ನವದೆಹಲಿ: ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್‌ಎಡಿಎ) ಸೆಪ್ಟೆಂಬರ್ 2019 ರ ತನ್ನ ಮಾಸಿಕ ವಾಹನ ನೋಂದಣಿ ದತ್ತಾಂಶದಲ್ಲಿ ತೀವ್ರ ಕುಸಿತ ಕಂಡಿದೆ ಎಂದು ತಿಳಿಸಿದೆ.


COMMERCIAL BREAK
SCROLL TO CONTINUE READING

ಹಬ್ಬದ ಸಂದರ್ಭದಲ್ಲಿಯೂ ವಾಹನ ನೋಂದಣಿ ಪ್ರಮಾಣದಲ್ಲಿ ಕುಸಿತ ಕಂಡಿರುವುದು ಈಗ ಕಳವಳಕ್ಕೆ ಕಾರಣವಾಗಿದೆ. ಇದು ಗ್ರಾಹಕರ ಮನೋಭಾವದಲ್ಲಿನ ದೌರ್ಬಲ್ಯವನ್ನು ಪ್ರತಿಬಿಂಬಿಸುತ್ತದೆ. ಒಂದು ವರ್ಷದ ಆಧಾರದ ಮೇಲೆ, ಒಟ್ಟಾರೆ ವಾಹನ ನೋಂದಣಿ ಶೇಕಡಾ 12.9 ರಷ್ಟು ಕುಸಿಯಿತು. ದ್ವಿಚಕ್ರ ವಾಹನಗಳ ನೋಂದಣಿಯಲ್ಲಿ ಶೇಕಡಾ 12.1 ರಷ್ಟು ಕಡಿಮೆಯಾಗಿದೆ.ಪ್ರಯಾಣಿಕರ ವಾಹನಗಳ ದಾಸ್ತಾನು ಸ್ವಲ್ಪಮಟ್ಟಿಗೆ ಏರಿತು ಆದರೆ ದ್ವಿಚಕ್ರ ವಾಹನ ದಾಸ್ತಾನು ಹೆಚ್ಚಾಗಿದೆ.


ವಾಣಿಜ್ಯ ವಾಹನಗಳಿಗೆ ಸಂಬಂಧಿಸಿದಂತೆ, ನೋಂದಣಿ ಶೇಕಡಾ 18.5 ರಷ್ಟು ಕಡಿಮೆಯಾಗಿದ್ದರೆ, ಪ್ರಯಾಣಿಕರ ವಾಹನ ನೋಂದಣಿ ಶೇಕಡಾ 20.1 ರಷ್ಟು ಕಡಿಮೆಯಾಗಿದೆ. ತ್ರಿಚಕ್ರ ವಾಹನ ಮಾತ್ರ ಮಾರುಕಟ್ಟೆಯಲ್ಲಿ ಶೇಕಡಾ 1.8 ರಷ್ಟು ಕನಿಷ್ಠ ಬೆಳವಣಿಗೆಯನ್ನು ಕಂಡಿದೆ.ಇತ್ತೀಚಿಗೆ ಸರ್ಕಾರ ಘೋಷಿಸಿದ ಸಕಾರಾತ್ಮಕ ಕ್ರಮಗಳ ಸಂಪೂರ್ಣ ಪರಿಣಾಮಗಳು ಚಿಲ್ಲರೆ ಮಟ್ಟದಲ್ಲಿ ಇನ್ನೂ ಗೋಚರಿಸಲಿಲ್ಲ ಎನ್ನಲಾಗಿದೆ. 2019 ರ ಅಕ್ಟೋಬರ್ ತಿಂಗಳು ಈಗ ಅತಿ ಅವಶ್ಯಕವಾದ ತಿಂಗಳಾಗಿದ್ದು, ಇದು ಈ ವರ್ಷದ ದ್ವಿತೀಯಾರ್ಧದ ಪ್ರವೃತ್ತಿಗಳನ್ನು ಸೂಚಿಸುವ ನಿರ್ಣಾಯಕ ತಿಂಗಲಾಗಿದೆ.