ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಒಮರ್ ಅಬ್ದುಲ್ಲಾ ಪೋಟೋ...!
370 ನೇ ವಿಧಿ ನಿಬಂಧನೆಗಳನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಒಮರ್ ಅಬ್ದುಲ್ಲಾ ಅವರನ್ನು ಕೇಂದ್ರ ಸರ್ಕಾರ ಬಂಧನದಲ್ಲಿರಿಸಿತು.
ನವದೆಹಲಿ: 370 ನೇ ವಿಧಿ ನಿಬಂಧನೆಗಳನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಒಮರ್ ಅಬ್ದುಲ್ಲಾ ಅವರನ್ನು ಕೇಂದ್ರ ಸರ್ಕಾರ ಬಂಧನದಲ್ಲಿರಿಸಿತು.
ಈಗ ಏಕಾಏಕಿ ಅವರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಟೋದಲ್ಲಿ ಬಿಳಿ ಗಡ್ಡ ಬಿಟ್ಟಿರುವ ಪೋಟೋ ವೈರಲ್ ಆಗಿದೆ.ಇದುವರೆಗೆ ಈ ಪೋಟೋವನ್ನು ಖಚಿತಪಡಿಸಿಲ್ಲ, ಅದಾಗ್ಯೂ ಕೂಡ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಅವರು ಇದನ್ನು ‘ದುರದೃಷ್ಟಕರ’ ಎಂದು ಹಂಚಿಕೊಂಡಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಮಮತಾ 'ಈ ಚಿತ್ರದಲ್ಲಿ ನನಗೆ ಒಮರ್‌ನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ದುಃಖವಾಗುತ್ತಿದೆ. ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಇದು ನಡೆಯುತ್ತಿರುವುದು ದುರದೃಷ್ಟಕರ. ಇದು ಯಾವಾಗ ಕೊನೆಗೊಳ್ಳುತ್ತದೆ? ಎಂದು ಟ್ವೀಟ್ ಮಾಡಿದ್ದಾರೆ.
ಜನವರಿ 15 ರಂದು, ಜಮ್ಮು ಮತ್ತು ಕಾಶ್ಮೀರ ಆಡಳಿತವು ಕಣಿವೆಗೆ ಭೇಟಿ ನೀಡುವ ಕೇಂದ್ರದಿಂದ ಮಂತ್ರಿಮಂಡಲದ ನಿಯೋಗಕ್ಕೆ ಸ್ಥಳಾವಕಾಶ ಕಲ್ಪಿಸಲು ಆವರಣವನ್ನು ಬಳಸಲು ಯೋಜಿಸಿದ್ದರಿಂದ ಅಬ್ದುಲ್ಲಾ ಅವರನ್ನು ಹರಿ ನಿವಾಸ್‌ನಿಂದ ಅವರ ಅಧಿಕೃತ ನಿವಾಸದ ಬಳಿಯ ಮನೆಯೊಂದಕ್ಕೆ ಸ್ಥಳಾಂತರಿಸಲಾಯಿತು.
ಆಗಸ್ಟ್ 5 ರಂದು ಕೇಂದ್ರವು ಸಂವಿಧಾನದ 370 ನೇ ವಿಧಿಯನ್ನು ದುರ್ಬಲಗೊಳಿಸಿದ ನಂತರ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಲಡಾಕ್, ಮತ್ತು ಜಮ್ಮು ಮತ್ತು ಕಾಶ್ಮೀರ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಅವರ ತಂದೆ ಫಾರೂಕ್ ಅಬ್ದುಲ್ಲಾ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರೊಂದಿಗೆ ಒಮರ್ ನೂರಾರು ರಾಜಕೀಯ, ಸಾಮಾಜಿಕ ಕಾರ್ಯಕರ್ತರು, ವಕೀಲರು ಮತ್ತು ಉದ್ಯಮಿಗಳನ್ನು ಬಂಧನದಲ್ಲಿರಿಸಲಾಗಿದೆ.
ಸೆಕ್ಷನ್ 107 ರ ಅಡಿಯಲ್ಲಿ ಒಮರ್, ಮೆಹಬೂಬಾ ಮತ್ತು ಇತರ ರಾಜಕಾರಣಿಗಳನ್ನು ಬಂಧಿಸಲಾಯಿತು, ಇದು ವ್ಯಕ್ತಿಯು ಶಾಂತಿ ಅಥವಾ ಸಾರ್ವಜನಿಕ ಶಾಂತಿಗೆ ಭಂಗಕ್ಕೆ ಧಕ್ಕೆ ತರುವ ಸಾಧ್ಯತೆಯಿದೆ ಎಂಬ ಮಾಹಿತಿಯನ್ನು ಪಡೆದರೆ ಯಾವುದೇ ವ್ಯಕ್ತಿಯನ್ನು ಆರು ತಿಂಗಳ ಅವಧಿಗೆ ತಡೆಗಟ್ಟುವ ವಶಕ್ಕೆ ತೆಗೆದುಕೊಳ್ಳಲು ಅಧಿಕಾರಿಗಳು ಮತ್ತು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗೆ ಅವಕಾಶ ನೀಡುತ್ತದೆ.