ನವದೆಹಲಿ: ಎಸ್​ಬಿಐನ ಕೆಲವು ಖಾತೆಗಳ ಮೇಲೆ ಮಿನಿಮಂ(ಕನಿಷ್ಠ) ಬ್ಯಾಲೆನ್ಸ್ ಕಡ್ಡಾಯ/ಅಗತ್ಯವಿಲ್ಲ ಎಂಬುದು ನಿಮಗೆ ತಿಳಿದಿದೆಯೇ. ಈ ಖಾತೆಗಳು ಇತರೆ ಉಳಿತಾಯ ಖಾತೆಗಳಿಗಿಂತ ವಿಭಿನ್ನವಾಗಿತ್ತವೆ. ಈ ಖಾತೆ ಜನ್-ಧನ್ ಖಾತೆಗಳಿಗಿಂತ ಭಿನ್ನ, ಇದನ್ನು ಝೀರೋ ಬ್ಯಾಲೆನ್ಸ್ ಅಕೌಂಟ್ಸ್ ಎಂದು ಕರೆಯಲಾಗುತ್ತದೆ. 


COMMERCIAL BREAK
SCROLL TO CONTINUE READING

ಈ ಖಾತೆಗಳು ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗಾಗಿ ಇವೆ. ಇದರಿಂದಾಗಿ ಅವರು ಯಾವುದೇ ಶುಲ್ಕದ ಹೊರೆಯಿಲ್ಲದೆ ಹಣ ಉಳಿಸಲು ಪ್ರಾರಂಭಿಸಬಹುದು. ಈ ಖಾತೆಗಳು ಇತರ ಖಾತೆಗಳಂತಹ ಎಲ್ಲಾ ವೈಶಿಷ್ಟ್ಯಗಳನ್ನು ಪಡೆಯುತ್ತವೆ.


ಇನ್ನೊಂದು ಒಳ್ಳೆಯ ಸುದ್ದಿ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇಂತಹ ಖಾತೆದಾರರಿಗೆ ಚೆಕ್ಬುಕ್ ಮತ್ತು ಇತರ ಬ್ಯಾಂಕಿಂಗ್ ಸೌಲಭ್ಯಗಳನ್ನು ಉಚಿತವಾಗಿ ಬಿಡುಗಡೆ ಮಾಡುವಂತೆ ಸೂಚಿಸಿದೆ. ಜುಲೈ 1 ರಿಂದ ಈ ಸೌಲಭ್ಯವನ್ನು ಪ್ರಾರಂಭಿಸಲಾಗುವುದು. ಹೆಸರೇ ಸೂಚಿಸುವಂತೆ ಝೀರೋ ಬ್ಯಾಲೆನ್ಸ್ ನಲ್ಲಿ ಖಾತೆ ತೆರೆಯಬಹುದು.


ಮೂಲಭೂತ ಉಳಿತಾಯ ಬ್ಯಾಂಕ್ ಠೇವಣಿ ಖಾತೆ ಎಂದರೇನು?
ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆ (BSBD)ಯಲ್ಲಿ, ಖಾತೆದಾರರಿಗೆ ಉಚಿತವಾಗಿ ಕೆಲವು ಬ್ಯಾಂಕಿಂಗ್ ಸೇವೆಗಳನ್ನು ನೀಡಲಾಗುತ್ತದೆ. ಈ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಇಡುವ ಅಗತ್ಯವಿಲ್ಲ. ಪ್ರಸ್ತುತ ಸೇವಿಂಗ್ ಬ್ಯಾಂಕ್ ಖಾತೆಗೆ ಚೆಕ್ ಪುಸ್ತಕ, ನೆಟ್ ಬ್ಯಾಂಕಿಂಗ್ ಮತ್ತು ಇತರ ಸೌಲಭ್ಯಗಳಿಗೆ ಕನಿಷ್ಠ ಬ್ಯಾಲೆನ್ಸ್ ಬೇಕಾಗುತ್ತದೆ.


ಎಸ್​ಬಿಐನಲ್ಲಿ ಝೀರೋ ಬ್ಯಾಲೆನ್ಸ್ ಅಕೌಂಟ್:
> ಯಾವುದೇ ಗ್ರಾಹಕರು KYC ಅಗತ್ಯತೆಗಳನ್ನು ಪೂರೈಸುವ ಮೂಲಕ ಝೀರೋ ಬ್ಯಾಲೆನ್ಸ್ ಖಾತೆಯನ್ನು ತೆರೆಯಬಹುದು
> ಎಟಿಎಂ ಕಾರ್ಡ್
> ಇಂಟರ್ನೆಟ್ ಬ್ಯಾಂಕಿಂಗ್
> ಎಟಿಎಂನಿಂದ ತಿಂಗಳಲ್ಲಿ 4 ಬಾರಿ ಹಣ ಹಿಂಪಡೆಯಬಹುದು.


'ಜನ್-ಧನ್' ಖಾತೆ:
ಪ್ರಧಾನ ಮಂತ್ರಿ ಜನ್-ಧನ್ ಯೋಜನೆ(PMJDY) ಅಡಿಯಲ್ಲಿ ಎಸ್​ಬಿಐ ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ತೆರೆಯಲು ಸಹಕರಿಸುತ್ತದೆ. ಇದು ಹಣಕಾಸಿನ ಸೇವೆಗಳು, ಬ್ಯಾಂಕಿಂಗ್, ಪಿಂಚಣಿ ಮತ್ತು ಇತರ ಸೇವೆಗಳನ್ನು ಒದಗಿಸುತ್ತದೆ.