ನವದೆಹಲಿ: ಕಾಂಗ್ರೆಸ್ ಮುಖಂಡ ಶಶಿ ತರೂರ್ ಇಂದು ಕಾಶ್ಮೀರದ ಮೇಲೆ ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿ ವಿಶ್ವಸಂಸ್ಥೆಗೆ ಕೊಂಡೊಯ್ಯುವ ವಿಷಯದಲ್ಲಿ ಭಾರತದ ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಒಗ್ಗಟ್ಟಾಗಿ ನಿಂತಿವೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

'ಭಾರತದ ಆಂತರಿಕ ವಿಷಯಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಯಾವುದೇ ಹಕ್ಕು ಇಲ್ಲ. ನಾವು ವಿರೋಧ ಪಕ್ಷದಲ್ಲಿದ್ದೇವೆ, ಕಾಶ್ಮೀರದ ಬಗ್ಗೆ ದೇಶದಲ್ಲಿ ಸರ್ಕಾರವನ್ನು ಟೀಕಿಸಬಹುದು. ಆದರೆ ಭಾರತದ ಹೊರಗೆ ನಾವು ಒಂದೇ. ನಾವು ಪಾಕಿಸ್ತಾನಕ್ಕೆ ಒಂದು ಇಂಚು ಸಹ ನೀಡುವುದಿಲ್ಲ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.


ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಮೂರು ದಿನಗಳ ಜಿನೀವಾ ಪ್ರವಾಸಕ್ಕೆ ತೆರಳಿದ ನಂತರ ಶಶಿ ತರೂರ್ ಅವರ ಹೇಳಿಕೆ ಬಂದಿದ್ದು, ಇಂದು ಆರಂಭವಾಗಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (ಯುಎನ್‌ಹೆಚ್‌ಆರ್‌ಸಿ) 42 ನೇ ಅಧಿವೇಶನದಲ್ಲಿ ಅವರು ಕಾಶ್ಮೀರದ ವಿಚಾರವಾಗಿ ಮಾತನಾಡಲಿದ್ದಾರೆ.


ಈ ಹಿಂದೆ ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಪಿಒಕೆ ಆಂತರಿಕ ಸ್ಥಿತಿಯನ್ನು ಪಾಕಿಸ್ತಾನ ಬದಲಾಯಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದರು. ಇಂದು ನಮ್ಮ ಮೇಲೆ ಅವರು ಏನೂ ಆರೋಪ ಮಾಡುತ್ತಿದ್ದಾರೋ ಅವರು ಅದನ್ನು ಈ ಹಿಂದೆಯೇ ಮಾಡಿದ್ದಾರೆ. ನಮ್ಮ ಮೇಲೆ ಅವರಿಗೆ ಬೆರಳು ತೋರಿಸಲು ಯಾವುದೇ ಹಕ್ಕು ಇಲ್ಲ ಎಂದು ತರೂರ್ ಸ್ಪಷ್ಟಪಡಿಸಿದರು.


ಮುಂಬರುವ ವಿಶ್ವಸಂಸ್ಥೆಯಲ್ಲಿನ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಬಗ್ಗೆ ಪ್ರತಿಪಕ್ಷಗಳ ನಿಲುವುಗಳ ಬಗ್ಗೆ ಕೇಳಿದಾಗ ಅದಕ್ಕೆ ತರೂರ್ ಪ್ರತಿಪಕ್ಷಗಳು ಅವರ ಜೊತೆ ಇರಲಿವೆ ಎಂದು ಹೇಳಿದರು.ಆದಾಗ್ಯೂ, ಕಾಶ್ಮೀರಿಗಳು ಎದುರಿಸುತ್ತಿರುವ ತೊಂದರೆಗಳು ನಿಜ ಮತ್ತು  ಆದ್ದರಿಂದ ವಿರೋಧ ಪಕ್ಷಗಳು ಕೇಂದ್ರದ ವಿಧಾನಗಳನ್ನು ಪ್ರಶ್ನಿಸುವುದನ್ನು ಮುಂದುವರಿಸುತ್ತವೆ ಎಂದು ಶಶಿ ತರೂರ್ ಹೇಳಿದರು.