ವಿರೋಧ ಪಕ್ಷಗಳಿಗೆ ಯಾವುದೇ ನೇತಾ,ನೀತಿ,ರಣನೀತಿ ಇಲ್ಲ- ಪ್ರಕಾಶ್ ಜಾವಡೆಕರ್
ಬಿಜೆಪಿ ತನ್ನ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರತಿಪಕ್ಷಗಳ ಮೇಲೆ ಟಿಕಾಪ್ರಹಾರ ನಡೆಸಿದೆ.ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಮಾತನಾಡುತ್ತಾ ಪ್ರತಿಪಕ್ಷಗಳಿಗೆ ಯಾವುದೇ ನೇತಾ ನೀತಿ ರಣನೀತಿಯು ಇಲ್ಲ ಎಂದು ವ್ಯಂಗವಾಡಿದ್ದಾರೆ.
ನವದೆಹಲಿ: ಬಿಜೆಪಿ ತನ್ನ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರತಿಪಕ್ಷಗಳ ಮೇಲೆ ಟಿಕಾಪ್ರಹಾರ ನಡೆಸಿದೆ.ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಮಾತನಾಡುತ್ತಾ ಪ್ರತಿಪಕ್ಷಗಳಿಗೆ ಯಾವುದೇ ನೇತಾ ನೀತಿ ರಣನೀತಿಯು ಇಲ್ಲ ಎಂದು ವ್ಯಂಗವಾಡಿದ್ದಾರೆ.
ನವ ಭಾರತದ ಕಟ್ಟುವ ಸಂಕಲ್ಪದ ಬಗ್ಗೆ ಮಾತನಾಡುತ್ತಾ ಜಾವಡೆಕರ್" ಮೋದಿ ಸರ್ಕಾರದ ಅವಧಿ 2022 ರವರೆಗೆ ನಿಶ್ಚಿತವಾಗಿದ್ದು ಅದನ್ನು ಸರ್ಕಾರದ ಯೋಜನೆಗಳ ಮೂಲಕ ನೋಡಬಹುದು. ಏಕೆಂದರೆ ಪ್ರಧಾನಮಂತ್ರಿಗಳಿಗೆ ದೃಷ್ಟಿಕೋನದ ಕಲ್ಪನೆ ಇದೆ ಎಂದು ತಿಳಿಸಿದರು.ಜಾವಡೆಕರ್ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸಾಧಿಸಿರುವ ಅಭಿವೃದ್ದಿ ಪಟ್ಟಿ ಮಾಡುತ್ತಾ ಬಿಜೆಪಿಯೇತರ ರಾಜ್ಯಗಳಾದ ಬಂಗಾಳದಲ್ಲಿ 30 ಬಿಜೆಪಿ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಗುಜರಾತ್ ನಲ್ಲಿ ಜಗತ್ತಿನ ಅತಿದೊಡ್ಡ ಸರದಾರ ಪಟೇಲ್ ಮೂರ್ತಿ ಕಟ್ಟಲಾಗುತ್ತಿದೆ ಎಂದರು.
ಪ್ರಧಾನಿ ಮೋದಿ ಜನಪ್ರಿಯತೆ ನಾಲ್ಕು ವರ್ಷಗಳ ನಂತರವು ಶೇ 70ರ ಸ್ಥಿರತೆಯನ್ನು ಕಾಯ್ದುಕೊಂಡಿದೆ,ಏಕೆಂದರೆ ಅವರು ಜನರೊಂದಿಗೆ ನೇರವಾಗಿ ಮಾತುಕತೆ ನಡೆಸುತ್ತಾರೆ ಎಂದು ತಿಳಿಸಿದರು.ಪ್ರತಿಪಕ್ಷಗಳು ಕೇವಲ ಮೋದಿಯೋಬ್ಬರನ್ನು ತಡೆಯಲು ನಕಾರಾತ್ಮಕ ರಾಜಕೀಯ ಮಾಡುತ್ತಿವೆ ಎಂದು ಜಾವಡೆಕರ್ ಟೀಕಿಸಿದರು.