ರಾಜ್ಯದಲ್ಲಿ ಒಮಿಕ್ರಾನ್ ಪತ್ತೆ: ದೇಶದಲ್ಲಿ 3,545 ಹೊಸ ಕೊರೊನಾ ಪ್ರಕರಣ ದಾಖಲು
ಕೋವಿಡ್ ನಾಲ್ಕನೇ ಅಲೆ ಅಪ್ಪಳಿಸುವ ಭೀತಿ ನಡುವೆ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,545 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ ದಿನಕ್ಕಿಂತ ಶೇ. 8.2 ರಷ್ಟು ಹೆಚ್ಚು ಪ್ರಕರಣ ದಾಖಲಾಗಿದ್ದು, ಕಳೆದ ದಿನ (ಗುರುವಾರ) 3,275 ಕೇಸ್‌ಗಳು ವರದಿಯಾಗಿದ್ದವು.
ನವದೆಹಲಿ: ಕೋವಿಡ್ ನಾಲ್ಕನೇ ಅಲೆ ಅಪ್ಪಳಿಸುವ ಭೀತಿ ನಡುವೆ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,545 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ ದಿನಕ್ಕಿಂತ ಶೇ. 8.2 ರಷ್ಟು ಹೆಚ್ಚು ಪ್ರಕರಣ ದಾಖಲಾಗಿದ್ದು, ಕಳೆದ ದಿನ (ಗುರುವಾರ) 3,275 ಕೇಸ್‌ಗಳು ವರದಿಯಾಗಿದ್ದವು.
ಇದನ್ನು ಓದಿ: Name Astrology: ಈ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗರು ಉತ್ತಮ ಸಂಗಾತಿಯಾಗಿರುತ್ತಾರೆ..!
ಮೇ 5ರಂದು ದೇಶಾದ್ಯಂತ ಒಟ್ಟು 27 ಜನರು ಸೋಂಕಿಗೆ ಬಲಿಯಾಗಿದ್ರು. ಈ ಮೂಲಕ ಮೃತರ ಸಂಖ್ಯೆ 5, 24,002ಕ್ಕೆ ಏರಿಕೆಯಾಗಿತ್ತು. ಸದ್ಯ ದೇಶಾದಲ್ಲಿ ಒಟ್ಟು 19,688 ಸಕ್ರಿಯ ಪ್ರಕರಣಗಳಿದ್ದು,ಚೇತರಿಕೆ ಪ್ರಮಾಣ ಶೇ. 98.74 ರಷ್ಟಿದೆ.
ಕಳೆದ 24 ಗಂಟೆಗಳಲ್ಲಿ ಒಟ್ಟು 3,549 ಮಂದಿ ಗುಣಮುಖರಾಗಿದ್ದು, ಇದುವರೆಗೆ ಒಟ್ಟು 4,25,51,248 ಜನರು ಚೇತರಿಸಿಕೊಂಡಿದ್ದಾರೆ. ದೈನಂದಿನ ಪಾಸಿಟಿವಿಟಿ ದರ ಶೇ 1.07 ರಷ್ಟಿದ್ದರೆ, ಪಾಸಿಟಿವಿಟಿ ದರ ದರ ಶೇ.0.70ರಷ್ಟಿದೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿ ನಿರ್ವಹಿಸಲಾದ ಒಟ್ಟು ಲಸಿಕೆಯ ಡೋಸ್ಗಳ ಸಂಖ್ಯೆ 189.81 ಕೋಟಿ ಆಗಿದೆ.
ರಾಜ್ಯದಲ್ಲಿ ಒಮಿಕ್ರಾನ್:
ಕೊರೊನಾ ನಾಲ್ಕನೇ ಅಲೆ ಮಧ್ಯೆ BA.4 ಹಾಗೂ BA.5 ಎಂಬ ಒಮಿಕ್ರಾನ್‌ನ ಎರಡು ಉಪತಳಿಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಈ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ಭೀತಿಯನ್ನು ಮೂಡಿಸಿದೆ. ಸದ್ಯ ಪ್ರಕರಣದ ಕುರಿತು ಹೆಚ್ಚಿನ ಅಧ್ಯಯನಕ್ಕೆ ವೈರಾಲಜಿಸ್ಟ್ ಮುಂದಾಗಿದ್ದಾರೆ.
ಇದನ್ನು ಓದಿ: ಎಷ್ಟೇ ಪ್ರಯತ್ನ ಪಟ್ಟರೂ ಹಣದ ಸಮಸ್ಯೆ ನೀಗದಿರುವುದಕ್ಕೆ ಈ ತಪ್ಪುಗಳು ಕಾರಣವಾಗಿರಬಹುದು
ಒಮಿಕ್ರಾನ್ ನ BA.2ತಳಿಯು ಮೂರನೇ ಅಲೆಯಲ್ಲಿ ಹೆಚ್ಚು ಸೋಂಕು ಹರಡಲು ಕಾರಣವಾಗಿತ್ತು. ಈಗ ಒಮಿಕ್ರಾನ್‌ನ BA.4 ಹಾಗೂ BA.5 ಉಪತಳಿ ಪತ್ತೆಯಾಗಿದ್ದು, ಭೀತಿ ಹೆಚ್ಚಿಸಿದೆ. ಸದ್ಯ ವೈರಾಲಜಿಸ್ಟ್ ವರದಿ ಬಂದ ಬಳಿಕ ಉಪತಳಿಯ ಲಕ್ಷಣಗಳು, ಅಪಾಯದ ಬಗ್ಗೆ ತಿಳಿಯಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.