ಯಾವ ಆಪ್ ಮೇಲೆ ಭಾರತೀಯರು ಹೆಚ್ಚು ಹಣ ಉಡಾಯಿಸುತ್ತಿದ್ದಾರೆ ಗೊತ್ತಾ?
ಭಾರತೀಯರು ಡೇಟಿಂಗ್ ಹಾಗೂ ಫ್ಲರ್ಟಿಂಗ್ ಮೇಲೆ ಹೆಚ್ಚು ಹಣ ವ್ಯಯಿಸುತ್ತಾರೆ. ಹೀಗಂತ ನಾವು ಹೇಳ್ತಿಲ್ಲ. ಆಪ್ ಆನಿ (App Annie) ಹೆಸರಿನ ಅಂತಾರಾಷ್ಟ್ರೀಯ ಕಂಪನಿ ತನ್ನ ವರದಿಯಲ್ಲಿ ಹೇಳಿದೆ.
ನವದೆಹಲಿ: ಭಾರತದಲ್ಲಿ ಒಂದು ವೇಳೆ ನೀವು ಜನರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಆಪ್ ವೊಂದನ್ನು ಹಣ ನೀಡಿ ಡೌನ್ಲೋಡ್ ಮಾಡಿಕೊಳ್ಳಲು ಹೇಳಿದರೆ, ಜನರು ಯಾವುದೇ ಯೋಚನೆ ಮಾಡದೆ ಇಲ್ಲ ಎಂದು ಹೇಳುತ್ತಾರೆ. ಆದರೆ, ಅದೇ ಜನರಿಗೆ ಡೇಟಿಂಗ್ ಆಪ್ ವೊಂದರ ಮೇಲೆ ಹಣ ಖರ್ಚು ಮಾಡಲು ಹೇಳಿದರೆ ಥಟ್ ಅಂತ ಡೌನ್ಲೋಡ್ ಮಾಡುತ್ತಾರೆ. ಹೀಗಂತ ನಾವು ನಿಮಗೆ ಹೇಳುತ್ತಿಲ್ಲ. ಇತ್ತೀಚೆಗಷ್ಟೇ ಆಪ್ ಆನಿ ಹೆಸರಿನ ಅಂತಾರಾಷ್ಟ್ರೀಯ ಕಂಪನಿಯೊಂದು ವರದಿಯೊಂದನ್ನು ಪ್ರಕಟಿಸಿದ್ದು, ಭಾರತೀಯರು 'ಟಿಂಡರ್' ಹೆಸರಿನ ಡೇಟಿಂಗ್ ಆಪ್ ಮೇಲೆ ಹೆಚ್ಚು ಹಣ ಉಡಾಯಿಸುತ್ತಾರೆ ಎಂದು ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.
ನೌಕರಿ ಹಾಗೂ ಮನರಂಜನೆಯ ಮೇಲೆ ಕಡಿಮೆ ವೆಚ್ಚ
ಭಾರತದಲ್ಲಿ ಜನರು ಹಣ ಖರ್ಚು ಮಾಡುವ ವಿಷಯದಲ್ಲಿ ತುಂಬಾ ಕ್ಲೀಯರ್ ಆಗಿದ್ದಾರೆ ಎಂದು ವರದಿ ಹೇಳಿದೆ. 'ಟಿಂಡರ್' ಮೇಲೆ ಹೆಚ್ಚು ಹಣ ವ್ಯಯಿಸುವ ಜನರು, ಮನರಂಜನೆಗಾಗಿಯೇ ಇರುವ Netflix ಹಾಗೂ Hotstar ಹಣ ವ್ಯಯಿಸಲು ಹಿಂದೇಟು ಹಾಕುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ತುಂಬಾ ಪ್ರಚಲಿತವಾಗಿರುವ Linkedin, ಹಣ ನೀಡಿ ಬಳಕೆಯಾಗುವ ಟಾಪ್ 10 ಆಪ್ ಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
Tinder ಅಂದ್ರೆ ಏನು?
Tinder ಡೇಟಿಂಗ್ ಗಾಗಿ ಬಳಸಲ್ಪಡುವ ಜಗತ್ತಿನ ಅತ್ಯಂತ ಪ್ರಚಲಿತ ಆಪ್ ಗಳಲ್ಲಿ ಮೊದಲನೆಯದ್ದಾಗಿದೆ. ಹೆಚ್ಚಿನ ಪುರುಷ ಮತ್ತು ಮಹಿಳೆಯರು ಡೇಟಿಂಗ್ ನಡೆಸಲು ಈ ಆಪ್ ಬಳಸುತ್ತಾರೆ. ಡೇಟ್ ನಡೆಸಲು Tinder ಅವಶ್ಯಕವಿರುವ ಮಾಹಿತಿಗಳಾದ ನಿಮ್ಮ ಇಷ್ಟ, ನಿಮ್ಮ ಹಾಬಿ ಹಾಗೂ ವಿಚಾರಧಾರೆ ಇತ್ಯಾದಿಗಳನ್ನು ಪ್ರಸ್ತುತಪಡಿಸುತ್ತದೆ. ಒಂದು ವೇಳೆ ಓರ್ವ ಬಳಕೆದಾರರು ಬೇರೆ ಬಳಕೆದಾರರ ಪ್ರೊಫೈಲ್ ಮೆಚ್ಚಿಕೊಂಡರೆ ಅದನ್ನು ಅವರು ಪ್ರೊಫೈಲ್ ಅನ್ನು ಬಲಭಾಗಕ್ಕೆ ಸ್ವೈಪ್ ಮಾಡುತ್ತಾರೆ.ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಈ ಆಪ್ ಸಕ್ಕತ್ತಾಗಿ ಬಳಕೆಯಾಗುತ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ Whatsapp ಹಾಗೂ Facebook ಅತಿ ಹೆಚ್ಚು ಬಳಕೆಯಾಗುತ್ತಿರುವ ಆಪ್ ಗಳಾಗಿವೆ. ಈ ಪಟ್ಟಿಯಲ್ಲಿ ಫೇಸ್ ಬುಕ್ ಮೊದಲ ಸ್ಥಾನದಲ್ಲಿದ್ದರೆ, ವಾಟ್ಸ್ ಆಪ್ ಎರಡನೇ ಸ್ಥಾನದಲ್ಲಿದೆ. ಫೇಸ್ ಬುಕ್ ಮೆಸ್ಸೆಂಜರ್ ಹಾಗೂ ಶೇರ್ ಇಟ್ ಕ್ರಮೇಣ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.