ನವದೆಹಲಿ : ಸಂಕಟದ ಹೊತ್ತಿನಲ್ಲಿ ದೇಶದ ರಕ್ಷಣೆಗೆ ಧಾವಿಸುವುದು ಭಾರತೀಯ ವಾಯುಪಡೆಯ (Indian Air force) ಜಾಯಮಾನ. ಅದು ಗಡಿಯಲ್ಲಿ ಶತ್ರುಗಳ  ಉಪಟಳ  ಇರಲಿ, ಭೂಕಂಪ, ಸುನಾಮಿ, ಯಾವುದೇ ನೈಸರ್ಗಿಕ ವಿಕೋಪ ಇರಲಿ. ಭಾರತೀಯರ ರಕ್ಷಣೆಗೆ ಓಡೋಡಿ ಬರುತ್ತವೆ ನಮ್ಮ ಸೇನೆ. ಈ ಸಲ ನಮ್ಮ ಸೇನೆ ಹೋರಾಡಿದ್ದು ಮಹಾಮಾರಿ ಕರೋನಾ (Coronavirus) ವಿರುದ್ಧ.  ಅದರಲ್ಲಿ ನಮ್ಮ ವಾಯುಸೇನೆಯ ಪಾತ್ರ ಬಹು ದೊಡ್ಡದು. ಅದರ ಝಲಕ್ ಇಲ್ಲಿದೆ ನೋಡಿ.  ವಾಯುಸೇನೆಯ ಕರೋನಾ (COVID-19) ವಿರುದ್ಧ ಸಮರ ದಾಖಲೆಗಳನ್ನು ಸಿಂಪಲ್ಲಾಗಿ ಪಾಯಿಂಟ್ ಟು ಪಾಯಿಂಟ್ ಹೇಳುತ್ತೇವೆ. ಓದಿ


COMMERCIAL BREAK
SCROLL TO CONTINUE READING

ವಾಯುಪಡೆಯ 'ಅಪರೇಶನ್ ಆಕ್ಸಿಜನ್'
1. ವಾಯುಸೇನೆ ತನ್ನ ಕಾರ್ಯಾಚರಣೆಗೆ ಬಳಸಿದ್ದು 42 ಟ್ರಾನ್ಸ್ ಪೋರ್ಟ್ ವಿಮಾನ
2. ದೇಶಾದ್ಯಂತ 403 ಆಕ್ಸಿಜನ್ ಕಂಟೈನರ್ ಗಳನ್ನು (Oxygen Container) ರವಾನಿಸಲು 939 ಗಂಟೆ ಕಾಲ ಈ ವಿಮಾನಗಳು ಆಕಾಶದಲ್ಲಿ ಹಾರಾಟ ನಡೆಸಿದ್ದವು
3. 6856 ಮೆಟ್ರಿಕ್ ಟನ್ ಆಮ್ಲಜನಕ, 163 ಟನ್ ಮೆಡಿಕಲ್ ಉಪಕರಣಗಳನ್ನು ರವಾನಿಸಿತ್ತು ಐಎಎಫ್


ಇದನ್ನೂ ಓದಿ COVID-19 : ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3.62 ಲಕ್ಷ ಕೊರೋನಾ ಪ್ರಕರಣಗಳು ಪತ್ತೆ..!


4. ದೇಶದ ಜನರ ರಕ್ಷಣೆಗಾಗಿ 9 ದೇಶಗಳಿಗೆ ಫಟಾಫಟ್ ಹಾರಿತ್ತು ಐಎಎಫ್
5. ಜರ್ಮನಿ, ಇಂಡೋನೇಷ್ಯಾ, ಅಸ್ಟ್ರೇಲಿಯಾ, ಬ್ರಿಟನ್ (Britain) ಮತ್ತು ಸಿಂಗಾಪುರ ಸೇರಿ 9 ದೇಶಗಳಿಗೆ ಹಾರಿತ್ತು ಐಎಎಫ್ (IAF) ವಿಮಾನ.
6. 9 ದೇಶಗಳಿಂದ ತುರ್ತಾಗಿ ತಂದಿತ್ತು ಜೀವ ರಕ್ಷಕ ಆಮ್ಲಜನಕ
7. ವಿದೇಶಗಳಿಂದ 793 ಟನ್ ಆಮ್ಲಜನಕ (Oxygen) ತಂದಿತ್ತು ವಾಯುಪಡೆ
8. 95 ಆಮ್ಲಜನಕ ಕಂಟೆನೈರ್ ತರಿಸಲಾಗಿತ್ತು.
9. 204 ಮೆಟ್ರಿಕ್ ಟನ್ ಮೆಡಿಕಲ್ ಉಪಕರಣಗಳನ್ನು ತರಲಾಗಿತ್ತು.


ಇದನ್ನೂ ಓದಿ : Corona ಸಾಂಕ್ರಾಮಿಕದ ಮಧ್ಯೆ ಗುಜರಾತ್‌ನಲ್ಲಿ ಚಂಡಮಾರುತದ ಅಪಾಯ, ಭಾರಿ ವಿನಾಶದ ಬೆದರಿಕೆ


ಎಲ್ಎಸಿ ಮೇಲೆ ನಿಗಾ ಹಾಗೇ ಇತ್ತು.!
ದೇಶದ ಉಸಿರು ರಕ್ಷಿಸುವ ಅಪರೇಷನ್ ನಡೆಸುವಾಗ ವಾಯುಪಡೆ ಲಡಾಕ್ ನಲ್ಲಿ (Ladakh) ತನ್ನ ಕಾರ್ಯಾಚರಣೆಯನ್ನು ಹಾಗೆ ಮುಂದುವರಿಸಿತ್ತು. ಚೀನಾ ವಿರುದ್ಧ ಗಡಿಯಲ್ಲಿ ನಿರಂತರ ಕಣ್ಗಾವಲು ಮುಂದುವರಿದಿತ್ತು. ವಾಯುಪಡೆ ಆಕ್ಸಿಜನ್ ಪೂರೈಕೆಯಲ್ಲಿ ತೊಡಗಿದೆ ಎಂಬ  ಅಂಶ ಅರಿತರೆ ಚೀನಾ (China) ಬೇರೆ ಕುಬುದ್ದಿ ತೋರಿಸುವ ಅಪಾಯ  ಇತ್ತು. ಈ ಹಿನ್ನೆಲೆಯಲ್ಲಿ ಲಡಾಖ್ ನಲ್ಲಿ ವಾಯುಪಡೆಯ ಕಣ್ಗಾವಲು ಹಾಗೆ ಮುಂದುವರಿದಿದೆ. ನಿಜಕ್ಕೂ ವಾಯುಪಡೆ ನಮ್ಮ ಹೆಮ್ಮೆ. ವಾಯುವೀರರಿಗೊಂದು ಸಲಾಂ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.