ವಾಯುಸೇನೆ ಪೈಲೆಟ್ ನಾಪತ್ತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರತಿಪಕ್ಷಗಳು
ಪಾಕಿಸ್ತಾನದ ಬಾಲಾಕೋಟ್ನಲ್ಲಿ ಜೈಶ್-ಎ-ಮೊಹಮ್ಮದ್ ನಡೆಸುತ್ತಿರುವ ಭಯೋತ್ಪಾದನಾ ಶಿಬಿರದ ಮೇಲೆ ಭಾರತೀಯ ಏರ್ ಫೋರ್ಸ್ ಮಿರೇಜ್ 2000 ಫೈಟರ್ ಜೆಟ್ಗಳು ನಡೆಸಿದ ವೈಮಾನಿಕ ದಾಳಿ ಬಗ್ಗೆ ಬುಧವಾರದಂದು ಪ್ರಮುಖ ಪ್ರತಿಪಕ್ಷಗಳು ಪಕ್ಷಗಳು ಶ್ಲಾಘಿಸಿವೆ.
ನವದೆಹಲಿ: ಪಾಕಿಸ್ತಾನದ ಬಾಲಾಕೋಟ್ನಲ್ಲಿ ಜೈಶ್-ಎ-ಮೊಹಮ್ಮದ್ ನಡೆಸುತ್ತಿರುವ ಭಯೋತ್ಪಾದನಾ ಶಿಬಿರದ ಮೇಲೆ ಭಾರತೀಯ ಏರ್ ಫೋರ್ಸ್ ಮಿರೇಜ್ 2000 ಫೈಟರ್ ಜೆಟ್ಗಳು ನಡೆಸಿದ ವೈಮಾನಿಕ ದಾಳಿ ಬಗ್ಗೆ ಬುಧವಾರದಂದು ಪ್ರಮುಖ ಪ್ರತಿಪಕ್ಷಗಳು ಪಕ್ಷಗಳು ಶ್ಲಾಘಿಸಿವೆ.
ಇಂದು ಸಾಯಂಕಾಲ ಸುಮಾರು 21 ಪಕ್ಷಗಳು ಸಭೆ ಸೇರಿ ಭಾರತೀಯ ಮಿಲಿಟರಿ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಸೈನಿಕರ ತ್ಯಾಗವನ್ನು ರಾಜಕೀಯಗೋಳಿಸುತ್ತಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದವು.
ರಾಷ್ಟ್ರೀಯ ಭದ್ರತೆಯು ಕಿರಿದಾದ ರಾಜಕೀಯ ಪರಿಗಣನೆಗಳನ್ನು ಮೀರಬೇಕು" ಎಂದು 21 ಪ್ರತಿಪಕ್ಷಗಳು ಜಂಟಿ ಹೇಳಿಕೆಯ ಪ್ರಕಟಣೆಯನ್ನು ಹೊರಡಿಸಿದವು.ಅಲ್ಲದೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಸರಕಾರವು ಸರ್ವ ಪಕ್ಷಗಳ ಸಭೆಯನ್ನು ಏಕೆ ಕರೆದಿಲ್ಲ ಎಂದು ಪ್ರಶ್ನಿಸಿವೆ.
ಇದೇ ವೇಳೆ ಫೆಬ್ರವರಿ 14 ರಂದು ಪಾಕಿಸ್ತಾನ ಪ್ರಾಯೋಜಿತ ಜೈಶ್-ಇ-ಮೊಹಮ್ಮದ್ನ ಭಯೋತ್ಪಾದಕ ದಾಳಿಯನ್ನು ವಿರೋಧ ಪಕ್ಷಗಳು ಖಂಡಿಸಿ ಜಂಟಿ ನಿರ್ಣಯವನ್ನು ಪ್ರಕಟಿಸಿವೆ.