ನವದೆಹಲಿ: ಇನ್ಮುಂದೆ ಜೂನ್ 1 ರಿಂದ 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳನ್ನು ಮಾತ್ರ ಪ್ಯಾರಾಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಸರ್ಕಾರ ಇಂದು ಹೇಳಿದೆ.


COMMERCIAL BREAK
SCROLL TO CONTINUE READING

ಆತ್ಮಾ ನಿರ್ಭರ ಭಾರತ್" ಅಥವಾ ದೇಶಿಯ ಸ್ವಾವಲಂಬನೆ ಬಗ್ಗೆ ಪ್ರಧಾನಿ ಒತ್ತು ನೀಡಿ ಕೊರೋನಾ ಬಿಕ್ಕಟನ್ನು ನಿಭಾಯಿಸಲು ಬೃಹತ್ ಆರ್ಥಿಕ ಪ್ಯಾಕೇಜ್ ನ್ನು ಘೋಷಿಸಿದ್ದರು. ಇದಾದ ನಂತರ ಈ ನಿರ್ಧಾರ ಬಂದಿದೆ.'ನಿನ್ನೆ ಪಿಎಂ ಮೋದಿ ದೇಶವು ಸ್ವಾವಲಂಬಿಯಾಗಿರಬೇಕು ಮತ್ತು ಸ್ಥಳೀಯ ಉತ್ಪನ್ನಗಳತ್ತ ಗಮನ ಹರಿಸಬೇಕು (ಭಾರತದಲ್ಲಿ ತಯಾರಿಸಲ್ಪಟ್ಟಿರುವಂತಹ), ಇದು ಮುಂದಿನ ದಿನಗಳಲ್ಲಿ ಭಾರತವನ್ನು ಜಾಗತಿಕ ನಾಯಕತ್ವದ ಹಾದಿಯಲ್ಲಿ ಕೊಂಡೊಯ್ಯುತ್ತದೆ" ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.


'ಈ ದಿಕ್ಕಿನಲ್ಲಿ, ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಕ್ಯಾಂಟೀನ್‌ಗಳು ಸ್ವದೇಶಿ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತವೆ ಎಂದು ಗೃಹ ಸಚಿವಾಲಯ ನಿರ್ಧರಿಸಿದೆ. ಇದು ಜೂನ್ 1 ರಿಂದ ಅನ್ವಯವಾಗಲಿದೆ. ಸುಮಾರು 10 ಲಕ್ಷ ಸಿಎಪಿಎಫ್ ಸಿಬ್ಬಂದಿ ಮತ್ತು ಅವರ ಕುಟುಂಬದ 50 ಲಕ್ಷ ಸದಸ್ಯರು ಸ್ವದೇಶಿ ಉತ್ಪನ್ನಗಳನ್ನು ಬಳಸುತ್ತಾರೆ, ಎಂದು ಗೃಹ ಸಚಿವರು ಹೇಳಿದರು.


ಪ್ಯಾರಾ ಮಿಲಿಟರಿ ಕ್ಯಾಂಟೀನ್‌ಗಳು ವಾರ್ಷಿಕವಾಗಿ ಸುಮಾರು 2,800 ಕೋಟಿ ರೂ. ಸಿಎಪಿಎಫ್‌ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಇಂಡೋ ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ), ಸಸ್ತ್ರಾ ಸೀಮಾ ಬಲ್ (ಎಸ್‌ಎಸ್‌ಬಿ), ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಮತ್ತು ಅಸ್ಸಾಂ  ರೈಫಲ್ಸ್ ಇದರಲ್ಲಿ ಸೇರಿವೆ.ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಜನರು ಬಳಸಬೇಕು ಮತ್ತು ಇತರರು ಸಹ ಇದನ್ನು ಮಾಡಲು ಒತ್ತಾಯಿಸಬೇಕು ಎಂದು ಗೃಹ ಸಚಿವರು ಹೇಳಿದರು.


ಇದು ಹಿಂದುಳಿಯುವ ಸಮಯವಲ್ಲ ಆದರೆ ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸುವ ಸಮಯ. ಪ್ರತಿಯೊಬ್ಬ ಭಾರತೀಯರು ಭಾರತದ ಉತ್ಪನ್ನಗಳಲ್ಲಿ ಮಾತ್ರ ತಯಾರಿಸಲು ನಿರ್ಧರಿಸಿದರೆ ದೇಶವು ಸ್ವಾವಲಂಬಿಗಳಾಗಲಿದೆ" ಎಂದು ಗೃಹ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.