Students Suspended For Ram Mandir Discussion: ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ರಾಮಮಂದಿರದ ಬಗ್ಗೆ ಚರ್ಚೆ ನಡೆಸಿ ಪೋಸ್ಟರ್ ಹಾಕಿದ್ದಕ್ಕಾಗಿ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಈ ಕೃತ್ಯವನ್ನು ವಿದ್ಯಾರ್ಥಿ ನೀತಿ ಸಂಹಿತೆಯ ಗಂಭೀರ ಉಲ್ಲಂಘನೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಹೇಳಿದ್ದಾರೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳ ಗುಂಪೊಂದು ಗುರುವಾರ ಪ್ರತಿಭಟನೆ ನಡೆಸಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಾಟ್ಸಾಪ್ ವೆಬ್ ಬಳಕೆದಾರರಿಗೆ ಶೀಘ್ರದಲ್ಲೇ ಸಿಗಲಿದೆ ಹೊಸ ಫೀಚರ್


ವರದಿಗಳ ಪ್ರಕಾರ, ಅಮಾನತುಗೊಂಡ ವಿದ್ಯಾರ್ಥಿಗಳಲ್ಲಿ ಒಬ್ಬರಿಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಶಿಸ್ತು ಸಮಿತಿಯು ನೋಟಿಸ್ ಕಳುಹಿಸಿದೆ. “ವಿದ್ಯಾರ್ಥಿ ನೀತಿ ಸಂಹಿತೆಯ ಗಂಭೀರ ಉಲ್ಲಂಘನೆಯಲ್ಲಿ ನೀವು ಭಾಗಿಯಾಗಿರುವಿರಿ. ನೀವು ಪೋಸ್ಟರ್‌’ಗಳನ್ನು ಹಾಕಿದಲ್ಲದೆ, ಚರ್ಚೆಯಲ್ಲಿ ಭಾಗವಹಿಸಿದ್ದೀರಿ, ಅದರಲ್ಲಿ ಅತ್ಯಂತ ನಿಂದನೀಯ ಭಾಷೆಯನ್ನು ಬಳಸಲಾಗಿದೆ. ವಿಶ್ವವಿದ್ಯಾನಿಲಯದ ಸಮಗ್ರತೆ ಮತ್ತು ಶಾಂತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ಈ ಚರ್ಚೆಯನ್ನು ಆಯೋಜಿಸುವ ಉದ್ದೇಶವಾಗಿದೆ” ಎಂದು ನೋಟಿಸ್ ಹೇಳಿದೆ.


ವಿಶ್ವವಿದ್ಯಾಲಯದ ಮುಖ್ಯ ಸಂವಹನ ಅಧಿಕಾರಿ ಅಂಜು ಮೋಹನ್ ಮಾತನಾಡಿ, ಮಾರ್ಗಸೂಚಿಯಂತೆ ವಿದ್ಯಾರ್ಥಿಗಳನ್ನು ಅಮಾನತುಗೊಳಿಸುವ ನಿರ್ಧಾರವನ್ನು ಮುಖ್ಯ ಪ್ರಾಧ್ಯಾಪಕರ ಕಚೇರಿ ತೆಗೆದುಕೊಳ್ಳಲಾಗಿದೆ. 2024 ಸೆಮಿಸ್ಟರ್‌’ನ ಉಳಿದ ಅವಧಿಗೂ ಇಬ್ಬರೂ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ.


ಮಾಹಿತಿ ಪ್ರಕಾರ, ಆಗಸ್ಟ್ 1 ರ ನಂತರವೇ ಇಬ್ಬರಿಗೂ ವಿಶ್ವವಿದ್ಯಾಲಯದ ಕ್ಯಾಂಪಸ್‌’ಗೆ ಬರಲು ಅವಕಾಶವಿದೆ. ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಂದ ಎರಡು ಅಂಡರ್ಟೇಕಿಂಗ್’ಗಳನ್ನು ಕೇಳಿದ್ದು,  ತಪ್ಪನ್ನು ಒಪ್ಪಿಕೊಂಡು, ಇವುಗಳಿಗೆ ಅವರು ಮತ್ತು ಅವರ ಪೋಷಕರು ಸಹಿ ಹಾಕಬೇಕು ಎಂದು ಹೇಳಿದೆ.


ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಮಾತ್ರ ಚಲಾಯಿಸುತ್ತಿದ್ದೇನೆ ಎಂದು ವಿದ್ಯಾರ್ಥಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾನೆ ಎಂದು ನೋಟಿಸ್ ಹೇಳಿದೆ. ಜೊತೆಗೆ ಯಾವುದೇ ನಿರ್ದಿಷ್ಟ ರಾಜಕೀಯ ಸಿದ್ಧಾಂತವನ್ನು ಬೆಂಬಲಿಸುವ ಯಾವುದೇ ವಿದ್ಯಾರ್ಥಿ ಸಂಘಟನೆಯ ಭಾಗವಾಗಿಲ್ಲ ಎಂದು ವಿದ್ಯಾರ್ಥಿಗಳು ಒಪ್ಪಿಕೊಂಡಿದ್ದಾರೆ.


ಇದನ್ನೂ ಓದಿ:Karnataka Budget 2024 Live Updates: ಗ್ಯಾರಂಟಿ ಯೋಜನೆಗಳು ಚುನಾವಣಾ ಗಿಮಿಕ್‌ ಅಲ್ಲವೆಂದ ಸಿಎಂ ಸಿದ್ದರಾಮಯ್ಯ


ಫೆಬ್ರವರಿ 7 ರಂದು ರೆವಲ್ಯೂಷನರಿ ಸ್ಟೂಡೆಂಟ್ ಲೀಗ್ ರಾಮಮಂದಿರದ ಕುರಿತಾದ ಈ ಚರ್ಚೆಯನ್ನು ಆಯೋಜಿಸಿತ್ತು. 'ರಾಮಮಂದಿರ: ಬ್ರಾಹ್ಮಣ ಹಿಂದುತ್ವ ಫ್ಯಾಸಿಸಂನ ಹಾಸ್ಯಾಸ್ಪದ ಯೋಜನೆ' ಎಂದು ಅದರ ಪೋಸ್ಟರ್‌’ನಲ್ಲಿ ಬರೆಯಲಾಗಿತ್ತು.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.