ನವದೆಹಲಿ: ರೈಲುಗಳ ಹವಾನಿಯಂತ್ರಿತ ಬೋಗಿಗಳಲ್ಲಿ ಇನ್ಮುಂದೆ ಆಪರೇಷನ್ ಥಿಯೇಟರ್ ನಂತೆ ಶುದ್ಧ ಹಾಗೂ ತಾಜಾ ಗಾಳಿ ಸಿಗಲಿದೆ. ಇದರಿಂದ ಸೋಂಕು ಹರಡುವ ಅಪಾಯ ತುಂಬಾ ಕಡಿಮೆಯಾಗಲಿದೆ. ಈ ಹೊಸ ವಿಧಾನ ಕೊರೊನಾವನ್ನು ಸೋಲಿಸಲು ಸಹಕಾರಿಯಾಗಲಿದೆ. ಈಗಾಗಲೇ ಮೇ 12ರಿಂದ  ರಾಜಧಾನಿ ಎಕ್ಸ್ ಪ್ರೆಸ್ ನ 15 ಎಸಿ ರೈಲುಗಳಲ್ಲಿ ಈ ಪ್ರಯೋಗವನ್ನು ಪ್ರಾಯೋಗಿಕ ಹಂತವಾಗಿ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಕೋವಿಡ್ -19 ರ ನಂತರದ ಪರಿಸ್ಥಿತಿಯಲ್ಲಿ ರೈಲು ಚಲಾಯಿಸಲು ರೈಲ್ವೆ ನಡೆಸಿರುವ ಸಿದ್ಧತೆಗಳ ಒಂದು ಭಾಗ ಇದಾಗಿದೆ. ಭಾರತೀಯ ರೈಲ್ವೆಯ ಹವಾನಿಯಂತ್ರಿತ ಬೋಗಿಗಳಲ್ಲಿನ ರೂಫ್ ಮೌಂಟೆಡ್ ಎಸಿ ಪ್ಯಾಕೇಜ್ (ಆರ್‌ಎಂಪಿಯು), ಆಪರೇಷನ್ ಥಿಯೇಟರ್ ಮಾಡುವಂತೆ ಗಂಟೆಗೆ 16-18 ಬಾರಿ ಗಾಳಿಯನ್ನು ಪರಿವರ್ತಿಸುವ ಹಾಗೆ ಕಾರ್ಯನಿರ್ವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..


ಇದಕ್ಕೂ ಮೊದಲು ಹವಾನಿಯಂತ್ರಿತ ರೈಲುಗಳಲ್ಲಿ ಪ್ರತಿ ಗಂಟೆಗೆ ಎಂಟು ಬಾರಿ ಗಾಳಿಯನ್ನು ಪರಿವರ್ತಿಸಲಾಗುತ್ತಿತ್ತು ಮತ್ತು ಬೋಗಿಗಳಲ್ಲಿ ವಿಸರ್ಜಿಸಲಾಗುವ ಶೇ.80 ರಷ್ಟು ಗಾಳಿ ಪುನರ್ಸಂಚಾಲಿತವಾಗುತ್ತಿತ್ತು ಮತ್ತು ಕೇವಲ ಶೇ.20ರಷ್ಟು ಗಾಳಿ ಮಾತ್ರ ಶುದ್ಧವಾಗಿರುತ್ತಿತ್ತು. ಆದರೆ ರೇಲ್ವೆ ವಿಭಾಗದ ಈ ಕ್ರಮದಿಂದ ವಿದ್ಯುತ್ ಬಳಕೆಯಲ್ಲಿ ಶೇ.10 ರಿಂದ 15ರಷ್ಟು ಹೆಚ್ಚಳವಾಗಲಿದೆ. 


ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ಯಾತ್ರಿಗಳ ಸುರಕ್ಷತೆಯ ದೃಷ್ಟಿಯಿಂದ ಇದು ಮಾಡಲೇ ಬೇಕಾದ ಅನಿವಾರ್ಯತೆ ಇದೆ. ಇದೊಂದು ನೂತನ ಪರ್ಯಾಯವಾಗಿದ್ದು, AC ಗಾಳಿ ಪರಿವರ್ತಿಸುವ ರೀತಿ ಇದೂ ಕೂಡ ಶುದ್ಧ ಮತ್ತು ತಂಪಾದ ಗಾಳಿ ನೀಡಲಿದೆ. ಸದ್ಯ ಭಾರತೀಯ ರೈಲು ವಿಭಾಗ ಸೆಂಟ್ರಲೈಸ್ಡ್ ಎಸಿಯ ತಾಪಮಾನವನ್ನು 23 ಡಿಗ್ರಿಯಿಂದ 25 ಡಿಗ್ರಿಗಳವರೆಗೆ ಹೆಚ್ಚಿಸಿದೆ. ಏಕೆಂದರೆ ಸದ್ಯ ಯಾವುದೇ ಯಾತ್ರಿಗಳಿಗೆ ಹೊದಿಕೆಯನ್ನು ನೀಡಲಾಗುತ್ತಿಲ್ಲ.


ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ
ಆರೋಗ್ಯ ತಜ್ಞರ ಸಲಹೆಯ ಮೇರೆಗೆ ರೈಲ್ವೆ ತಮ್ಮ ಎಸಿ ಅಲ್ಲದ ಬೋಗಿಗಳನ್ನು ಕರೋನಾ ವೈರಸ್‌ನ ಸೌಮ್ಯ ಪ್ರಕರಣಗಳಿಗೆ ಪ್ರತ್ಯೇಕ ಬೋಗಿಗಳಾಗಿ ಸುಧಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೋಗ ಹರಡುವುದನ್ನು ತಡೆಗಟ್ಟಲು ವಿಶೇಷ ರಾಜಧಾನಿ ರೈಲುಗಳಲ್ಲಿ ಎಸಿ ಘಟಕಗಳನ್ನು ಬದಲಾಯಿಸಲು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.