ಹರಿಯಾಣ : ಹರಿಯಾಣದ (Haryana) ಮಾಜಿ ಸಿಎಂ ಮತ್ತು INLD ಮುಖ್ಯಸ್ಥ ಓಂ ಪ್ರಕಾಶ್ ಚೌಟಾಲ 10 ನೇ ತರಗತಿಯ ಪರೀಕ್ಷೆ ಬರೆದಿದ್ದಾರೆ. ಹತ್ತನೇ ತರಗತಿಯಲ್ಲಿ ಪಾಸ್ ಆಗದೆ ಬಾಕಿ ಉಳಿದಿರುವ ಇಂಗ್ಲಿಷ್ ವಿಷಯದ ಪರೀಕ್ಷೆಗೆ ಅವರು ಹಾಜರಾಗಿದ್ದಾರೆ. 


COMMERCIAL BREAK
SCROLL TO CONTINUE READING

ಸಿರ್ಸಾದಲ್ಲಿ ಪರೀಕ್ಷಾ ಕೇಂದ್ರ  :
ಹರಿಯಾಣದಲ್ಲಿ, ಸಿರ್ಸಾದ ಆರ್ಯ ಕನ್ಯಾ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಪರೀಕ್ಷಾ ಕೇಂದ್ರವನ್ನು ಮಂಡಳಿಯು ಸ್ಥಾಪಿಸಿದೆ. ಅಲ್ಲಿ, ಹರ್ಯಾಣ ಶಾಲಾ ಶಿಕ್ಷಣ ಮಂಡಳಿಯ ಹತ್ತನೇ ತರಗತಿಯ ರಿ ಅಪಿಯರ್ ಮತ್ತು ಓಪನ್ ಬೋರ್ಡ್  ಪರೀಕ್ಷೆಗಳು ನಡೆಯುತ್ತಿವೆ. ಈ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ (Omprakash Chautala) ಆಗಮಿಸಿದ್ದರು. ಪರೀಕ್ಷೆ ಬರೆಯಲು ಬಂದಿರುವ ಓಂ ಪ್ರಕಾಶ್ ಚೌಟಾಲಾ ಅವರನ್ನು ಅಧಿಕಾರಿಗಳು ಸ್ವಾಗತಿಸಿದ್ದಾರೆ. 


ಇದನ್ನೂ ಓದಿ : UMANG App: ಈ app ಒಂದಿದ್ದರೆ ಕುಳಿತಲ್ಲೇ ಪಡೆದುಕೊಳ್ಳಬಹುದು ಸರ್ಕಾರಿ ಯೋಜನೆಗಳ ಲಾಭ


ಇನ್ನೂ ಬಾಕಿ ಉಳಿದಿರುವ ಇಂಗ್ಲೀಶ್ ಪೇಪರ್ : 
ಮಾಹಿತಿಯ ಪ್ರಕಾರ, ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾರವರ ಹತ್ತನೇ ತರಗತಿಯ (SSLC) ಇಂಗ್ಲಿಷ್ ವಿಷಯದ ಪೇಪರ್ ಕ್ಲಿಯರ್ ಆಗಿಲ್ಲ ಎನ್ನಲಾಗಿದೆ. ಹೀಗಾಗಿ ಅವರ XII ತರಗತಿ ಪರೀಕ್ಷೆಯ ಫಲಿತಾಂಶವನ್ನು ಸಹ ತಡೆಹಿಡಿಯಲಾಗಿದೆ.  86 ವರ್ಷದ ಓಂ ಪ್ರಕಾಶ್ ಚೌಟಾಲ ವಿಕಲಚೇತನರು ಮತ್ತು ಅವರಿಗೆ ಬರೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ ಅವರಿಗೆ ರೈಟರ್ ಅನ್ನು ಒದಗಿಸಲಾಗಿತ್ತು.


ಮಾಜಿ ಮುಖ್ಯಮಂತ್ರಿಯ ಪರೀಕ್ಷೆಯಿಂದಾಗಿ ಆರ್ಯ ಕನ್ಯಾ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಯಿತು. ಪರೀಕ್ಷಾ ಕೇಂದ್ರದೊಳಗೆ (exam center) ಮಾಧ್ಯಮಗಳಿಗೆ ಪ್ರವೇಶಿಸಲು ಅವಕಾಶವಿರಲಿಲ್ಲ. ಪರೀಕ್ಷಾ ಕೇಂದ್ರದ ಹೊರಗೆ ಪೊಲೀಸರನ್ನು ನಿಯೋಜಿಸಲಾಗಿತ್ತು. 


ಇದನ್ನೂ ಓದಿ : PM Kisan FPO Yojana: ರೈತರಿಗೆ ಸರ್ಕಾರ ನೀಡುತ್ತಿದೆ 15 ಲಕ್ಷ ರೂ. ಗಳ ನೆರವು , ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ


ಹರಿಯಾಣದ ಜೆಬಿಟಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಓಂಪ್ರಕಾಶ್ ಚೌಟಾಲ ಶಿಕ್ಷೆ ಅನುಭವಿಸುತ್ತಿದ್ದರು. ಇತ್ತೀಚೆಗಷ್ಟೇ  ತನ್ನ ಶಿಕ್ಷೆಯನ್ನು ಮುಗಿಸಿ ತಿಹಾರ್ ಜೈಲಿನಿಂದ (Jail) ಹೊರ ಬಂದಿದ್ದಾರೆ  ಅಂದಿನಿಂದ, ಅವರು ರಾಜ್ಯದಲ್ಲಿ ರಾಜಕೀಯದಲ್ಲಿ ಮತ್ತೆ ತಮ್ಮ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ