ನವದೆಹಲಿ : ಗುಜರಾತ್‌ನಲ್ಲಿ ಕೊರೊನಾವೈರಸ್‌ನ (Coronavirus) ಹೊಸ ರೂಪಾಂತರ ಓಮಿಕ್ರಾನ್ (Omicron) ಪತ್ತೆಯಾಗಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ಒಮಿಕ್ರಾನ್‌ನ ಮೊದಲ ಪ್ರಕರಣ ಬೆಳಕಿಗೆ ಬಂದಿದೆ. ದಕ್ಷಿಣ ಆಫ್ರಿಕಾದಿಂದ ಬಂದ ವ್ಯಕ್ತಿಯೊಬ್ಬರು  ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾರೆ. 


COMMERCIAL BREAK
SCROLL TO CONTINUE READING

 ಪುಣೆ ಪ್ರಯೋಗಾಲಯಕ್ಕೆ  ಸ್ಯಾಂಪಲ್ :
ದಕ್ಷಿಣ ಆಫ್ರಿಕಾ ದಿಂದ ಬಂದಿರುವ ವ್ಯಕ್ತಿಯ ಆರ್‌ಟಿ-ಪಿಸಿಆರ್ (RT-PCR) ವರದಿಗಳನ್ನು ಪುಣೆಯ ಲ್ಯಾಬ್‌ಗೆ ಕಳುಹಿಸಲಾಗಿದೆ.  ಜಿಂಬಾಬ್ವೆ ನಿವಾಸಿಯೊಬ್ಬರು ಜಾಮ್‌ನಗರಕ್ಕೆ ಆಗಮಿಸಿದ್ದು, ಅವರ COVID-19 ನ ವರದಿಯು ಪಾಸಿಟಿವ್ ಬಂದಿದ್ದು, ಅವರು ಒಮಿಕ್ರಾನ್‌ನಿಂದ (Omicron) ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ಕಂಡುಹಿಡಿಯಲು ಮಾದರಿಗಳನ್ನು ಮತ್ತೊಂದು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಶುಕ್ರವಾರ ಗುಜರಾತ್‌ನ ಆರೋಗ್ಯ ಇಲಾಖೆ ಮಾಹಿತಿ ನೀಡಿತ್ತು. 


ಇದನ್ನೂ ಓದಿ : ರೈತರಿಗೆ ಸಿಹಿಸುದ್ದಿ! ಸರ್ಕಾರದ ಹೊಸ ಯೋಜನೆಯಿಂದ ಸಿಗುತ್ತಿದೆ 3 ಲಕ್ಷ ರೂ . ಗಳ ಲಾಭ 


ಇದೀಗ ದೇಶದಲ್ಲಿ ಒಂದೊಂದೇ ಪ್ರಕರಣಗಳು ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಕರೋನಾ ವೈರಸ್‌ನ (Coronavirus) ಡೆಲ್ಟಾ ರೂಪಾಂತರಕ್ಕಿಂತ ಓಮಿಕ್ರಾನ್ ರೂಪಾಂತರವು ಐದು ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ಹಿಂದಿನಂತೆ ಮುನ್ನೆಚ್ಚರಿಕೆ ವಹಿಸುವಂತೆ ಸರ್ಕಾರ ಸಲಹೆ ನೀಡಿದೆ. 


ಡೆಲ್ಟಾ ವೇರಿಯಂಟ್‌ಗಿಂತ ಭಿನ್ನವಾದ ಲಕ್ಷಣಗಳು?
Omicron ಬಗ್ಗೆ ಸಂಗ್ರಹಿಸಿದ ಆರಂಭಿಕ ಮಾಹಿತಿಯ ಪ್ರಕಾರ, Omicron ರೂಪಾಂತರದ ಸೋಂಕಿತ ರೋಗಿಗಳು ತೀವ್ರ ಆಯಾಸ, ಗಂಟಲು ನೋವು, ಸ್ನಾಯು ನೋವು ಮುಂತಾದ ಸಮಸ್ಯೆಗಳನ್ನು ಹೊಂದಿರುತ್ತಾರೆ. ಈ ರೂಪಾಂತರದ ವೈಶಿಷ್ಟ್ಯಗಳು ಡೆಲ್ಟಾ ರೂಪಾಂತರಕ್ಕಿಂತ (Delta variant) ಭಿನ್ನವಾಗಿವೆ. ಓಮಿಕ್ರಾನ್ ಸೋಂಕಿತ ವ್ಯಕ್ತಿಯ ರುಚಿ ಮತ್ತು ವಾಸನೆಯ ಸಾಮರ್ಥ್ಯದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.


ಇದನ್ನೂ ಓದಿ : ಕೊರೊನಾದಿಂದ ಚೇತರಿಸಿಕೊಂಡ ಕಮಲ್ ಹಾಸನ್,ಆಸ್ಪತ್ರೆಯಿಂದ ಬಿಡುಗಡೆ


WHO ಹೇಳಿಕೆ :
ಒಮಿಕ್ರಾನ್ ಅನ್ನು ಕಂಡುಹಿಡಿದ ದಕ್ಷಿಣ ಆಫ್ರಿಕಾದ ವೈದ್ಯರು ಪ್ರಸ್ತುತ ರೋಗಿಗಳಲ್ಲಿ ಸೌಮ್ಯವಾದ ರೋಗಲಕ್ಷಣಗಳನ್ನು ಮಾತ್ರ ಕಾಣುತ್ತಿದ್ದಾರೆ ಎಂದು ಹೇಳಲಾಗಿದೆ. ಈ ರೂಪಾಂತರದಿಂದ ಸೋಂಕಿಗೆ ಒಳಗಾದ ಜನರು ಗಂಭೀರವಾದ ಅನಾರೋಗ್ಯಕ್ಕೆ ಒಳಗಾಗಲಿಲ್ಲ. WHO ಒಮಿಕ್ರಾನ್ ಅನ್ನು 'ವೆರಿಯೇಂಟ್ ಆಫ್ ಕನ್ಸರ್ನ್ ವಿಭಾಗದಲ್ಲಿ ಇರಿಸಿದೆ. Omicron ರೂಪಾಂತರದ ಬಗ್ಗೆ ನಿಖರವಾಗಿ ಯಾವುದೂ ಸ್ಪಷ್ಟವಾಗಿಲ್ಲ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ