ನವದೆಹಲಿ : ಪ್ರತಿಯೊಬ್ಬರೂ ಬ್ರಾಂಡೆಡ್ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಹೆಚ್ಚಿನ ಜನರು ತಮ್ಮ ಆಯ್ಕೆಯ ಬಟ್ಟೆಗಳನ್ನು ಖರೀದಿಸಲು ಬಹಳಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಚಳಿಯ ದಿನಗಳಲ್ಲಿ (winter) ದುಬಾರಿ ಬೆಲೆಯ ಜಾಕೆಟ್, ಸ್ವೆಟರ್ ಗಳನ್ನು ಖರೀದಿಸಿ ಧರಿಸುತ್ತಾರೆ. ಇವತ್ತು ಅಂಥದ್ದೇ ಸ್ವೆಟರ್ ಬಗ್ಗೆ ಹೇಳಲಿದ್ದೇವೆ. ಹೌದು ಈ ಸ್ವೆಟರ್ ಬೆಲೆ  (Most Costly Sweater) ಕೇಳಿದರೆ ದಂಗಾಗಿಬಿಡಬೇಕು. ಈ ಸ್ವೆಟರ್ ನ ಬೆಲೆ 30 ಲಕ್ಷ ರೂ. 


COMMERCIAL BREAK
SCROLL TO CONTINUE READING

ಹೌದು, ಈ ಸ್ವೆಟರ್ ಖರೀದಿಸಬೇಕಾದರೆ 30 ಲಕ್ಷ ಪಾವತಿಸಬೇಕಾಗುತ್ತದೆ. 30 ಲಕ್ಷ ರೂಪಾಯಿ ವೆಚ್ಚದ ಈ ಸ್ವೆಟರ್ (Sweater) ಒಂದು ರೀತಿಯ ಕ್ರಿಸ್ಮಸ್ ಜಂಪರ್ ಆಗಿದೆ. ಇದರ ಬೆಲೆ ಕೇಳಿದವರೆಲ್ಲ ಬೆಚ್ಚಿ ಬೀಳುತ್ತಾರೆ. ಈ ಸ್ವೆಟರ್ ಅನ್ನು ಯಾರು ಬೇಕಾದರೂ ಖರೀದಿಸಬಹುದು. ಇದರ ಬೆಲೆ ಕೇಳಿದರೆ ಇಷ್ಟು ದುಬಾರಿ ಸ್ವೆಟರ್ ಮಾಡುವ ಅಗತ್ಯ ಏನಿತ್ತು ಮತ್ತು ಅದರ ವಿಶೇಷತೆ ಏನು ಎಂಬ ಪ್ರಶ್ನೆ ಏಳದೇ ಇರದು. 


ಇದನ್ನೂ ಓದಿ : IIT-Bombay Placement: ಮೊದಲ ದಿನದಂದೇ 2.05 ಕೋಟಿ ರೂ ಪ್ಯಾಕೇಜ್ ನೀಡಿದ Uber


ಏನು ಈ ಸ್ವೆಟರ್ ನ ವೈಶಿಷ್ಟ್ಯ : 
30 ಲಕ್ಷ ಮೌಲ್ಯದ ಈ ಸ್ವೆಟರ್ ನಲ್ಲಿ ವಜ್ರಗಳಿವೆ. ಇದು ಸಹ ಸಾಕಷ್ಟು ಮೃದುವಾಗಿರುತ್ತದೆ. ಈ ಸ್ವೆಟರ್ ತಯಾರಿಸಲು 3000 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ. ಈ ಸ್ವೆಟರ್ ಅನ್ನು ತಯಾರಿಸಿದ ಕಲಾವಿದ ಐಡೆನ್ ಲಿಬಾನ್ ತನ್ನವ್ಯಯಿಸಿದ್ದಾನೆ. ಇದನ್ನು ತಯಾರಿಸಲು ಐಡೆನ್ 7 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಸ್ವೆಟರ್‌ನಲ್ಲಿ ಮಾಡಿದ ಹಿಮಸಾರಂಗವನ್ನು ವಜ್ರ (dimond) ಹೊದಿಸಿದ ಬೆಳ್ಳಿ (Silver) ನಕ್ಷತ್ರಗಳಿಂದ ಅಲಂಕರಿಸಲಾಗಿದೆ. ಈ ಕಾರಣಕ್ಕಾಗಿಯೇ ಇದರ ಬೆಲೆಯನ್ನು 30 ಲಕ್ಷ ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಪ್ರಮುಖ ವಿಷಯವೆಂದರೆ ಈ ಸ್ವೆಟರ್‌ನಿಂದ ಪಡೆದ ಮೊತ್ತವನ್ನು ರಾಷ್ಟ್ರೀಯ ಆರೋಗ್ಯ ಸೇವೆಗೆ ನೀಡಲಾಗುವುದು. 


ವಿಶ್ವದ ಅತ್ಯಂತ ದುಬಾರಿ ಸ್ವೆಟರ್ :
ಸ್ವೆಟರ್ ಅನ್ನು ಇಟಾಲಿಯನ್ ರೇಷ್ಮೆಯೊಂದಿಗೆ 24 ಕ್ಯಾರೆಟ್ ಚಿನ್ನದ ದಾರದಿಂದ ನೇಯಲಾಗುತ್ತದೆ. ಸಾವಿರಾರು ಸ್ವರೋವ್ಸ್ಕಿ ಹರಳುಗಳನ್ನು ಅದರಲ್ಲಿ ಹಾಕಲಾಗಿದೆ. ಈ ಸ್ವೆಟರ್ ಮಾರಾಟವಾದರೆ, ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಸ್ವೆಟರ್ (expensive sweater) ಇದಾಗಲಿದೆ. ಈ ಸ್ವೆಟರ್ ಮಾರಾಟದಿಂದ ಬಂದ ಹಣವನ್ನು ಉತ್ತಮ ಕೆಲಸಕ್ಕಾಗಿ ಬಳಸಲಾಗುವುದು. ಈ ಹಿಂದೆ ಅತ್ಯಂತ ದುಬಾರಿ ಸ್ವೆಟರ್ ಅನ್ನು ಟಿಪ್ಸಿ ಎಲ್ವೆಸ್ ತಯಾರಿಸಿದ್ದರು. ಆ ಸ್ವೆಟರ್ 25 ಲಕ್ಷಕ್ಕೆ ಮಾರಾಟವಾಗಿತ್ತು.  


ಇದನ್ನೂ ಓದಿ :   Investment Idea : ಸರ್ಕಾರದ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ, ಡಬಲ್ ಲಾಭ ಪಡೆಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.