ನವದೆಹಲಿ: ನಾಳೆಯಿಂದ ಇಡೀ ದೇಶಾದ್ಯಂತ ಒನ್ ನೇಶನ್ ಒನ್ ಕಾರ್ಡ್ ವ್ಯವಸ್ಥೆ ಜಾರಿಗೆ ಬರಲಿದೆ. ದೇಶದ ಸುಮಾರು 20 ರಾಜ್ಯಗಳಲ್ಲಿ ಆರಂಭಗೊಳ್ಳಲಿರುವ ಈ ಯೋಜನೆ ಪ್ರಮುಖವಾಗಿ 67 ಕೋಟಿ ಬಡ ಜನರಿಗೆ ನೇರ ಲಾಭ ಒದಗಿಸಲಿದೆ. ಕೇಂದ್ರ ಸರ್ಕಾರದ ಒನ್ ನೇಶನ್-ಒನ್ ರೇಷನ್ ಕಾರ್ಡ್ ಯೋಜನೆಯಿಂದ ಮೂಲ ರಾಜ್ಯದ ಹೊರತಾಗಿ ಇತರೆ ರಾಜ್ಯಗಳಲ್ಲಿಯೂ ಕೂಡ ಸರ್ಕಾರಿ ಪಡಿತರ ಅಂಗಡಿಯಿಂದ ನೀವು ಪಡಿತರವನ್ನು ಪಡೆಯಬಹುದಾಗಿದೆ. ಇತ್ತೀಚೆಗಷ್ಟೇ 20 ಲಕ್ಷ ಕೋಟಿ ರೂ.ಬೃಹತ್ ಪ್ಯಾಕೇಜ್ ಘೋಷಿಸಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಉಲ್ಲೇಖ ಮಾಡಿದ್ದರು.


COMMERCIAL BREAK
SCROLL TO CONTINUE READING

ಆರಂಭಗೊಳ್ಳಲಿದೆ ಒನ್ ನೇಶನ್- ಒನ್ ರೇಶನ್ ಕಾರ್ಡ್
ದೇಶಾದ್ಯಂತ ಇರುವ ಪಡಿತರ ಚೀಟಿಗಳಿಗಾಗಿ ಜೂನ್ 1ರಿಂದ ಒನ್ ನೇಶನ್-ಒನ್ ರೇಷನ್ ಕಾರ್ಡ್ ಸಂಪೂರ್ಣವಾಗಿ ಜಾರಿಗೆ ಬರಲಿದೆ. ಇದರಿಂದ ನಿಮ್ಮ ಪಡಿತರ ಚೀಟಿ ಯಾವುದೇ ರಾಜ್ಯಕ್ಕೆ ಸಂಬಂಧಪಟ್ಟಿದ್ದರೂ ಕೂಡ ನೀವು ಇತರ ಯಾವುದೇ ಅಥವಾ ದೇಶದ ಯಾವುದೇ ಮೂಲೆಯಲ್ಲಿರುವ ಸರ್ಕಾರಿ ಅಂಗಡಿಯಿಂದ ಪಡಿತರವನ್ನು ಪಡೆಯಬಹುದಾಗಿದೆ. ಇದರಿಂದ ದೇಶಾದ್ಯಂತ ಇರುವ 67 ಕೋಟಿ ಬಡವರಿಗೆ ಭಾರಿ ಲಾಭ ತಲುಪಲಿದೆ.


ಈ ಯೋಜನೆಯಡಿ ರೇಶನ್ ಕಾರ್ಡ್ ಧಾರಕರಿಗೆ ಐದು ಕಿಲೋ ಅಕ್ಕಿ ಕೇವಲ ಮೂರು ರೂ. ದರದಲ್ಲಿ ಹಾಗೂ ಗೋಧಿ ಎರಡು ರೂ.ದರದಲ್ಲಿ ಸಿಗಲಿದೆ. ಹೀಗಾಗಿ ಕಾರ್ಡ್ ಒಟ್ಟು ಎರಡು ಭಾಷೆಗಳಲ್ಲಿ ಅಂದರೆ ಒಂದು ಸ್ಥಳೀಯ ಮತ್ತು ಎರಡನೆಯದಾಗಿ ಹಿಂದಿ/ಇಂಗ್ಲಿಷ್ ಭಾಷೆಯಲ್ಲಿ ಜಾರಿಗೊಳ್ಳಲಿದೆ.


ಇತ್ತೀಚೆಗಷ್ಟೇ ಈ ಯೋಜನೆಯ ಕುರಿತು ಉಲ್ಲೇಖಿಸಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಯಾರ ಬಳಿ ರೇಷನ್ ಕಾರ್ಡ್ ಇಲ್ಲವೋ, ಅವರಿಗೂ ಕೂಡ 5 ಕೆ.ಜಿ ಗೋಧಿ ಅಥವಾ ಅಕ್ಕಿ ಹಾಗೂ ಒಂದು ಕೆ.ಜಿ ಬೆಳೆ ನೀಡಲಾಗುವುದು ಎಂದು ಹೇಳಿದ್ದರು, ಲಾಕ್ ಡೌನ್ ನಿಂದ ತಮ್ಮ ತಮ್ಮ ಮನೆಗಳಿಗೆ ಮರಳುತ್ತಿರುವ ವಲಸೆ ಕಾರ್ಮಿಕರಿಗೆ ಇದರಿಂದ ಭಾರಿ ನೆಮ್ಮದಿ ಸಿಗಲಿದೆ ಎಂದು ಸಚಿವೆ ಹೇಳಿದ್ದರು. ಇದರಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 3,500 ಕೋಟಿ ರೂ. ಅತಿರಿಕ್ತ ಭಾರ ಬೀಳಲಿದೆ ಎಂದು ಅವರ ಹೇಳಿ ಮುಂದಿನ ಎರಡು ತಿಂಗಳುಗಳಲ್ಲಿ ಈ ಪ್ರಕ್ತಿಯೇ ನಡೆದು, ಯೋಜನೆ ಜಾರಿಗೆ ಬರಲಿದೆ ಎಂದಿದ್ದರು.


ಯೋಜನೆಯಿಂದ ಲಾಭವೇನು?
ಈ ಯೋಜನೆಯ ಅತಿ ಹೆಚ್ಚು ಲಾಭ ಬಡವರಿಗೆ ಸಿಗಲಿದೆ.
ಒಂದು ರಾಜ್ಯದಿಂದ ಇತರೆ ರಾಜ್ಯಗಳಿಗೆ ವಲಸೆ ಹೋಗುವರಿಗೆ ಇದರ ಲಾಭ ಸಿಗಲಿದೆ.
ನಕಲಿ ಪಡಿತರ ಚೀಟಿ ತಯಾರಿಸುವಿಕೆಯ ಮೇಲೂ ಕಡಿವಾಣ ಬೀಳಲಿದೆ. 
ಎಲ್ಲ ರೇಶನ್ ಕಾರ್ಡ್ ಗಳನ್ನು ಅಧಾರ ಕಾರ್ಡ್ ಜೊತೆಗೆ ಜೋಡಿಸಲು ಹಾಗೂ ಪಾಯಿಂಟ್ ಆಫ್ ಸೇಲ್ಸ್ ಯಂತ್ರಗಳ ಸಹಾಯದಿಂದ ಆಹಾರ ಧಾನ್ಯ ವಿತರಣೆ ಇದರಿಂದ ಸಾಧ್ಯವಾಗಲಿದೆ.
ಶೇ.85ರಷ್ಟು ಆಧಾರ್ ಕಾರ್ಡ್ ಗಳು ಈಗಾಗಲೇ ಪಾಯಿಂಟ್ ಆಫ್ ಸೇಲ್ಸ್ ಯಂತ್ರಗಳ ಜೊತೆಗೆ ಜೋಡಣೆಯಾಗಿವೆ.
22 ರಾಜ್ಯಗಳಲ್ಲಿಯೂ ಕೂಡ ಈಗಾಗಲೇ ಶೇ.100ರಷ್ಟು ಪಿಓಎಸ್ ಯಂತ್ರಗಳನ್ನು ಅಳವಡಿಸಲಾಗಿದೆ.


ಸಂಪೂರ್ಣ ಸ್ಕೀಮ್ ಏನು?
ಈ ಯೋಜನೆಯಿಂದ ಸಾಮಾನ್ಯ ನಾಗರಿಕರು ಯಾವುದೇ ಪಡಿತರ ಅಂಗಡಿಯಲ್ಲಿ ಬಂಧನ ಇರುವುದಿಲ್ಲ ಹಾಗೂ ಅಂಗಡಿ ಮಾಲೀಕರ ಮೇಲೆ ಅವಲಂಭನೆ ತಪ್ಪಲಿದೆ. ಇದರ ಜೊತೆಗೆ ಭ್ರಾಷ್ಟಾಚಾರಕ್ಕೂ ಕೂಡ ಕಡಿವಾಣ ಬೀಳಲಿದೆ. ಈ ಸ್ಕೀಮ್ ಅಡಿ ಸರ್ಕಾರ ಎಲ್ಲ ಪಡಿತರ ಚೀಟಿಗಳಿಗೆ ಕೇಂದ್ರೀಯ ಭಂಡಾರ ರಚಿಸಿ ಹಾಗೂ ಅವುಗಳನ್ನು ಅಧಾರ ಕಾರ್ಡ್ ಜೊತೆಗೆ ಜೋಡಿಸಿ, ಸಂಪೂರ್ಣ ಪೋರ್ಟೆಬಿಲಿಟಿ ಸೌಕರ್ಯ ಒದಗಿಸಲಿದೆ. ಇದರಿಂದ ಜನರಿಗೆ ಮತ್ತಷ್ಟು ಅನುಕೂಲವಾಗಲಿದ್ದು, ಯಾವುದೇ ಒಂದು ಪಡಿತರ ಅಂಗಡಿಗೆ ಅವರ ಪಡಿತರ ಚೀಟಿ ಸೀಮಿತವಾಗುವುದು ತಪ್ಪಲಿದೆ.