ಹೈದರಾಬಾದ್: ಪಂಚರಾಜ್ಯಗಳ ಮತಎಣಿಕೆ ಪ್ರಕ್ರಿಯೆ ಭರದಿಂದ ಮುಂದುವರೆದಿದ್ದು, ನಿರೀಕ್ಷೆಯಂತೆ ತೆಲಂಗಾಣದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್​ಎಸ್(ತೆಲಂಗಾಣ ರಾಷ್ಟ್ರೀಯ ಸಮಿತಿ) ಭರ್ಜರಿ ಮುನ್ನಡೆ ಸಾಧಿಸಿದೆ. ಈಗಾಗಲೇ 91 ಸ್ಥಾನಗಳಲ್ಲಿ ಟಿಆರ್​ಎಸ್ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 16, ಬಿಜೆಪಿ 4 ಮತ್ತು ಇತರೆ 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.


COMMERCIAL BREAK
SCROLL TO CONTINUE READING

ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಂದ್ರಶೇಖರ ರಾವ್ ಆವರು, ಬಳಿಕ ನೂತನ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ, ಅವಧಿಗೆ ಮೊದಲೇ ಕೆ.ಚಂದ್ರಶೇಖರ್ ರಾವ್ ಅವರು ವಿಧಾನಸಭೆಯನ್ನು ವಿಸರ್ಜಿಸಿದ್ದರ ಪರಿಣಾಮವಾಗಿ ಚುನಾವಣೆ ಘೋಷಣೆಯಾಗಿತ್ತು. ಆದಾಗ್ಯೂ, ರಾಜ್ಯದಲ್ಲಿ ಎರಡನೇ ಬಾರಿಗೆ ಕೆ.ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ. 


ತೆಲಂಗಾಣದಲ್ಲಿ ತನ್ನ ಅಸ್ತಿತ್ವ ಸಾಧಿಸಿರುವ ಟಿಆರ್ಎಸ್ ಪಕ್ಷವನ್ನು ಹಿಂದಿಕ್ಕಿ ಈ ಬಾರಿ ಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲೇಬೇಕೆಂದು ಕಾಂಗ್ರೆಸ್ ಸಾಕಷ್ಟು ಪ್ರಚಾರ ನಡೆಸಿದ್ದರೂ ಮತದಾರ ಟಿಆರ್ಎಸ್ ಪರವಾಗಿದ್ದಾನೆ. ಹೀಗಾಗಿ ಕಾಂಗ್ರೆಸ್ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿದೆ. ಕಳೆದ ಚುನಾವಣೆಯಲ್ಲಿ ಟಿಆರ್ ಎಸ್ 119 ಸದಸ್ಯ ಬಲ ಹೊಂದಿದ್ದ ವಿಧಾನಸಭೆಯಲ್ಲಿ 63 ಸ್ಥಾನ ಪಡೆದು ಅಧಿಕಾರಕ್ಕೇರಿತ್ತು. ಕಾಂಗ್ರೆಸ್ ಪಕ್ಷ 21 ಸ್ಥಾನ ಪಡೆದಿದ್ದು, ನಾಯ್ಡು ನೇತೃತ್ವದ ಟಿಡಿಪಿ 15 ಸ್ಥಾನ ಪಡೆದಿತ್ತು.


ತೆಲಂಗಾಣದ ಒಟ್ಟು 119 ವಿಧಾನಸಭಾ ಕ್ಷೇತ್ರಗಳಿಗೆ ಡಿ.7ಕ್ಕೆರಂದು ಚುನಾವಣೆ ನಡೆದು, ಶೇ.73.2 ರಷ್ಟು ಮತದಾನವಾಗಿತ್ತು.