15 ವರ್ಷಗಳ ನಂತರ ಎದುರಾಯ್ತು ಮೋದಿ ಸರ್ಕಾರಕ್ಕೆ ಅವಿಶ್ವಾಸ ಕಂಟಕ !
ಈ ಹಿಂದೆ 2003 ರಲ್ಲಿ ಸೋನಿಯಾ ಗಾಂಧಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ವಿರುದ್ದ ಅವಿಶ್ವಾಸ ಮತ ಮಂಡನೆಯನ್ನು ಮಂಡಿಸಿದ್ದರು
ನವದೆಹಲಿ: ಶುಕ್ರವಾರದಂದು ಲೋಕಸಭೆಯಲ್ಲಿ ಮೋದಿ ಸರ್ಕಾರವು ಅವಿಶ್ವಾಸ ಮತಯಾಚನೆಯನ್ನು ಎದುರಿಸಲಿದೆ. ಆ ಮೂಲಕ 15 ವರ್ಷಗಳ ನಂತರ ಮೊದಲ ಬಾರಿಗೆ ಸರ್ಕಾರವೊಂದಕ್ಕೆ ಅವಿಶ್ವಾಸ ಮಂಡನೆ ಎದುರಾಗಲಿದೆ.
ಈ ಹಿಂದೆ 2003 ರಲ್ಲಿ ಸೋನಿಯಾ ಗಾಂಧಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ವಿರುದ್ದ ಅವಿಶ್ವಾಸ ಮತ ಮಂಡನೆಯನ್ನು ಮಂಡಿಸಿದ್ದರು.ಆಗ ಇದನ್ನು ಸಾಭಿತುಪಡಿಸಲು ಸಂಖ್ಯೆ ಇರದಿದ್ದರೂ ಕೂಡ ಸರ್ಕಾರದ ಗಮನ ಸೆಳೆಯಲು ಪ್ರತಿಪಕ್ಷಗಳು ಈ ಕ್ರಮಕ್ಕೆ ಮುಂದಾಗಿದ್ದವು. ಈ ಬಾರಿ ಅವಿಶ್ವಾಸ ಮಂಡನೆಯನ್ನು ಕಾಂಗ್ರೆಸ್,ತೆಲುಗು ದೇಶಂ, ಶರದ್ ಪವಾರ್ ರ ಎನ್ಸಿಪಿ ಪಕ್ಷಗಳು ಮಂಡಿಸಿವೆ.
ಸದ್ಯದ ಪರಿಸ್ಥಿತಿಯಲ್ಲಿ ಈ ವಿಶ್ವಾಸ ಮಂಡನೆ ಪ್ರಸ್ತುತ ಸರಕಾರಕ್ಕೆ ಯಾವುದೇ ರೀತಿ ತೊಂದರೆಯನ್ನುಂಟು ಮಾಡುವುದಿಲ್ಲ,ಕಾರಣವಿಷ್ಟೇ ಬಿಜೆಪಿ ತನ್ನ ಮಿತ್ರ ಪಕ್ಷಗಳೆಲ್ಲವೂ ಸೇರಿ ಒಟ್ಟು 300 ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ.