ನವದೆಹಲಿ: ದೇಶಾದ್ಯಂತ ಈರುಳ್ಳಿ ಬೆಲೆ ಆಕಾಶ ಮುಟ್ಟಿದ್ದು, ಈರುಳ್ಳಿ ಕೊಳ್ಳುವವರ ಕಣ್ಣಲ್ಲೇ ನೀರು ಬರುತ್ತಿದೆ. ಸೇಬಿನ ಬೆಲೆಯಲ್ಲಿ ಮಾರಾಟವಾಗುತ್ತಿರುವ ಈರುಳ್ಳಿಯಿಂದಾಗಿ ಅಸಮಾಧಾನಗೊಂಡಿರುವ ಜನರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಅಗ್ಗದ ಈರುಳ್ಳಿಯನ್ನು ಪ್ರತಿ ಕೆ.ಜಿ.ಗೆ 22 ರೂ.ಗೆ ಮಾರಾಟ ಮಾಡುತ್ತಿದೆ. ಇದರಿಂದಾಗಿ ಜನ ಈರುಳ್ಳಿ ಖರೀದಿಸಲು ಕೆಲಸ ಬಿಟ್ಟು ಲೈನ್‌ನಲ್ಲಿ ನಿಂತಿರುವ ದೃಶ್ಯ ಹಲವೆಡೆ ಕಂಡು ಬಂದಿದೆ.


COMMERCIAL BREAK
SCROLL TO CONTINUE READING

ಅಗ್ಗದ ಈರುಳ್ಳಿ ಬೆಳಿಗ್ಗೆ 10 ರಿಂದ ಲಭ್ಯ:
ರಾಷ್ಟ್ರೀಯ ಸಹಕಾರ ಗ್ರಾಹಕ ಒಕ್ಕೂಟದ (ಎನ್‌ಸಿಸಿಎಫ್) ಹಲವಾರು ವ್ಯಾನ್‌ಗಳು ದೆಹಲಿಯ ವಿವಿಧ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅಗ್ಗದ ಈರುಳ್ಳಿ ಮಾರಾಟದಲ್ಲಿ ತೊಡಗಿವೆ. ಪ್ರತಿ ಕೆಜಿಗೆ 22 ರೂ. ದರದಲ್ಲಿ, ಪ್ರತಿ ವ್ಯಕ್ತಿಗೆ ಕೇವಲ 2 ಕೆಜಿ ಈರುಳ್ಳಿ ನೀಡಲಾಗುತ್ತಿದೆ. ದೆಹಲಿಯಲ್ಲಿ,  ಚಿಲ್ಲರೆ ವ್ಯಾಪಾರ ಮಳಿಗೆಗಳಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ 80 ರೂ.


ವಾಸ್ತವವಾಗಿ, ಈ ವರ್ಷ ಪ್ರವಾಹದಿಂದಾಗಿ, ಹೆಚ್ಚಿನ ಈರುಳ್ಳಿ ಉತ್ಪಾದಿಸುವ ರಾಜ್ಯಗಳಲ್ಲಿ ಈರುಳ್ಳಿಯ ಹೊಸ ಬೆಳೆ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಈ ಕಾರಣದಿಂದಾಗಿ, ಈರುಳ್ಳಿ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ವ್ಯಾಪಾರಿಗಳು ಈರುಳ್ಳಿ ದಾಸ್ತಾನು ಸಂಗ್ರಹಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಮುಂಬರುವ ದಿನಗಳಲ್ಲಿ ಬೆಲೆ ಇನ್ನೂ ಅಧಿಕವಾಗುವ ಎಲ್ಲ ಸಾಧ್ಯತೆಗಳಿವೆ. ಮುಂದಿನ 1 ತಿಂಗಳವರೆಗೆ ಈರುಳ್ಳಿ ಬೆಲೆ ಹೆಚ್ಚಾಗುತ್ತದೆ ಎಂದು ವ್ಯಾಪಾರಿಗಳು ನಂಬಿದ್ದಾರೆ. ಕರ್ನಾಟಕದಲ್ಲಿ ಈರುಳ್ಳಿ ಬೆಳೆ ನಾಶದಿಂದಾಗಿ ಈರುಳ್ಳಿ ಬೆಲೆ ಏರಿಕೆಯಾಗಿದೆ.