Waah Tax! ‘1 ಕೋಟಿ ಟ್ಯಾಕ್ಸ್ ಕಟ್ಟದಿದ್ರೆ ತಾಜ್ಮಹಲ್ ಸೀಜ್ ಮಾಡ್ತೀವಿ’!
ಪ್ರೀತಿಯ ಸಂಕೇತವಾಗಿರುವ ‘ತಾಜ್‌ಮಹಲ್’ಗೆ ದೊಡ್ಡದೊಂದು ಸಂಕಷ್ಟ ಎದುರಾಗಿದೆ. ಜಗತ್ತಿನ 7 ಅದ್ಭುತಗಳ ಪೈಕಿ ಸ್ಥಾನ ಪಡೆದಿರುವ ತಾಜ್‍ಮಹಲ್‍ಗೆ ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ.
ನವದೆಹಲಿ: ಪ್ರೀತಿಯ ಸಂಕೇತವಾಗಿರುವ ‘ತಾಜ್‌ಮಹಲ್’ಗೆ ದೊಡ್ಡದೊಂದು ಸಂಕಷ್ಟ ಎದುರಾಗಿದೆ. ಜಗತ್ತಿನ 7 ಅದ್ಭುತಗಳ ಪೈಕಿ ಸ್ಥಾನ ಪಡೆದಿರುವ ತಾಜ್‍ಮಹಲ್‍ಗೆ ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ.
ಪ್ರೇಮ ಸ್ಮಾರಕ ತಾಜ್ ಮಹಲ್‍ನ ನಿರ್ವಹಣೆ ಮಾಡುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ 1.9 ಕೋಟಿ ನೀರಿನ ತೆರಿಗೆ ಮತ್ತು 1.5 ಲಕ್ಷ ರೂ. ಆಸ್ತಿ ತೆರಿಗೆ ಪಾವತಿಸುವಂತೆ ಆಗ್ರಾ ಪುರಸಭೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. 15 ದಿನದೊಳಗೆ ಟ್ಯಾಕ್ಸ್ ಕಟ್ಟದಿದ್ದರೆ ನಾವು ತಾಜ್‍ಮಹಲ್ ಸೀಜ್ ಮಾಡುವುದಾಗಿ ಪುರಸಭೆ ಅಧಿಕಾರಿಗಳು ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿ ಗೂಗಲ್ ಸಿಇಓ ಸುಂದರ್ ಪಿಚ್ಚೈ ಹೇಳಿದ್ದೇನು ಗೊತ್ತಾ?
ಪಾಲಿಕೆ ಅಧಿಕಾರಿಗಳ ಟ್ಯಾಕ್ಸ್ ನೋಟಿಸ್ ಕಂಡು ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳಿಗೆ ಶಾಕ್ ಆಗಿದೆ. ‘ಇಂತಹ ತೆರಿಗೆಗಳು ಐತಿಹಾಸಿಕ ಸ್ಮಾರಕಗಳಿಗೆ ಅನ್ವಯಿಸುವುದಿಲ್ಲ. ಇಲಾಖೆಗಳು ತಪ್ಪಾಗಿ ನೋಟಿಸ್ ಜಾರಿ ಮಾಡಿದ್ದು, ಸಂಬಂಧಪಟ್ಟವರಿಗೆ ಉತ್ತರ ಕಳುಹಿಸಲಾಗುವುದು’ ಎಂದು ASIನ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ರಾಜ್ ಕುಮಾರ್ ಪಟೇಲ್ ಹೇಳಿದ್ದಾರೆ.
‘ತಾಜ್‍ಮಹಲ್ ಕಲಾತ್ಮಕ ಹಾಗೂ ಐತಿಹಾಸಿಕ ಕಟ್ಟಡವಾಗಿದೆ. ಈ ರೀತಿಯ ನೋಟಿಸ್ ಬರುತ್ತಿರುವುದು ಇದೇ ಮೊದಲು. ತಾಜ್‍ಮಹಲ್‌ಗೆ ಒಟ್ಟು 2 ನೋಟಿಸ್ ಬಂದಿದ್ದು, ಒಂದು ನೀರಿನ ತೆರಿಗೆ ಮತ್ತು 2ನೇಯದ್ದು ಆಸ್ತಿ ತೆರಿಗೆ. ಈ ನೋಟಿಸ್‍ಗಳಲ್ಲಿ 1.9 ಕೋಟಿ ರೂ. ನೀರಿನ ತೆರಿಗೆ ಹಾಗೂ 1.5 ಲಕ್ಷ ರೂ. ಆಸ್ತಿ ತೆರಿಗೆ ಪಾವತಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Anti-Conversion Law: ಈ ರಾಜ್ಯದಲ್ಲಿ ಮದುವೆಗಾಗಿ ಧರ್ಮ ಬದಲಿಸುವಂತಿಲ್ಲ, ಕಾನೂನು ಉಲ್ಲಂಘಿಸಿದರೆ 10 ವರ್ಷ ಜೈಲು ಶಿಕ್ಷೆ
ಈ ಇಡೀ ಪ್ರಕರಣದಲ್ಲಿ ಕಾರ್ಪೊರೇಷನ್ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಸುಮಾರು 102 ವರ್ಷಗಳ ಹಿಂದೆ 1920 ರಲ್ಲಿ ತಾಜ್ ಮಹಲ್ ಅನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಗಿದೆ, ತಾಜ್‌ಮಹಲ್‌ನ ಆವರಣದಲ್ಲಿ ಯಾವುದೇ ವಾಣಿಜ್ಯ ಕೆಲಸಗಳನ್ನು ಮಾಡುತ್ತಿಲ್ಲ ಮತ್ತು ಸಾರ್ವಜನಿಕರಿಗೆ ಉಚಿತ ಸೌಲಭ್ಯಗಳನ್ನು ಒದಗಿಸುವುದರಿಂದ ಸ್ಮಾರಕಕ್ಕೆ ತೆರಿಗೆ ಅನ್ವಯಿಸುವುದಿಲ್ಲ. ರಾಜ್ಯದಲ್ಲಾಗಲೀ ಅಥವಾ ದೇಶದಲ್ಲಾಗಲೀ ಯಾವುದೇ ಸ್ಮಾರಕಗಳಿಗೆ ತೆರಿಗೆ ಇಲ್ಲ. ಇದು ಅಧಿಕಾರಿಗಳ ತಪ್ಪಿನಿಂದಾಗಿದೆ. ಈ ನೋಟಿಸ್‍ಗಳ ಬಗ್ಗೆ ಮಾತನಾಡಲು ನಗರಸಭೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಎಎಸ್‌ಐಗೆ ಕಳುಹಿಸಲಾದ ನೋಟಿಸ್‍ನಲ್ಲಿ ಮಾರ್ಚ್ 31, 2022ರವರೆಗೆ ಬಾಕಿ ಉಳಿದಿರುವ ಮನೆ ತೆರಿಗೆಯನ್ನು 88,784 ರೂ. ಎಂದು ತೋರಿಸಲಾಗಿದೆ, ಬಾಕಿ ತೆರಿಗೆಯನ್ನು ಪಾವತಿಸದಿದ್ದಕ್ಕಾಗಿ 47,983 ರೂ. ಬಡ್ಡಿಯನ್ನು ಸೇರಿಸಲಾಗಿದೆ. 2022-23ನೇ ಸಾಲಿಗೆ 11,098 ರೂ.ಗಳನ್ನು ಮನೆ ತೆರಿಗೆಯಾಗಿ ವಿಧಿಸಲಾಗಿದ್ದು, ಒಟ್ಟು 14,7826 ರೂ.ಗಳನ್ನು ಸೇರಿಸಿ 15 ದಿನಗಳಲ್ಲಿ ಪಾವತಿಸಬೇಕು ಅಂತಾ ಹೇಳಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.