Oldest Pending Case:ಇದುವೇ ನಮ್ಮ ದೇಶದ ಅತ್ಯಂತ ಹಳೆ ನೆನೆಗುದಿಗೆ ಬಿದ್ದ ಪ್ರಕರಣ, ಎಷ್ಟು ವರ್ಷಗಳಿಂದ ನ್ಯಾಯ ಸಿಕ್ಕಿಲ್ಲ ಗೊತ್ತೇ?
Oldest Court Case - ದೇಶದ ಬಹುತೇಕ ನ್ಯಾಯಾಲಯಗಳಲ್ಲಿ ಎಲ್ಲ ಪ್ರಕರಣಗಳು ಬಾಕಿ ಉಳಿದಿವೆ. ಸರ್ಕಾರದ ಸಮೀಕ್ಷೆಯ ಪ್ರಕಾರ, ಈ ಪ್ರಕರಣಗಳು ಈ ವೇಗದಲ್ಲಿ ಇತ್ಯರ್ಥವಾದರೆ, ಅವುಗಳನ್ನು ಮುಗಿಸಲು 324 ವರ್ಷಗಳು ಬೇಕಾಗುತ್ತದೆ.
ನವದೆಹಲಿ: Pending Case In Court - ನ್ಯಾಯಾಲಯದಲ್ಲಿ ಬಾಕಿ ಇರುವ ಅನೇಕ ಪ್ರಕರಣಗಳ ಬಗ್ಗೆ ನೀವು ಕೇಳಿರಬೇಕು. ಈ ಪ್ರಕರಣಗಳು ಹಲವು ವರ್ಷಗಳಿಂದ ಹಾಗೆಯೇ ನೆನೆಗುದಿಗೆ ಬಿದ್ದಿವೆ. ಆದರೆ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆಯಲ್ಲಿರುವ ದೇಶದ ಅತ್ಯಂತ ಹಳೆಯ ಪ್ರಕರಣ ಯಾವುದು ಗೊತ್ತಾ? ಕೊಲ್ಕತ್ತಾ ಹೈಕೋರ್ಟ್ (Calcutta High Court) ದೇಶದಲ್ಲೇ ಅತಿ ಹೆಚ್ಚು ಬಾಕಿ ಇರುವ ಪ್ರಕರಣಗಳನ್ನು ಹೊಂದಿರುವ ನ್ಯಾಯಾಲಯ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರೆ ನಿಮಗೂ ಆಶ್ಚರ್ಯವಾದೀತು. ಇದರಲ್ಲಿ ಪ್ರಸ್ತುತ 2.24 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ (Total Pending Case). ಇವುಗಳ ಪೈಕಿ ಸುಮಾರು 10129 ಪ್ರಕರಣಗಳಿದ್ದು, 30 ವರ್ಷಕ್ಕೂ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ. ಆದರೆ ಭಾರತದಲ್ಲಿ 221 ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣವೊಂದಿದೆ. ಅದನ್ನು ದೇಶದ ಅತ್ಯಂತ ಹಳೆಯ ಬಾಕಿ ಪ್ರಕರಣ ಎಂದೂ ಕರೆಯುತ್ತಾರೆ. ಆ ಪ್ರಕರಣ ಯಾವುದು ತಿಳಿದುಕೊಳ್ಳೋಣ ಬನ್ನಿ.
221 ವರ್ಷಗಳಿಂದ ಈ ಪ್ರಕರಣ ಪೆಂಡಿಂಗ್ ನಲ್ಲಿದೆ
ಮಾಧ್ಯಮ ವರದಿಗಳ ಪ್ರಕಾರ, ಕೊಲ್ಕತ್ತಾ ಹೈಕೋರ್ಟಿನ ಪ್ರಕರಣ ಸಂಖ್ಯೆ AST/1/1800 ದೇಶದಲ್ಲಿ ಬಾಕಿ ಉಳಿದಿರುವ (Pending Case) ಅತ್ಯಂತ ಹಳೆಯ ಪ್ರಕರಣವಾಗಿದೆ. 221 ವರ್ಷಗಳಷ್ಟು ಹಳೆಯದಾದ ಈ ಪ್ರಕರಣವನ್ನು ಮೊದಲು 1800 ರಲ್ಲಿ ಕೆಳ ನ್ಯಾಯಾಲಯದಲ್ಲಿ ದಾಖಲಿಸಲಾಯಿತು. ಈ ಪ್ರಕರಣದ ಕೊನೆಯ ವಿಚಾರಣೆಯನ್ನು 20 ನವೆಂಬರ್ 2018 ರಂದು ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ನಡೆಸಲಾಯಿತು. ಇದರ ಕಡತಗಳು ಕೆಳ ನ್ಯಾಯಾಲಯಗಳಲ್ಲಿ ಸುಮಾರು 170 ವರ್ಷಗಳ ಕಾಲ ಬಾಕಿ ಉಳಿದಿದ್ದವು, ನಂತರ ಅವುಗಳನ್ನು 1 ಜನವರಿ 1970 ರಂದು ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ನೋಂದಾಯಿಸಲಾಯಿತು. ಇದರಿಂದ ಅದರ ವಿಚಾರಣೆಯನ್ನು ತ್ವರಿತವಾಗಿ ಇತ್ಯರ್ಥಗೊಳಿಸಬಹುದು. ಆದರೆ ಹೈಕೋರ್ಟಿನಲ್ಲೂ ಕಳೆದ 51 ವರ್ಷಗಳಿಂದ ಈ ಪ್ರಕರಣಕ್ಕೆ ದಿನಾಂಕಗಳ ಮೇಲೆ ದಿನಾಂಕ ಸಿಗುತ್ತಿರುವುದು ವಿಷಾಧಕರ ಸಂಗತಿ.
[[{"fid":"221519","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಇದನ್ನೂ ಓದಿ-Knowledge Story: ನೀವು ಸೀನುವ ವಿಧಾನ ಕೂಡ ನಿಮ್ಮ ವ್ಯಕ್ತಿತ್ವದ ಕುರಿತು ಹೇಳುತ್ತೆ! ನಿಮಗಿದು ಗೊತ್ತಾ?
ಎಲ್ಲಾ ಕಡೆ ಇದೆ ಪರಿಸ್ಥಿತಿ ಇದೆ
ಕೊಲ್ಕತ್ತಾ ಹೈಕೋರ್ಟ್ ಮಾತ್ರವಲ್ಲ, ದೇಶದಾದ್ಯಂತ ಹೆಚ್ಚಿನ ನ್ಯಾಯಾಲಯಗಳು ಕಳಪೆ ಸ್ಥಿತಿಯಲ್ಲಿವೆ. ದೇಶದ 24 ಹೈಕೋರ್ಟ್‌ಗಳಲ್ಲಿ ಸುಮಾರು 56 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. ಈ ಪೈಕಿ 59595 ಪ್ರಕರಣಗಳು 30 ವರ್ಷಗಳಿಂದ ಬಾಕಿ ಉಳಿದಿವೆ. ದೇಶದ ಅತಿದೊಡ್ಡ ಹೈಕೋರ್ಟ್, ಅಲಹಾಬಾದ್ ಹೈಕೋರ್ಟ್, 42764 ಪ್ರಕರಣಗಳು 30 ವರ್ಷಕ್ಕಿಂತ ಹಳೆಯದಾಗಿವೆ.
ಇದನ್ನೂ ಓದಿ-Knowledge Story: ಅತ್ಯಂತ ಹೆಚ್ಚು ಪ್ರಯೋಜನಕಾರಿಯಾಗಿದೆ Super App, ಇಲ್ಲಿದೆ ಅದರ ವಿಶೇಷತೆ.
ಎಲ್ಲ ಪ್ರಕರಣಗಳ ಇತ್ಯರ್ಥಕ್ಕೆ 324 ವರ್ಷಗಳು ಬೇಕು
ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್ (National Judiciary Data Grid) ದತ್ತಾಂಶದ ಪ್ರಕಾರ, ದೇಶಾದ್ಯಂತ ಸುಮಾರು 17000 ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 89000 ಪ್ರಕರಣಗಳು ಬಾಕಿ ಉಳಿದಿವೆ, ಇವು 30 ವರ್ಷಗಳಿಗಿಂತ ಹೆಚ್ಚು ಹಳೆಯ ಪ್ರಕರಣಗಳಾಗಿವೆ ಒಟ್ಟು ಬಾಕಿ ಪ್ರಕರಣಗಳ ಸಂಖ್ಯೆ 3.6 ಕೋಟಿ. ಸರ್ಕಾರ ನಡೆಸಿದ ಸಮೀಕ್ಷೆಯ ಪ್ರಕಾರ, ಈ ವೇಗದಲ್ಲಿ ಪ್ರಕರಣಗಳು ಇತ್ಯರ್ಥವಾದರೆ, ಈ ಎಲ್ಲಾ ಪ್ರಕರಣಗಳನ್ನು ಮುಗಿಸಲು 324 ವರ್ಷಗಳು ಬೇಕಾಗಬಹುದು. ಕೆಳಹಂತದ ನ್ಯಾಯಾಲಯಗಳಲ್ಲಿ 140 ಪ್ರಕರಣಗಳೂ ಇದ್ದು, ಅವು 60 ವರ್ಷಕ್ಕಿಂತ ಹಳೆಯದಾಗಿವೆ.
ಇದನ್ನೂ ಓದಿ-Knowledge Story: ಕೇವಲ Expiry Date ಅಷ್ಟೇ ಅಲ್ಲ, ಮಾತ್ರೆಗಳ ಸ್ಟ್ರಿಪ್ ಮೇಲಿರುವ ಈ ಚಿಹ್ನೆಯೂ ಇಂಪಾರ್ಟೆಂಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ