ನವದೆಹಲಿ: ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ತೀಕ್ಷ ತಿರುಗೇಟು ನೀಡಿದ್ದು, ದೇಶವನ್ನು ಲೂಟಿ ಮಾಡುವವರು ಮಾತ್ರ ಸಬ್ಸಿಡಿಯನ್ನು ಲಾಭ ಎಂದು ಕರೆಯಬಹುದು ಎಂದಿದ್ದಾರೆ. ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಕಾರ್ಮಿಕ ರೈಲುಗಳ ಓಡಿಸುವ ಮೂಲಕ ವಿಪತ್ತನ್ನು ಲಾಭವನ್ನಾಗಿ ಪರಿವರ್ತಿಸಿದೆ ಎಂದು ರಾಹುಲ್ ಗಾಂಧಿ ಶನಿವಾರ ಬೆಳಗ್ಗೆ ಆರೋಪಿಸಿದ್ದರು.


COMMERCIAL BREAK
SCROLL TO CONTINUE READING

ಈ ಕುರಿತು ರಾಹುಲ್ ಗಾಂಧಿಯವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪಿಯೂಷ್ ಗೋಯಲ್, 'ದೇಶವನ್ನು ಲೂಟಿ ಮಾಡುವವರು ಮಾತ್ರ ಸಬ್ಸಿಡಿಯನ್ನು ಲಾಭ ಎಂದು ಕರೆಯಬಹುದು. ಕಾರ್ಮಿಕ ರೈಲುಗಳನ್ನು ಓಡಿಸಲು ರೈಲ್ವೆ ರಾಜ್ಯ ಸರ್ಕಾರಗಳಿಂದ ತೆಗೆದುಕೊಂಡ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದೆ. ಟಿಕೆಟ್ ಹಣವನ್ನು ನೀಡುವುದಾಗಿ ಸೋನಿಯಾಜಿ ನೀಡಿದ ಭರವಸೆಗೆ ಏನಾಯಿತು ಎಂದು ಈಗ ಜನರು ಕೇಳುತ್ತಿದ್ದಾರೆ" ಎಂದಿದ್ದಾರೆ.



ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯೊಂದನ್ನು ಹಂಚಿಕೊಂದಿದ್ದ ರಾಹುಲ್ ಗಾಂಧಿ, "ಸಾಂಕ್ರಮಿಕದ ಕರಿ ನೆರಳು ಪಸರಿಸಿದೆ, ಜನರು ಸಂಕಷ್ಟದಲ್ಲಿದ್ದಾರೆ. ವಿಪತ್ತನ್ನು ಲಾಭವನ್ನಾಗಿ ಪರಿವರ್ತಿಸಿ ಹಣ ಗಳಿಕೆ ಮಾಡುವಲ್ಲಿ ನಿರತವಾಗಿದೆ ಬಡವರ ವಿರೋಧಿ ಸರ್ಕಾರ" ಎಂದು ಬರೆದುಕೊಂಡಿದ್ದರು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಂಚಿಕೊಂಡಿದ್ದ ವರದಿಯ ಪ್ರಕಾರ, ಕಾರ್ಮಿಕ ವಿಶೇಷ ರೈಲುಗಳಿಂದ ರೇಲ್ವೆ ಇಲಾಖೆಗೆ 428 ಕೋಟಿ ರೂ ಆದಾಯ ಹರಿದುಬಂದಿದೆ ಎನ್ನಲಾಗಿದೆ. 


ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಮಾರ್ಚ್ 24ರಂದು ದೇಶಾದ್ಯಂತ ಜಾರಿಗೆ ಬಂದ ಹಿನ್ನೆಲೆ ದೇಶಾದ್ಯಂತ ಹಲವಾರು ನಗರಗಳಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಸಿಲುಕಿಕೊಂಡಿದ್ದರು. ಅವರನ್ನು ಅವರ ಪ್ರದೇಶಕ್ಕೆ ಅಥವಾ ಗೃಹ ಜಿಲ್ಲೆಗಳವರೆಗೆ ತಲುಪಿಸಲು ಸರ್ಕಾರ ಕಾರ್ಮಿಕ ವಿಶೇಷ ರೈಲುಗಳ ವ್ಯವಸ್ಥೆ ಮಾಡಿತ್ತು. ಈ ವಿಶೇಷ ರೈಲುಗಳನ್ನು ಮೇ 1ರಿಂದ ಓಡಿಸಲಾಗಿದೆ.