Spot hidden Ant: ರಾಶಿ ರಾಶಿ ಬ್ಲೂಬೆರ್ರಿ ಮಧ್ಯೆ ಏನಿದೆ ಎಂದು ಹುಡುಕುತ್ತಿದ್ದೀರಾ? ಇಲ್ಲಿ ಒಂದು ಇರುವೆ ಇದೆ. ಆ ಇರುವೆಯನ್ನು ನೀವು ಕೇವಲ 10 ಸೆಕೆಂಡ್ ಗಳಲ್ಲಿ ಪತ್ತೆ ಹಚ್ಚಿದ್ರೆ ನಿಮ್ಮಷ್ಟು ಬುದ್ದಿವಂತರು ಮತ್ತೊಬ್ಬರಿಲ್ಲ ಎನ್ನಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗ್ರಹ ಗೋಚರದಿಂದ ಈ ರಾಶಿಯವರ ಲೈಫೇ ಚೇಂಜ್! ಐಷಾರಾಮಿ ಜೀವನ- ಎರಡೂ ಕೈಗಳಿಂದ ಬಾಚುವಷ್ಟು ಧನಪ್ರಾಪ್ತಿ!


ನಿಮ್ಮ ಬಳಿ ನಿಮಗಿಷ್ಟವಾದ ಹಣ್ಣಿನ ರಾಶಿ ಇದೆ ಎಂದಿಟ್ಟುಕೊಳ್ಳೋಣ, ಅದನ್ನು ಕಂಡೊಡನೆ ಹೌಹಾರಿ ತಿನ್ನುತ್ತೀರ. ಆದರೆ ದಿಢೀರ್ ಎಂದು ನಿಮಗೆ ಅರಿವಾಗುತ್ತದೆ, ಅದರಲ್ಲಿ ಇರುವೆ ಇದೆ ಎಂದು. ಹಾಗಿದ್ದಾಗ ನೀವು ಮೊದಲೇ ಇರುವೆಯನ್ನು ಹುಡುಕಿ, ಹಣ್ಣನ್ನು ಸ್ವಚ್ಛಗೊಳಿಸಿ ತಿನ್ನುತ್ತೀರಾ… ಅಲ್ಲವೇ! ಅಂತೆಯೇ ಇಲ್ಲಿಯೂ ಹಣ್ಣಿನ ರಾಶಿ ಇದ್ದು, ಅದರಲ್ಲಿ ಇರುವೆ ಸೇರಿಕೊಂಡಿದೆ. ಅದನ್ನು ಪತ್ತೆಹಚ್ಚಿ ಹಣ್ಣಿನ ಸವಿಯನ್ನು ಸವಿಯಿರಿ.


ಇತ್ತೀಚೆಗೆ ಈ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ವೈರಲ್ ಆಗಿದ್ದೇ ತಡ ಅನೇಕ ಜನರು ಅದರಲ್ಲಿ ಇರುವೆ ಹುಡುಕಲು ಪ್ರಾರಂಭಿಸಿದ್ದಾರೆ. ಕೆಲವು ಬೆರಿಹಣ್ಣುಗಳ ಒಂದೆರಡು ಗುಂಪಿನಲ್ಲಿ ಇರುವೆ ಕುಳಿತಿದೆ ಎಂದು ಹೇಳಿದರೆ, ಮತ್ತೂ ಕೆಲವರು ಮಧ್ಯದಲ್ಲಿ ಕುಳಿತಿದೆ ಎಂದು ಹೇಳುತ್ತಿದ್ದಾರೆ. ಇರುವೆ ಬಣ್ಣ ಮತ್ತು ಬೆರ್ರಿ ಹಣ್ಣಿನ ಬಣ್ಣ ಒಂದೇ ಆಗಿರುವುದರಿಂದ ಸುಲಭವಾಗಿ ಕಾಣಿಸುತ್ತಿಲ್ಲ.


ಈ ಚಿತ್ರಕ್ಕಾಗಿ ಸಾಮಾಜಿಕ ಮಾಧ್ಯಮದ ಬಳಕೆದಾರರಿಗೆ 10 ಸೆಕೆಂಡುಗಳ ಚಾಲೆಂಜ್ ನೀಡಲಾಗಿದೆ. ಈ ಸಮಯದಲ್ಲಿ ನೀವು ಈ ಇರುವೆಯನ್ನು ಕಂಡುಹಿಡಿದರೆ, ನೀವು ನಿಜವಾಗಿಯೂ ಮೇಧಾವಿ ಎಂದು ಕರೆಯಲ್ಪಡುತ್ತೀರಿ. ಚಿತ್ರ ನೋಡಲು ಎಷ್ಟು ಸುಲಭವೋ, ಅದರಲ್ಲಿ ಇರುವೆ ಹುಡುಕುವುದೂ ಅಷ್ಟೇ ಕಷ್ಟ ಎನ್ನುವ ಒಂದು ಅಂಶವೂ ಇದೆ.


ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರ್ತಿಯನ್ನೇ ಗುಟ್ಟಾಗಿ ಮದುವೆಯಾದ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್’ಮನ್! ಫೋಟೋಸ್ ನೋಡಿ


ಉತ್ತರ ಏನು ಎಂದು ತಿಳಿಯಿರಿ…


ನಿಮಗೆ ಈ ಚಿತ್ರದಲ್ಲಿ ಇರುವೆ ಕಾಣಸಿಗದೇ ಇದ್ದರೆ ಅದಕ್ಕೆ ಉತ್ತರ ಹೇಳುತ್ತೇವೆ. ನೀವು ಚಿತ್ರವನ್ನು ಗಮನವಿಟ್ಟು ನೋಡಿದರೆ, ಎಡಭಾಗದಲ್ಲಿ ಕೆಳಗಿನಿಂದ ಮೇಲಕ್ಕೆ ಇರುವ ನಾಲ್ಕನೇ ಸಾಲಿನಲ್ಲಿ ಮೊದಲ ಹೂವಿನ ಬಲಭಾಗದಲ್ಲಿ ಇರುವೆ ಕುಳಿತಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ