ಪಣಜಿ:ಬಿಜೆಪಿಯನ್ನು ವಿರೋಧಿಸುವುದು ಎಂದರೆ ಹಿಂದುಗಳನ್ನು ವಿರೋಧಿಸುವುದು ಎಂದಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಕಾರ್ಯವಾಹ ಸುರೇಶ ಭೈಯಾಜಿ ಜೋಷಿ ಹೇಳಿದ್ದಾರೆ. ಗೋವಾದ ಪಣಜಿಯಲ್ಲಿ ಆಯೋಜಿಸಲಾಗಿರುವ 'ವಿಶ್ವಗುರು ಭಾರತ' ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಭೈಯಾಜಿ, ರಾಜಕೀಯ ಹೋರಾಟಗಳು ನಡೆಯುತ್ತಲೇ ಇರಲಿವೆ. ಆದರೆ, ಈ ಹೋರಾಟಗಳನ್ನು ನಾವು ಹಿಂದೂಗಳ ಜೊತೆಗೆ ಜೋಡಿಸಬಾರದು. ಹಲವಾರು ಹಿಂದೂಗಳು ಇಂದಿಗೂ ದೇವಸ್ಥಾನಕ್ಕೆ ಹೋಗುವುದಿಲ್ಲ. ಆದರೂ ಕೂಡ ಅವರೆಲ್ಲರೂ ಹಿಂದೂಗಳೇ ಆಗಿದ್ದಾರೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ದೇಶದ ಕುರಿತು ಹೇಳಿಕೆ ನೀಡುವುದನ್ನು ರಾಜಕೀಯ ಎಂದು ತಿಳಿಯಲಾಗುತ್ತದೆ. ಆದರೆ, ದೇಶ ಅಥವಾ ರಾಷ್ಟ್ರದ ಕುರಿತು ಮಾತನಾಡುವುದು ರಾಜಕೀಯ ಅಲ್ಲ. ಕೋಮುವಾದದ ವ್ಯಾಖ್ಯೆ ಎಂದು ಎಂಬುದನ್ನು ನಾವು ಅವರಿಗೆ ಕೇಳಬೇಕು. ಈ ದೇಶದಲ್ಲಿ ಹಿಂದುಗಳೂ ಎಂದಿಗೂ ಕೋಮುವಾದಿಗಳಾಗಿಲ್ಲ. ಹಿಂದೂಗಳು ಒಂದೇ ದೇವರು ಹಾಗೂ ಒಂದೇ ಗ್ರಂಥಕ್ಕೆ ಸೀಮಿತವಾಗಿಲ್ಲ. ವೇದಗಳನ್ನು ಅನುಸರಿಸುವವರೂ ಕೂಡ ಹಿಂದೂಗಳಾಗಿದ್ದಾರೆ ಮತ್ತು ಅನುಸರಿಸದೆ ಇರುವವರೂ ಕೂಡ ಹಿಂದೂಗಳಾಗಿದ್ದಾರೆ ಎಂದು ಭೈಯಾಜಿ ಹೇಳಿದ್ದಾರೆ.


ಈ ದೇಶದ ಹಿಂದುಗಳನ್ನು ಕೋಮುವಾದಿಗಳು ಎಂದು ಕರೆಯುವುದು ತಪ್ಪು ಎಂದ ಭೈಯಾಜಿ, ಸಂಪ್ರದಾಯದ ನಿಮ್ಮ ಪರಿಭಾಷೆ ಏನು ಎಂದು ಪ್ರಶ್ನಿಸಿದ್ದಾರೆ. ಸಂಘ ಹಿಂದುಗಳಲ್ಲಿ ನಂಬಿಕೆ ಇಟ್ಟ ಕಾರಣ RSS ಅನ್ನು ಕೋಮುವಾದಿ ಎಂದು ಕರೆಯಲಾಗುತ್ತದೆ. ಆದರೆ, ಹಿಂದೂ ಒಂದು ಜೀವನಶೈಲಿಯಾಗಿದ್ದು, ಇದನ್ನು ಸುಪ್ರೀಂ ಕೋರ್ಟ್ ಕೂಡ ಒಪ್ಪಿದ್ದು, ಇದು ಅಭಿಮಾನದ ಸಂಗತಿಯಾಗಿದೆ.