ಚೆನ್ನೈ: ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದಡಿ  ಕೇಂದ್ರವು ಶೀಘ್ರದಲ್ಲೇ ‘ಒಂದು ರಾಷ್ಟ್ರ, ಒಂದು ಡಯಾಲಿಸಿಸ್ ಕಾರ್ಯಕ್ರಮ’ ಪ್ರಾರಂಭಿಸಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ. 2 ದಿನಗಳ ತಮಿಳುನಾಡು ಮತ್ತು ಪುದುಚೆರಿ ಪ್ರವಾಸದಲ್ಲಿರುವ ಮಾಂಡವೀಯ, ಓಮಂಡೂರರ್ ಎಸ್ಟೇಟ್‌ನಲ್ಲಿರುವ ಸರ್ಕಾರಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.


COMMERCIAL BREAK
SCROLL TO CONTINUE READING

‘ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಯೋಜನೆಯಡಿ ಶೀಘ್ರವೇ ‘ಒನ್ ನೇಷನ್, ಒನ್ ಡಯಾಲಿಸಿಸ್ ಯೋಜನೆ’ ಜಾರಿಗೆ ಬರಲಿದೆ. ಈ ಕಾರ್ಯಕ್ರಮದಡಿ ಯಾವುದೇ ರೋಗಿ ದೇಶದ ಯಾವುದೇ ಭಾಗದಲ್ಲಿ ಅತ್ಯಂತ ಸುಲಭವಾಗಿ ಡಯಾಲಿಸಿಸ್ ಮಾಡಿಸಬಹುದಾಗಿದೆ’ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಸಂಜಯ್‌ ರಾವತ್‌ಗೆ ಸಮನ್ಸ್‌ ನೀಡಿದ ಇಡಿ!


ಚೆನ್ನೈನಲ್ಲಿನ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೊಬೋಟಿಕ್ ಸರ್ಜರಿ ಯಂತ್ರವನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಅವದಿಯಲ್ಲಿ ಸಿಜಿಹೆಚ್ಎಸ್ ವೆಲ್ನೆಸ್ ಕೇಂದ್ರ ಹಾಗೂ ಪ್ರಯೋಗಾಲಯಕ್ಕೆ ಮನ್ಸುಖ್ ಮಾಂಡವೀಯ ಶಂಕುಸ್ಥಾಪನೆ ನೆರವೇರಿಸಿದರು. ಆಸ್ಪತ್ರೆಯು 2 ಶಸ್ತ್ರಚಿಕಿತ್ಸಕ ಕನ್ಸೋಲ್‌ಗಳನ್ನು (ರೊಬೊಟಿಕ್ಸ್ ನೆರವಿನ ಶಸ್ತ್ರಚಿಕಿತ್ಸೆಗೆ ಅಗತ್ಯವಿದೆ) ಹೊಂದಿರುವ ಏಕೈಕ ಕೇಂದ್ರವಾಗಿದೆ. ತಾಯಂದಿರ ಮರಣ ದರ (MMR) ಗುರಿ ಸಾಧಿಸಿದ್ದಕ್ಕಾಗಿ ತಮಿಳುನಾಡಿಗೆ ಅಭಿನಂದನೆ ತಿಳಿಸಿದರು. ಶಿಶು ಮರಣ ಪ್ರಮಾಣ (IMR) ಉಳಿದ ರಾಜ್ಯಗಳಿಗಿಂತ ಬಹಳ ಮುಂದಿದೆ ಎಂದು ಹೇಳಿದರು. ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಕೇಂದ್ರವು ತಮಿಳುನಾಡಿಗೆ 2,600 ಕೋಟಿ ರೂ. ಮತ್ತು ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿ ರಾಜ್ಯದ ವೈದ್ಯಕೀಯ ಮೂಲಸೌಕರ್ಯ ಸುಧಾರಿಸಲು 404 ಕೋಟಿ ರೂ. ನಿಗದಿಪಡಿಸಿದೆ ಎಂದು ಇದೇ ವೇಳೆ ಅವರು ತಿಳಿಸಿದರು.


ಸುಪ್ರೀಂ ಮೆಟ್ಟಿಲೇರಿದ ʼಮಹಾʼರಾಜಕೀಯ: ಶಿಂಧೆ ಬಣದಿಂದ ವಾದ ಮಂಡನೆ


ತಮಿಳುನಾಡಿನ್ಲಲಿ ಸುಮಾರು 1.58 ಕೋಟಿ ಕುಟುಂಬಗಳು ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಒಳಪಡುತ್ತವೆ ಮತ್ತು 75 ಲಕ್ಷ ಜನರು ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. ಟಿಬಿ ರೋಗಿ/ಗ್ರಾಮ ದತ್ತು ಸ್ವೀಕಾರ ಯೋಜನೆಯಾದ ನಿಕ್ಷಯ ಮಿತ್ರ ಅಭಿಯಾನವನ್ನು ಬೆಂಬಲಿಸುವಂತೆ ಅವರು ಜನರಿಗೆ ಮನವಿ ಮಾಡಿದರು. ತಮಿಳುನಾಡಿನಲ್ಲಿ ಸುಮಾರು 50 ಸಾವಿರ ಜನರು TB ಯಿಂದ ಬಳಲುತ್ತಿದ್ದಾರೆ.


ತಮಿಳುನಾಡಿನ 17 ಜಿಲ್ಲೆಗಳಲ್ಲಿ ಮಲೇರಿಯಾ ಶೂನ್ಯ ಪ್ರಕರಣಗಳು ದಾಖಲಾಗಿವೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು. ಆದಾಗ್ಯೂ, ಮಲೇರಿಯಾ, ಚಿಕೂನ್‌ಗುನ್ಯಾ ಮತ್ತು ಡೆಂಗ್ಯೂ ನಿರ್ಮೂಲನೆಗೆ ಆರೋಗ್ಯ ಅಧಿಕಾರಿಗಳು ಎಚ್ಚರವಹಿಸಿ ತಮ್ಮ ಕೆಲಸವನ್ನು ಮುಂದುವರಿಸಬೇಕೆಂದು ಅವರು ಸೂಚಿಸಿದರು. ಕೋವಿಡ್ -19 ನಲ್ಲಿ ದಕ್ಷಿಣ ರಾಜ್ಯಗಳು ಇಲ್ಲಿಯವರೆಗೆ 11.26 ಕೋಟಿ ಡೋಸ್‌ಗಳಷ್ಟು ಲಸಿಕೆ ನೀಡಿವೆ ಎಂದು ಮಾಂಡವಿಯಾ ಹೇಳಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ