Operation Pink: Zee Sting Operation​ ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಮೇ 19 ರಂದು ಮಾರುಕಟ್ಟೆಯಿಂದ ಏಕಾಏಕಿ 2,000 ಕರೆನ್ಸಿ ನೋಟುಗಳ ಚಲಾವಣೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತು.ಇದಾದ ಬೆನ್ನಲ್ಲೇ ಮೇ 23 ರಂದು 2000 ರೂ ನೋಟುಗಳ ವಿನಿಮಯ ಪ್ರಾರಂಭವಾಯಿತು ಮತ್ತು ಅಂದಿನಿಂದ ಜನರು ಕಪ್ಪು ಹಣವನ್ನು ಶ್ವೇತ ಹಣವನ್ನಾಗಿ (White Money) ಪರಿವರ್ತಿಸುತ್ತಿರುವ ಬಗ್ಗೆ  ದೇಶದೆಲ್ಲೆಡೆ ವ್ಯಾಪಕವಾಗಿ ಊಹಾಪೋಹಗಳು ಹರಡಿಕೊಂಡಿದ್ದವು.ಈ ಹಿನ್ನೆಲೆಯಲ್ಲಿಈಗ ಜೀ ನ್ಯೂಸ್‌ ತನ್ನ 'ಆಪರೇಷನ್ ಪಿಂಕ್' ಕಾರ್ಯಾಚರಣೆ ಭಾಗವಾಗಿ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಗ್ರ ಶ್ರೇಯಾಂಕದ ಆಭರಣಕಾರರು ನಡೆಸುತ್ತಿರುವ ಬೃಹತ್ ಕಪ್ಪುಹಣದ ಜಾಲವನ್ನು ಬಯಲಿಗೆಳೆದಿದೆ.


COMMERCIAL BREAK
SCROLL TO CONTINUE READING

ನೋಟು ಅಮಾನ್ಯೀಕರಣದ ನಂತರ 2016ರಲ್ಲಿ ನಡೆದಂತೆ ಅಕ್ರಮವಾಗಿ 2000 ರೂಪಾಯಿ ನೋಟುಗಳನ್ನು ಬಿಳಿಯಾಗಿ ಪರಿವರ್ತಿಸುತ್ತಿರುವ ಜಾಲವನ್ನು ಜೀ ನ್ಯೂಸ್ ಕುಟುಕು ಕಾರ್ಯಾಚರಣೆ ಈಗ ಬೇಧಿಸುವಲ್ಲಿ ಯಶಸ್ವಿಯಾಗಿದೆ.


ಇದನ್ನೂ ಓದಿ: Rain Alert: ರಾಜ್ಯದಲ್ಲಿ ಇನ್ನೂ 2 ದಿನ ವರುಣಾರ್ಭಟ: ಈ ಜಿಲ್ಲೆಗಳಲ್ಲಿ ಗುಡ್ಡ ಕುಸಿತದ ಭೀತಿ-ಹೈ ಅಲರ್ಟ್ ಘೋಷಿಸಿದ ಇಲಾಖೆ!


2000 ರೂಪಾಯಿ ನೋಟುಗಳಿಗೆ ಬದಲಾಗಿ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಪ್ರಸಿದ್ಧ ಆಭರಣ ವ್ಯಾಪಾರಿಗಳಾದ ಪಿಪಿ ಜ್ಯುವೆಲರ್ಸ್ ಮತ್ತು ತ್ರಿಭೋವಂದಾಸ್ ಭೀಮ್‌ಜಿ ಝವೇರಿ ಅವರಂತಹ ಚಿನ್ನದ ವ್ಯಾಪಾರಿಗಳು 2,000 ರೂ ನೋಟುಗಳನ್ನು ಅಕ್ರಮವಾಗಿ ವಿನಿಮಯ ಮಾಡಿಕೊಳ್ಳುವುದರ ಮೂಲಕ  ಹೆಚ್ಚಿನ ಬೆಲೆಗೆ ಚಿನ್ನವನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವುದು ಕಾರ್ಯಾಚರಣೆ ವೇಳೆ ಕಂಡುಬಂದಿದೆ.ಜೀ ನ್ಯೂಸ್‌ನ 'ಆಪರೇಷನ್ ಪಿಂಕ್' ಈ ಚಿಲ್ಲರೆ ಸರಪಳಿಗಳಿಂದ 'ಗುಲಾಬಿ ನೋಟು'ಗಳನ್ನು ಚಿನ್ನಕ್ಕೆ ಪರಿವರ್ತಿಸುವ ಕಪ್ಪು ವ್ಯವಹಾರದ ಸತ್ಯವನ್ನು ಬಹಿರಂಗಪಡಿಸಿದೆ.


ಜೀ ನ್ಯೂಸ್ ನ ಕುಟುಕು ಕಾರ್ಯಾಚರಣೆ ಪ್ರಕಾರ ಪ್ರಕಾರ, ಪ್ರಸ್ತುತ ಚಿನ್ನದ ದರವು 10 ಗ್ರಾಂಗೆ 63,000 ರೂ ಆಗಿದ್ದರೆ, ಚಿನ್ನಾಭರಣ ವ್ಯಾಪಾರಿಗಳು 2,000 ರೂ ನೋಟುಗಳನ್ನು ಬಳಸಿ ಚಿನ್ನವನ್ನು ಖರೀದಿಸಿದರೆ 10 ಗ್ರಾಂಗೆ 70,000 ರೂ.ಆಗಲಿದೆ. ಜೀ ನ್ಯೂಸ್ ವರದಿಗಾರ ಅಭಿಷೇಕ್ ಕುಮಾರ್ ಗ್ರಾಹಕರಂತೆ ಪೋಸ್ ನೀಡಿ ಈ ಆಭರಣ ವ್ಯಾಪಾರಿಗಳ ಶೋರೂಂಗಳನ್ನು ತಲುಪಿ ತಮ್ಮ ಕಪ್ಪುಹಣದ ವ್ಯಾಪಾರವನ್ನು ಬಯಲಿಗೆಳೆದಿದ್ದಾರೆ. ಝೀ ನ್ಯೂಸ್ ಕುಟುಕು ಕಾರ್ಯಾಚರಣೆಯು ಈ ಕೆಳಗಿನ ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದೆ:


* ಎರಡು ಸಾವಿರ ರೂಪಾಯಿ ನೋಟಿನ ಕೋಡ್ ವರ್ಡ್ 'ಗುಲಾಬಿ'.
* ಚಿನ್ನದ ದರಗಳು ಕಾರ್ಡ್ ಪಾವತಿಗಿಂತ ಭಿನ್ನವಾಗಿರುತ್ತವೆ. ಆದರೆ 2,000 ರೂಪಾಯಿ ನೋಟುಗಳಲ್ಲಿ ಪಾವತಿ ಮಾಡಿದಾಗ ಚಿನ್ನದ ದರ ಹೆಚ್ಚಾಗುತ್ತದೆ.
* 2,000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಬಯಸುವವರಿಂದ ಹೆಚ್ಚು ಬೇಡಿಕೆಯಿರುವ ವಸ್ತು ಚಿನ್ನದ ನಾಣ್ಯವಾಗಿದೆ.
* ಆಭರಣಕಾರರು ಬ್ಯಾಂಕ್‌ಗಳಲ್ಲಿ ಯಾವುದೇ ದಾಖಲೆಯಿಲ್ಲದೆ 2,000 ರೂಪಾಯಿ ನೋಟುಗಳನ್ನು ಠೇವಣಿ ಮಾಡಲು ಅನುಮತಿಸುವ ಅವಕಾಶ ಹೊಂದಿದ್ದಾರೆ.


ಇದನ್ನೂ ಓದಿ: Karnataka Cabinet: ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರ ಅನುಮೋದನೆ


ಮಾರುಕಟ್ಟೆಯಿಂದ 2000 ರೂಪಾಯಿ ನೋಟು ಹಿಂಪಡೆಯುವ ಸರ್ಕಾರದ ನಿರ್ಧಾರ ಆಭರಣ ವ್ಯಾಪಾರಿಗಳಿಗೆ ಸುವರ್ಣಾವಕಾಶವಾಗಿ ಪರಿಣಮಿಸಿದೆ ಎಂದು ಕುಟುಕು ಕಾರ್ಯಾಚರಣೆಯಿಂದ ತಿಳಿದುಬಂದಿದೆ.2000 ರೂಪಾಯಿ ನೋಟುಗಳ ನೆಪದಲ್ಲಿ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸುವ ದಂಧೆಯನ್ನು ಚಿನ್ನಾಭರಣ ವ್ಯಾಪಾರಿಗಳು ವೈಭವೀಕರಿಸಿದ್ದಾರೆ ಎಂಬುದನ್ನೂ ಇದು ತೋರಿಸುತ್ತದೆ.ಚಿನ್ನಾಭರಣ ವ್ಯಾಪಾರಿಗಳು ಗ್ರಾಹಕರಿಗೆ ರಕ್ಷಣೆಯ ಭರವಸೆಯನ್ನೂ ನೀಡುತ್ತಿದ್ದಾರೆ ಎಂದು ಈ ಕಾರ್ಯಾಚರಣೆ ಮೂಲಕ ತಿಳಿದುಬಂದಿದೆ.


ಈ ಕಾರ್ಯಚಟುವಟಿಕೆಗಳೆಲ್ಲವೂ ಸಹಿತ ಸಂಸತ್ತು ಮತ್ತು ಆರ್‌ಬಿಐ ಕಚೇರಿಯ ಕೇವಲ 20 ಕಿಮೀ ವ್ಯಾಪ್ತಿಯೊಳಗೆ ಸರ್ಕಾರದ ಮೂಗಿನ ನೇರಕ್ಕೆ ನಡೆಯುತ್ತಿದೆ ಎನ್ನಲಾಗಿದೆ. ಅನೇಕ ಆಭರಣ ವ್ಯಾಪಾರಿಗಳು ಯಾವುದೇ ಭಯವಿಲ್ಲದೆ 2000 ರೂಪಾಯಿ ನೋಟುಗಳ ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸುತ್ತಿದ್ದಾರೆ ಎಂದು ಜೀ ನ್ಯೂಸ್ ತನಿಖೆಯಿಂದ ತಿಳಿದುಬಂದಿದೆ. 2016ರಲ್ಲಿ ಹಳೆಯ 500 ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದ ನಂತರ 2000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲಾಗಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ