ಪೌರತ್ವ ಕಾಯ್ದೆ ವಿರೋಧಿ ಹೋರಾಟಕ್ಕೆ 300ಕ್ಕೂ ಅಧಿಕ ಗಣ್ಯ ವ್ಯಕ್ತಿಗಳ ಬೆಂಬಲ
ನಟ ನಾಸೀರುದ್ದೀನ್ ಷಾ, ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್, ಗಾಯಕ ಟಿ.ಎಂ.ಕೃಷ್ಣ, ಲೇಖಕ ಅಮಿತಾವ್ ಘೋಷ್ ಮತ್ತು ಇತಿಹಾಸಕಾರ ರೊಮಿಲಾ ಥಾಪರ್ ಸೇರಿದಂತೆ 300 ಕ್ಕೂ ಹೆಚ್ಚು ಪ್ರಖ್ಯಾತ ವ್ಯಕ್ತಿಗಳು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಇತರರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ನಟ ನಾಸೀರುದ್ದೀನ್ ಷಾ, ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್, ಗಾಯಕ ಟಿ.ಎಂ.ಕೃಷ್ಣ, ಲೇಖಕ ಅಮಿತಾವ್ ಘೋಷ್ ಮತ್ತು ಇತಿಹಾಸಕಾರ ರೊಮಿಲಾ ಥಾಪರ್ ಸೇರಿದಂತೆ 300 ಕ್ಕೂ ಹೆಚ್ಚು ಪ್ರಖ್ಯಾತ ವ್ಯಕ್ತಿಗಳು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಇತರರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ಭಾರತದ ಆತ್ಮಕ್ಕೆ ಅಪಾಯ ಎಂದು ಸಹಿ ಮಾಡಿದವರು ಜನವರಿ 13 ರಂದು ಭಾರತೀಯ ಸಾಂಸ್ಕೃತಿಕ ವೇದಿಕೆಯಲ್ಲಿ(Indian Cultural Forum) ಪ್ರಕಟಿಸಿದ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿಗೆ ವಿರುದ್ಧವಾಗಿ ಪ್ರತಿಭಟಿಸುತ್ತಿರುವ ಮತ್ತು ಮಾತನಾಡುವ ವಿದ್ಯಾರ್ಥಿಗಳು ಮತ್ತು ಇತರರೊಂದಿಗೆ ನಾವು ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ. ಬಹುತ್ವ ಹಾಗೂ ವೈವಿದ್ಯಮಯ ಸಮಾಜವನ್ನು ಒಳಗೊಳ್ಳುವ ಭಾರತದ ಸಂವಿಧಾನದ ತತ್ವಗಳನ್ನು ಎತ್ತಿಹಿಡಿದಿರುವ ಅವರ ಸಾಮೂಹಿಕ ಕೂಗಿಗೆ ಸೆಲ್ಯೂಟ್ ಎಂದು ತಿಳಿಸಿದ್ದಾರೆ.
'ನಾವು ಯಾವಾಗಲೂ ಆ ವಚನಕ್ಕೆ ತಕ್ಕಂತೆ ಬದುಕಿಲ್ಲ ಎಂದು ನಮಗೆ ತಿಳಿದಿದೆ, ಮತ್ತು ನಮ್ಮಲ್ಲಿ ಅನೇಕರು ಅನ್ಯಾಯದ ನಡುವೆಯೂ ಮೌನವಾಗಿರುತ್ತೇವೆ. ಈ ಕ್ಷಣವು ನಾವು ಪ್ರತಿಯೊಬ್ಬರೂ ನಮ್ಮ ತತ್ವಗಳಿಗೆ ನಿಲ್ಲಬೇಕೆಂದು ಒತ್ತಾಯಿಸುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಬರಹಗಾರರಾದ ಅನಿತಾ ದೇಸಾಯಿ, ಕಿರಣ್ ದೇಸಾಯಿ, ನಟರಾದ ರತ್ನ ಪಟಕ್ ಷಾ, ಜಾವೇದ್ ಜಾಫೆರಿ, ನಂದಿತಾ ದಾಸ್ ಮತ್ತು ಲಿಲ್ಲೆಟ್ ದುಬೆ; ಸಮಾಜಶಾಸ್ತ್ರಜ್ಞ ಆಶಿಸ್ ನಂದಿ; ಕಾರ್ಯಕರ್ತರಾದ ಸೊಹೈಲ್ ಹಶ್ಮಿ ಮತ್ತು ಶಬ್ನಮ್ ಹಶ್ಮಿ ಸಹ ಸಹಿ ಹಾಕಿದರು.
ಪ್ರಸ್ತುತ ಸರ್ಕಾರದ ನೀತಿಗಳು ಮತ್ತು ಕಾರ್ಯಗಳು ಸಂಸತ್ತಿನ ಮೂಲಕ ತ್ವರಿತವಾಗಿ ಜಾರಿಗೆ ಬಂದವು ಮತ್ತು ಸಾರ್ವಜನಿಕ ಭಿನ್ನಾಭಿಪ್ರಾಯ ಅಥವಾ ಮುಕ್ತ ಚರ್ಚೆಗೆ ಅವಕಾಶವಿಲ್ಲದೆ ಜಾತ್ಯತೀತ, ಅಂತರ್ಗತ ರಾಷ್ಟ್ರದ ತತ್ವಕ್ಕೆ ವಿರುದ್ಧವಾಗಿವೆ ಎಂದು ಅವರು ಹೇಳಿದ್ದಾರೆ