ನವದೆಹಲಿ: ಸ್ವರಾಜ್ ಇಂಡಿಯಾ ಪಕ್ಷವು ಪ್ರತಿಪಕ್ಷಗಳ ಮಹಾಘಟಬಂಧನ್ ದ ಭಾಗವಾಗಿರುವುದಿಲ್ಲ ತಮ್ಮ ಗುರಿ ರೈತ ವಿರೋಧಿ ಪಕ್ಷಗಳನ್ನು ಸೋಲಿಸುವುದು ಎಂದು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ತಿಳಿಸಿದರು. 


COMMERCIAL BREAK
SCROLL TO CONTINUE READING

ಸ್ವರಾಜ್ ಇಂಡಿಯಾ ಪಕ್ಷದ 'ರಾಷ್ಟ್ರ ನಿರ್ಮಾನ್ ಕೆ ಲಿಯೆ ಲೋಕ ಅಭಿಯಾನ'ಕ್ಕೆ ಚಾಲನೆ ನೀಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೋಗೇಂದ್ರ ಯಾದವ್ "2019 ರ ಚುನಾವಣೆಗೆ ನಾವು ಯಾವುದೇ ಮಹಾಘಟಬಂಧನ್ ದ ಭಾಗವಾಗಿ ಹೋಗುತ್ತಿಲ್ಲ.ಅಧಿಕಾರ ಎನ್ನುವುದು ನಮ್ಮ ಪಕ್ಷದ ಉದ್ದೇಶವಲ್ಲ ಆದರೆ ಅಧಿಕಾರದಿಂದ ಹಾಳಾದವರಿಗೆ ನಾವು ಪಾಠ ಕಲಿಸಲು ಬಯಸುತ್ತೇವೆ ಎಂದು ಹೇಳಿದರು.ಸ್ವರಾಜ್ ಇಂಡಿಯಾ ಪಕ್ಷವು ಕೇಂದ್ರದಲ್ಲಿರುವ ಪಕ್ಷವನ್ನು ಬದಲಿಸಲು ಇಚ್ಚಿಸುತ್ತದೆ ಆದರೆ ಇದರರ್ಥ ಇತರ ಪಕ್ಷವನ್ನು ಬೆಂಬಲಿಸುವುದಲ್ಲ ಎಂದರು.


ಮುಂಬರುವ ಲೋಕಸಭಾ ಚುನಾವಣೆಯು 2019 ತುರ್ತುಪರಿಸ್ಥಿತಿ ನಂತರ ಇಂದಿರಾಗಾಂಧಿ ಆಳ್ವಿಕೆಯನ್ನು ಕೊನೆ ಗೊಳಿಸಿದ ಹಾಗೆ ಪ್ರಸ್ತಕ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲಿದೆ. ಬಹಳ ದಿನಗಳ ನಂತರ  ರೈತರ ಸಮಸ್ಯೆಗಳು ರಾಷ್ಟ್ರೀಯ ವೇದಿಕೆಯಲ್ಲಿ ಚರ್ಚೆ ಮಾಡುವ ಹಾಗೆ ಆಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರೈತರ ಸಮಸ್ಯೆಗಳು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ತಿಳಿಸಿದರು.



.