ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ವಿರುದ್ಧ ಪ್ರತಿಪಕ್ಷಗಳು ಗರಂ
ರಾಜ್ಯಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ಸಹಿತ ಇತರ ಪ್ರತಿಪಕ್ಷಗಳು ರಾಜ್ಯಸಭಾ ಅಧ್ಯಕ್ಷ ಮತ್ತು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿವೆ.
ನವದೆಹಲಿ:ರಾಜ್ಯಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ಸಹಿತ ಇತರ ಪ್ರತಿಪಕ್ಷಗಳು ರಾಜ್ಯಸಭಾ ಅಧ್ಯಕ್ಷ ಮತ್ತು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿವೆ.
ಈ ಕಾರಣಕ್ಕಾಗಿ ಈಗ ಇದೇ ಮೊದಲ ಬಾರಿಗೆ ಪ್ರತಿಪಕ್ಷಗಳೆಲ್ಲವು ಸಹಿತ ಅವರಿಗೆ ಪತ್ರ ಬರೆದಿವೆ.ಈಗಾಗಲೇ ಇದೆ ವಿಷಯವಾಗಿ ಲೋಕಸಭೆಯಲ್ಲಿ ಸುಮಿತ್ರಾ ಮಹಾಜನ್ ಅವರು ಪತ್ರವನ್ನು ಪ್ರತಿಪಕ್ಷಗಳಿಂದ ಸ್ವೀಕರಿಸಿದ್ದಾರೆ.ಪತ್ರದಲ್ಲಿ ಎಂಟು ವಿರೋಧಪಕ್ಷಗಳ ನಾಯಕರು ಅವಿಶ್ವಾಸ ಮತ ಪ್ರಸ್ತಾವದಲ್ಲಿ ಲೋಕಸಭಾ ಅಧ್ಯಕ್ಷೆ ನಡೆದುಕೊಂಡ ರೀತಿಗೆ ಗರಂ ಆಗಿದ್ದವು.
ಆದ್ದರಿಂದ ಈಗಾಗಲೇ ಈ ನಡೆಗೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ,ಮತ್ತು ಶರದ್ ಪವಾರ್ ಅವರ ಎನ್ ಸಿ ಪಿ ಬೆಂಬಲ ವ್ಯಕ್ತಪಡಿಸಿವೆ.ಪ್ರತಿಪಕ್ಷಗಳು ಅಭಿಪ್ರಾಯಪಟ್ಟಿರುವಂತೆ ರಾಜ್ಯಸಭಾ ಸಚಿವಾಲಯ ರಾಜ್ಯಸಭಾ ಚಾನೆಲ್ ನ್ನು ಆಡಳಿತ ಪಕ್ಷಕ್ಕೆ ಅನುಗುಣವಾಗುವಂತೆ ನಡೆಸಲಾಗುತ್ತದೆ ಎಂದು ದೂರಿವೆ.