ಮುಂಬೈ: ನಿಮಗೆಲ್ಲಾ ನೆನಪಿರಬಹುದು ಆ ನೋಟು ಕಂಡಾಕ್ಷಣ ನಮ್ಮ ಸಂಭ್ರಮ ಮತ್ತು ಸಂತಸ ಇಮ್ಮಡಿಯಾಗುತ್ತಿದ್ದ  ದಿನಗಳು ಕಳೆದು ಈಗ ದಶಕಗಳೇ ಆಗಿವೆ ಅಲ್ಲವೇ?.. ಹೌದು,ನಿಮ್ಮ ಊಹೆ ಕಂಡಿತಾ ನಿಜ. ಕಾರಣವಿಷ್ಟೇ ಆ ನೋಟಿಗೆ ಇಂದಿಗೆ ನೂರು ವರ್ಷಗಳು ತುಂಬುತ್ತಿವೆ. ಈ ಹಿನ್ನಲೆಯಲ್ಲಿ ಅದರ ಇತಿಹಾಸದ ಒಂದು ಕಿರುನೋಟ ಇಲ್ಲಿದೆ. 


COMMERCIAL BREAK
SCROLL TO CONTINUE READING

ಇಲ್ಲಿವೆ ಈ ಶತಮಾನದ ನೋಟಿನ ಕುರಿತಾದ ರೋಚಕ ಸಂಗತಿಗಳು 


* ಈ ಒಂದು ರೂಪಾಯಿ ನೋಟಿನ ಇತಿಹಾಸದ ಹಿನ್ನಲೆಯನ್ನು ಗಮನಿಸಿದಾಗ  ಮೊದಲ ಬಾರಿಗೆ ಈ ನೋಟು ನವೆಂಬರ್ 30 1917 ರಲ್ಲಿ  ಕಿಂಗ್ ಜಾರ್ಜ್ V  ರವರ ಫೋಟೋದೊಂದಿಗೆ ಪ್ರಕಟವಾಗಿತ್ತು.


* ಈ ನೋಟು ಒಂದೇ, ರಿಸರ್ವ್ ಬ್ಯಾಂಕ್ ಬದಲಾಗಿ  ಭಾರತ ಸರ್ಕಾರದ ಅಡಿಯಲ್ಲಿ ಮುದ್ರಿಸಲಾಗುತ್ತದೆ.
* ಮೊದಲನೆಯ ಜಾಗತಿಕ ಯುದ್ದದಲ್ಲಿ  ನಾಣ್ಯದ ಕೊರತೆಯ ಕಾರಣದಿಂದಾಗಿ ಆಗಿನ ವಸಾಹತು ಬ್ರಿಟಿಷ್ ಸರ್ಕಾರವು ಒಂದು ರೂಪಾಯಿ ನೋಟನ್ನು ಮುದ್ರಿಸಲು ಪ್ರಾರಂಭಿಸಿದರು.


*  ಮೊದಲ ಬಾರಿಗೆ ಈ ನೋಟನ್ನು 1926 ರಲ್ಲಿ ಸ್ಥಗಿತಗೊಳಿಸಲಾಗಿತ್ತು,ಆದರೆ ಇದರ ಅನೂಕೂಲತೆ ಕಾರಣದಿಂದಾಗಿ  1940 ರಲ್ಲಿ ಮರು ಮುದ್ರಿಸಲು ಪ್ರಾರಂಭಿಸಲಾಯಿತು.ಅಲ್ಲಿಂದ 1994ರ ವರೆಗೆ ಇದು ಚಾಲನೆಯಲ್ಲಿ ಇತ್ತು .ವಿಶೇಷವೆಂದರೆ ಇದನ್ನು 2015ರಿಂದ ಮತ್ತೆ ಮುದ್ರಿಸಲಾಗುತ್ತಿದೆ.


* ಈ ನೋಟಿನ ಮೇಲೆ ರಿಸೆರ್ವ್ ಬ್ಯಾಂಕಿನ ಗವರ್ನರ್ ಸಹಿ ಗುರುತಿನ ಬದಲಾಗಿ ಹಣಕಾಸು ಕಾರ್ಯದರ್ಶಿಗಳ ಸಹಿ ಇರುತ್ತದೆ.
* ಈ ನೋಟು ಬೆಳ್ಳಿಯ ನಾಣ್ಯದ ಒಂದು ರೂಪಾಯಿಗೆ  ಪರ್ಯಾಯವಾಗಿ ಜಾರಿಗೆ ಬಂತು 
* ಮೊದಲನೆಯ ಜಾಗತಿಕ ಯುದ್ದದ ಸಂಧರ್ಭದಲ್ಲಿ  ಬೆಳ್ಳಿಯ ಬೆಲೆಯ ಹೆಚ್ಚಳದಿಂದಾಗಿ ಈ ನೋಟನ್ನು ಮುದ್ರಿಸಲಾಯಿತು ಅಂದಿನಿಂದ ಆಯಾ ವರ್ಷದ ನಾಣ್ಯದ ಫೋಟೋವನ್ನು ಆ ನೋಟಿನ ಮೇಲೆ ಮುದ್ರಿಸಲಾಗುತ್ತಿದೆ.
* ಮೊದಲು ನೋಟು  ಬ್ರಿಟಿಷ ಸರ್ಕಾರದಲ್ಲಿ ಹಣಕಾಸು ಕಾರ್ಯದರ್ಶಿಗಳಾಗಿದ್ದ ಎಂ.ಎಂ.ಎಸ್.ಗುಬ್ಬೆ ಮತ್ತು ಎ.ಸಿ ಮ್ಯಾಕ್ ವಾಟರ್ಸ್,ಎಚ್ ಡೆನ್ನಿಂಗ ರವರ ಸಹಿಯನ್ನು ಒಳಗೊಂಡಿತ್ತು.
* ಹಲವು ಬಾರಿಗೆ ಸ್ಥಗೀತಗೊಂಡು ಪುನಃ  ಪ್ರಾರಂಭಗೊಂಡಿದೆ.  
* 1940 ,1949 ಮತ್ತು ಕೊನೆಯದಾಗಿ 2016ರಲ್ಲಿ  ತನ್ನ ವಿನ್ಯಾಸವನ್ನು ಬದಲಾಯಿಸಿದೆ.