಬಳಿಕ ಫಿಟ್ನೆಸ್ ಪರೀಕ್ಷೆ ಅನಿವಾರ್ಯಗೊಳಿಸಲಾಗಿದೆ. ಈ ಕುರಿತು ಸಚಿವಾಲಯ ಮಾರ್ಚ್ 12ರಂದು ಅಧಿಸೂಚನೆ ಜಾರಿಗೊಳಿಸಿತ್ತು. ಜೊತೆಗೆ ಸಂಬಂಧಪಟ್ಟವರಿಂದ 30 ದಿನಗಳೊಳಗೆ ಟಿಪ್ಪಣಿಗಳು, ಆಕ್ಷೇಪಗಳನ್ನು ಹಾಗೂ ಸಲಹೆಗಳನ್ನು ಕೋರಿತ್ತು.


ಇದನ್ನೂ ಓದಿ-4 ವರ್ಷದ ಮಗುವಿಗೂ ಹೆಲ್ಮೆಟ್ ಕಡ್ಡಾಯ, ಇಲ್ಲದಿದ್ರೆ ರದ್ದಾಗುತ್ತೆ ಲೈಸೆನ್ಸ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.