ನವದೆಹಲಿ: ಫೆಬ್ರವರಿಯಲ್ಲಿ ಹೊರಡಿಸಲಾದ ಹೊಸ ಡಿಜಿಟಲ್ ಮಾಧ್ಯಮ ನಿಯಮಗಳ ಅನುಸರಣೆ ಕುರಿತು ವಿವರಗಳನ್ನು ಒದಗಿಸಲು ಆನ್‌ಲೈನ್ ಸುದ್ದಿ ಪ್ರಕಾಶಕರು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 15 ದಿನಗಳ ಕಾಲಾವಕಾಶ ನೀಡಿದೆ.


COMMERCIAL BREAK
SCROLL TO CONTINUE READING

ನಿನ್ನೆ, ಸಾಮಾಜಿಕ ಮಾಧ್ಯಮ (Social Media) ಪ್ಲಾಟ್‌ಫಾರ್ಮ್‌ಗಳಿಗೆ ಇದೇ ರೀತಿಯ ಅನುಸರಣೆ ವರದಿಗಳನ್ನು 24 ಗಂಟೆಗಳಲ್ಲಿ ಸಲ್ಲಿಸಲು ಕೇಳಲಾಯಿತು.ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಮೇಲ್ಮನವಿಗಳನ್ನು ಸಲ್ಲಿಸಿವೆ.


ಫೆಬ್ರವರಿಯಲ್ಲಿ, ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳ ಮಾರ್ಗದರ್ಶಿ ಮತ್ತು ಡಿಜಿಟಲ್ ಮಾಧ್ಯಮದ ನೀತಿ ಸಂಹಿತೆ) ನಿಯಮಗಳು, 2021 (Information Technology (Guidelines for Intermediaries and Digital Media Ethics Code) Rules, 2021) ಮೊದಲ ಬಾರಿಗೆ ಡಿಜಿಟಲ್ ಸುದ್ದಿ ಸಂಸ್ಥೆಗಳು, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ನೆಟ್‌ಫ್ಲಿಕ್ಸ್‌ನಂತಹ ಒಟಿಟಿ ಸ್ಟ್ರೀಮಿಂಗ್ ಸೇವೆಗಳನ್ನು ಸರ್ಕಾರವು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ವಿವರಿಸಿದೆ.


ಇದನ್ನೂ ಓದಿ: Personal Loan Requirement: ಕೇವಲ ನಿಮಿಷಗಳಲ್ಲಿ ಪರ್ಸನಲ್ ಲೋನ್ ಪಡೆಯುವ ವಿಧಾನ ತಿಳಿಯಿರಿ


ಈ ನಿಯಮಗಳನ್ನು ತಿಳಿಸುವಾಗ, ನೀತಿ ಸಂಹಿತೆ ಮತ್ತು ಸುದ್ದಿ ತಾಣಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗಾಗಿ ಮೂರು ಹಂತದ ಕುಂದುಕೊರತೆ ಪರಿಹಾರ ಚೌಕಟ್ಟನ್ನು ಒಳಗೊಂಡ ಸಾಂಸ್ಥಿಕ ಕಾರ್ಯವಿಧಾನವನ್ನು ಸ್ಥಾಪಿಸಲು ಬಯಸಿದೆ ಎಂದು ಸರ್ಕಾರ ಹೇಳಿದೆ.


ಅಂತೆಯೇ, ಎಲ್ಲಾ ಡಿಜಿಟಲ್ ಮೀಡಿಯಾ ಸೈಟ್‌ಗಳು ದೂರು ಪರಿಹಾರ ವ್ಯವಸ್ಥೆಯನ್ನು ಹೊಂದಿರಬೇಕು, ಅಲ್ಲಿ ಅನುಸರಣೆ ಅಧಿಕಾರಿಗಳು ದೂರು ಪರಿಹಾರದ ಬಗ್ಗೆ ಕೆಲಸ ಮಾಡುತ್ತಾರೆ, ಆಕ್ಷೇಪಾರ್ಹ ವಿಷಯವನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ತೆಗೆದುಹಾಕುತ್ತಾರೆ ಮತ್ತು ಅನುಸರಣೆ ವರದಿಗಳನ್ನು ನೀಡುತ್ತಾರೆ ಎಂದು ಉಲ್ಲೇಖಿಸಲಾಗಿದೆ.


ಈ ನೂತನ ಕಾನೂನು ಡಿಜಿಟಲ್ ನ್ಯೂಸ್ ಮಾಧ್ಯಮವನ್ನು ಪತ್ರಿಕಾ ಮಂಡಳಿಯ ನಿಯಮಗಳ ಅಡಿಯಲ್ಲಿ ತಂದಿದ್ದು. ಇದರನ್ವಯ ಹೊಸ ವೆಬ್ ಸೈಟ್ ಗಳು  ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸೈಟ್‌ನಲ್ಲಿ ನೋಂದಾಯಿಸಬೇಕಾಗುತ್ತದೆ.ಸುದ್ದಿ ಸೈಟ್‌ಗಳಿಗೆ, ನಿಯಮಗಳು ಪ್ರಕಾಶಕರಿಂದ ಸ್ವಯಂ ನಿಯಂತ್ರಣ, ಪ್ರಕಾಶಕರ ಸ್ವಯಂ-ನಿಯಂತ್ರಣ ಸಂಸ್ಥೆಗಳಿಂದ ಸ್ವಯಂ ನಿಯಂತ್ರಣ ಮತ್ತು ಅಂತಿಮವಾಗಿ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಒಳಗೊಂಡಿರುತ್ತದೆ.


ಇದನ್ನೂ ಓದಿ: Baba Ramdev : 'ಅವರ ಅವರಪ್ಪನಿಂದಲೂ ಕೂಡ ನನ್ನನ್ನು ಬಂಧಿಸಲು ಸಾಧ್ಯವಿಲ್ಲ'


ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ರೂಪಿಸಿರುವ ಮೇಲ್ವಿಚಾರಣಾ ಕಾರ್ಯವಿಧಾನವು ನೀತಿ ಸಂಹಿತೆಗಳ ಪಾಲನೆ ಸೇರಿದಂತೆ ಸ್ವಯಂ-ನಿಯಂತ್ರಣ ಸಂಸ್ಥೆಗಳಿಗೆ ಮಾರ್ಗಸೂಚಿಯನ್ನು ಪ್ರಕಟಿಸುತ್ತದೆ ಎಂದು ಕೇಂದ್ರ ತಿಳಿಸಿದೆ.ಕುಂದುಕೊರತೆಗಳನ್ನು ವಿಚಾರಿಸಲು ಇದು ಅಂತರ-ವಿಭಾಗೀಯ ಸಮಿತಿಯನ್ನು ಸ್ಥಾಪಿಸುತ್ತದೆ.ಸರ್ಕಾರವು ಜಂಟಿ ಕಾರ್ಯದರ್ಶಿ ಅಥವಾ ಅದಕ್ಕಿಂತ ಹೆಚ್ಚಿನ ಶ್ರೇಣಿಯ ಅಧಿಕಾರಿಯನ್ನು ಅಧಿಕೃತ ಅಧಿಕಾರಿ ಎಂದು ನೇಮಿಸುತ್ತದೆ, ಅವರು ವಿಷಯವನ್ನು ನಿರ್ಬಂಧಿಸುವುದನ್ನು ನಿರ್ದೇಶಿಸಬಹುದು.


ಇನ್ನೊಂದೆಡೆಗೆ ಕೇಂದ್ರ ಸರ್ಕಾರದ ನೂತನ ಕಾನೂನುಗಳಿಗೆ ಹಲವು ಟೀಕೆಗಳು ಕೇಳಿ ಬಂದಿರುವುದರಿಂದ ಇದನ್ನು ಸಮರ್ಥಿಸಿಕೊಂಡಿರುವ ಸರ್ಕಾರವು ಕಾನೂನುಗಳನ್ನು ಪ್ರಗತಿಪರ, ಉದಾರವಾದಿ ಮತ್ತು ಸಮಕಾಲೀನ" ಎಂದು ಹೇಳಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.