NEET 2020: ಒಂದು ಪರೀಕ್ಷಾ ಕೊಠಡಿಯಲ್ಲಿ ಕೇವಲ 12 ಪರೀಕ್ಷಾರ್ಥಿಗಳಿಗಷ್ಟೇ ಕೂರಲು ವ್ಯವಸ್ಥೆ
ಕೊರೊನಾವೈರಸ್ ಸಾಂಕ್ರಾಮಿಕವು ಶಿಕ್ಷಣ ಪ್ರಪಂಚದ ಮೇಲೆ ತೀವ್ರ ಪರಿಣಾಮ ಬೀರಿದೆ. ಶಾಲಾ-ಕಾಲೇಜು ಪರೀಕ್ಷೆಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳವರೆಗೆ ಎಲ್ಲವನ್ನೂ ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಮುಂದೂಡಲಾಯಿತು.
ನವದೆಹಲಿ: ಕರೋನವೈರಸ್ ಸಾಂಕ್ರಾಮಿಕವು ಶಿಕ್ಷಣ ಪ್ರಪಂಚದ ಮೇಲೆ ತೀವ್ರ ಪರಿಣಾಮ ಬೀರಿದೆ. ಶಾಲಾ-ಕಾಲೇಜು ಪರೀಕ್ಷೆಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳವರೆಗೆ ಎಲ್ಲವನ್ನೂ ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಮುಂದೂಡಲಾಯಿತು. ಆದಾಗ್ಯೂ ಈಗ ಜೀವನವು ಸಹಜ ಸ್ಥಿತಿಗೆ ಮರಳುವ ಹಾದಿಯಲ್ಲಿದೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಹೊಸ ಪರೀಕ್ಷೆಗಳ ವೇಳಾಪಟ್ಟಿಯನ್ನು ಸಹ ಸಿದ್ಧಪಡಿಸಲಾಗುತ್ತಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NEET) ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 6 ರವರೆಗೆ JEE ಮುಖ್ಯ ಪರೀಕ್ಷೆಗಳನ್ನು ನಡೆಸಿತು. ಈಗ ಎನ್‌ಟಿಎ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ (NEET) ಆಯೋಜಿಸಲು ತಯಾರಿ ನಡೆಸುತ್ತಿದೆ.
ಸೆಪ್ಟೆಂಬರ್‌ನಲ್ಲಿ ನೀಟ್ ಪರೀಕ್ಷೆ:
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಅಂದರೆ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶಕ್ಕಾಗಿ ನೀಟ್ ನಡೆಸಲಾಗುತ್ತದೆ. ನೀಟ್ ಪರೀಕ್ಷೆಯನ್ನು ಈ ವರ್ಷ ಸೆಪ್ಟೆಂಬರ್ 13 ರಂದು ನಡೆಸಲಾಗುವುದು. ಇದಕ್ಕಾಗಿ ಸುಮಾರು 15 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 13 ಸೆಪ್ಟೆಂಬರ್ 2020ರ ದಿನಾಂಕವನ್ನು ನಿಗದಿಪಡಿಸುವ ಮೊದಲು ನೀಟ್ ಪರೀಕ್ಷೆಯನ್ನು ಎರಡು ಬಾರಿ ಮುಂದೂಡಲಾಗಿದೆ. ಎನ್‌ಟಿಎ ಅಧಿಕಾರಿಗಳ ಪ್ರಕಾರ ದೇಶಾದ್ಯಂತ 15.97 ಲಕ್ಷ ಅಭ್ಯರ್ಥಿಗಳು ನೀಟ್‌ಗಾಗಿ ನೋಂದಾಯಿಸಿಕೊಂಡಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುವುದು:
ಕರೋನಾವೈರಸ್ ಹರಡುವುದನ್ನು ತಡೆಗಟ್ಟಲು ಪರೀಕ್ಷೆ ಸಮಯದಲ್ಲಿ ಪರಸ್ಪರ ಕೆಲವು ಅಡಿಗಳಷ್ಟು ದೂರವನ್ನು ಇಟ್ಟುಕೊಂಡು ಸಾಮಾಜಿಕ ಅಂತರವನ್ನು ಸಂಪೂರ್ಣವಾಗಿ ಕಾಯ್ದುಕೊಳ್ಳಲಾಗುವುದು. NEET ತನ್ನ 2,546 ಪರೀಕ್ಷಾ ಕೇಂದ್ರಗಳನ್ನು 3,843ಕ್ಕೆ ಹೆಚ್ಚಿಸಿ ನೀಟ್ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲು ಮತ್ತು COVID-19 ತಡೆಗಟ್ಟುವ ನಿಟ್ಟಿನಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸಿದೆ. ಅದೇ ಸಮಯದಲ್ಲಿ ಪ್ರತಿ ಕೋಣೆಯಲ್ಲಿ 24 ಅಭ್ಯರ್ಥಿಗಳ ಬದಲು 12 ಅಭ್ಯರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಲಾಗುತ್ತಿದೆ.
NEET ಪರೀಕ್ಷೆ ವೇಳೆ ಈ ವಿಷಯಗಳನ್ನು ನೋಡಿಕೊಳ್ಳಲಾಗುವುದು:-
ಸಾಮಾಜಿಕ ದೂರವನ್ನು ಅನುಸರಿಸುವುದರ ಹೊರತಾಗಿ ಇತರ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುವುದು ಎಂದು ಹೇಳಲಾಗಿದೆ.
1. ಪರೀಕ್ಷಾ ಕೇಂದ್ರದ ಪ್ರವೇಶದಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಲಭ್ಯವಾಗಲಿದೆ. ಸ್ಯಾನಿಟೈಜರ್‌ಗಳನ್ನು ಪರೀಕ್ಷಾ ಸಭಾಂಗಣದೊಳಗೂ ಇಡಲಾಗುವುದು.
2. ಅಭ್ಯರ್ಥಿಗಳ ಪ್ರವೇಶ ಪತ್ರವನ್ನು ಪರಿಶೀಲಿಸಲು ಬಾರ್‌ಕೋಡ್ ರೀಡರ್ ಅನ್ನು ಬಳಸಲಾಗುತ್ತದೆ.
3. ಹೆಚ್ಚುತ್ತಿರುವ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳಿಗೆ ಒತ್ತು ನೀಡಲಾಗುವುದು.
4. ಎಲ್ಲಾ ಅಭ್ಯರ್ಥಿಗಳು ಮಾಸ್ಕ್ (Mask)ಮತ್ತು ಸ್ಯಾನಿಟೈಜರ್ ಅನ್ನು ತರಬೇಕಾಗುತ್ತದೆ, ಆದರೆ ಪರೀಕ್ಷಾ ಸಭಾಂಗಣದ ಒಳಗೆ ಅವರು ಒಂದೇ ಮಾಸ್ಕ್ ಅನ್ನು ಬಳಸಲು ಸಾಧ್ಯವಾಗುತ್ತದೆ, ಅದು ಅವರಿಗೆ ಅಲ್ಲಿ ಲಭ್ಯವಾಗಲಿದೆ.
5. ಎಲ್ಲಾ ಅಭ್ಯರ್ಥಿಗಳಿಗೆ 3-ಹಂತದ ಭದ್ರತಾ ಮಾಸ್ಕ್ಗಳನ್ನು (3-ಪ್ಲೈ ಮಾಸ್ಕ್) ನೀಡಲಾಗುವುದು ಮತ್ತು ಪರೀಕ್ಷೆಯ ಸಮಯದಲ್ಲಿ ಅವರು ಅದನ್ನೇ ಧರಿಸಬೇಕಾಗುತ್ತದೆ.
6. ಒರಿಸ್ಸಾ, ಮಧ್ಯಪ್ರದೇಶ ಮತ್ತುಛತ್ತೀಸ್‌ಗಢದ ಸರ್ಕಾರಗಳು ತಮ್ಮ ಅಭ್ಯರ್ಥಿಗಳ ಆಗಮನಕ್ಕೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿವೆ.
7. ಸೆಪ್ಟೆಂಬರ್ 13 ರಂದು ಕೋಲ್ಕತ್ತಾದಲ್ಲಿ ವಿಶೇಷ ಮೆಟ್ರೋ ಸೇವೆಯನ್ನು ಒದಗಿಸಲಾಗುವುದು. ಪ್ರವೇಶ ಪತ್ರವನ್ನು ತೋರಿಸಿದ ಅಭ್ಯರ್ಥಿಗಳಿಗೆ ಮೆಟ್ರೊದಲ್ಲಿ ಕುಳಿತುಕೊಳ್ಳಲು ಅವಕಾಶವಿರುತ್ತದೆ. ಅವರೊಂದಿಗೆ ಅವರ ಪೋಷಕರು ಸಹ ಮೆಟ್ರೊದಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.