Owaisi On Rahul Remarks: ಭಾನುವಾರ ರಾಜಸ್ಥಾನದ (Rajasthan) ರಾಜಧಾನಿ ಜೈಪುರದಲ್ಲಿ (Jaipur) ಕಾಂಗ್ರೆಸ್‌ನ ‘ಹಣದುಬ್ಬರ ತೊಲಗಿಸಿ ರ‍್ಯಾಲಿ’ಯಲ್ಲಿ ರಾಹುಲ್ ಗಾಂಧಿ ಹಣದುಬ್ಬರಕ್ಕಿಂತ (Inflation) ಹಿಂದೂ (Hindu) ಮತ್ತು ಹಿಂದುತ್ವದ (Hindutva) ಬಗ್ಗೆ ಹೆಚ್ಚು ಮಾತನಾಡಿದ್ದಾರೆ ಮತ್ತು ಅವುಗಳ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದ ಅವರು, ಹಿಂದುತ್ವವಾದಿಗಳನ್ನು ಅಧಿಕಾರದಿಂದ ತೆಗೆದುಹಾಕಿ ಹಿಂದೂಗಳನ್ನು ಮರಳಿ ಕರೆತರುವಂತೆ ವೇದಿಕೆಯಲ್ಲಿ ಮನವಿ ಮಾಡಿದ್ದಾರೆ. ರಾಹುಲ್ ಗಾಂಧಿಯವರ (Rahul Gandhi) ಈ ಮನವಿಯನ್ನು ಪ್ರಶ್ನಿಸಿದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖಂಡ ಅಸಾದುದ್ದೀನ್ ಓವೈಸಿ (Asaduddin Owaisi), ಭಾರತ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯನಿಗೂ ಸೇರಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನ ಜಾತ್ಯತೀತತೆಯನ್ನು ವ್ಯಂಗ್ಯವಾಡಿದ ಅವರು, ಹಿಂದೂಗಳನ್ನು ಅಧಿಕಾರಕ್ಕೆ ತರುವುದು ಎಂತಹ ಜಾತ್ಯಾತೀತ ಅಜೆಂಡಾ (Secular Agenda) ಆಗಲು ಸಾಧ್ಯ? ಎಂದು ಒವೈಸಿ ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

'ರಾಹುಲ್ ಹಾಗೂ ಅವರ ಕಾಂಗ್ರೆಸ್ ಪಕ್ಷ ಹಿಂದುತ್ವದ ನೆಲವನ್ನು ಫಲವತ್ತಾದ ಭೂಮಿಯನ್ನಾಗಿಸಿಕೊಂಡಿದ್ದಾರೆ. ಈಗ ಅವರು ಬಹುಸಂಖ್ಯಾತರ ಬೆಳೆಯನ್ನು ಬೆಳೆಯಲುಪ್ರಯತ್ನಿಸುತ್ತಿದ್ದಾರೆ. ಹಿಂದೂಗಳನ್ನು ಅಧಿಕಾರಕ್ಕೆ ತರುವುದು 2021ರ ಸೆಕ್ಯೂಲರ್ ಅಜೆಂಡಾ ಆಗಿದೆಯಂತೆ. ವ್ಹಾ ! ಭಾರತ ಎಲ್ಲ ಭಾರತೀಯರಿಗೆ ಸೇರಿದೆ. ಕೇವಲ ಹಿಂದೂಗಳಿಗೆ ಮಾತ್ರ ಅಲ್ಲ. ಭಾರತ ಎಲ್ಲ ಧರ್ಮೀಯ ಜನರಿಗೆ ಸೇರಿದೆ ಹಾಗೂ ಯಾವುದೇ ಧರ್ಮದಲ್ಲಿ ವಿಶ್ವಾಸ ಹೊಂದಿರದವರಿಗೂ ಕೂಡಸೇರಿದೆ' ಎಂದು ಒವೈಸಿ ಹೇಳಿದ್ದಾರೆ. 


ಹಿರಿಯ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ (Salman Khurshid) ಅವರು ತಮ್ಮ ಇತ್ತೀಚಿನ ಪುಸ್ತಕದಲ್ಲಿ ಹಿಂದುತ್ವವನ್ನು ಐಎಸ್ ಮತ್ತು ಇಸ್ಲಾಮಿಕ್ ಸ್ಟೇಟ್‌ನಂತಹ ಭಯೋತ್ಪಾದಕ ಸಂಘಟನೆಗೆ ಹೋಲಿಸಿದ್ದರು. ಅಂದಿನಿಂದ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಅಂದಿನಿಂದ ರಾಹುಲ್ ಗಾಂಧಿ ಹಿಂದೂ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವನ್ನು ಹೇಳುವುದರಲ್ಲಿ ನಿರತರಾಗಿದ್ದಾರೆ. ಭಾನುವಾರ ಮತ್ತೊಮ್ಮೆ ಈ ವ್ಯತ್ಯಾಸವನ್ನು ವಿವರಿಸಿದ ರಾಹುಲ್ ಗಾಂಧಿ, “ಹಿಂದೂ ಎಂದರೆ ಎಲ್ಲ ಧರ್ಮಗಳನ್ನು ಗೌರವಿಸುವವನು, ಎಲ್ಲರನ್ನು ತಬ್ಬಿಕೊಳ್ಳುವವನು ಮತ್ತು ಯಾರಿಗೂ ಹೆದರದವನು. ಗೀತೆ, ಉಪನಿಷತ್ತು, ರಾಮಾಯಣ, ಮಹಾಭಾರತ ಓದಿ, ಬಡವರು, ದುರ್ಬಲರನ್ನು ಹತ್ತಿಕ್ಕಬೇಕು ಎಂದು ಅವುಗಳಲ್ಲಿ ಎಲ್ಲಿ ಉಲ್ಲೇಖಿಸಲಾಗಿದೆ .


ಇದನ್ನೂ ಓದಿ-ಬ್ಯಾಂಕ್ ಠೇವಣಿ ವಿಮೆ ಕುರಿತು ಮಹತ್ವದ ನಿರ್ಧಾರ:"ಜನರ ಆರ್ಥಿಕ ಸಬಲೀಕರಣವೇ ನಮ್ಮ ಗುರಿ"- ಪಿಎಂ ಮೋದಿ


ಹಿಂದೂ ಹಾಗೂ ಹಿಂದುತ್ವದ ಅರ್ಥ ಒಂದೇ ಆಗಿಲ್ಲ: ರಾಹುಲ್ 
ಜೈಪುರ್ ನಲ್ಲಿ ತಮ್ಮ ಭಾಷಣವನ್ನು ಆರಂಭಿಸಿದ ರಾಹುಲ್ ಗಾಂಧಿ, "ಎರಡು ಜೀವಗಳಿಗೆ ಒಂದೇ ಆತ್ಮ ಇರುವುದು ಸಾಧ್ಯವಿಲ್ಲ, ಇದೇ ರೀತಿ  ಎರಡು ಪದಗಳು ಒಂದೇ ಅರ್ಥವನ್ನು ಹೊಂದಲು ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಂದು ಪದಕ್ಕೂ ವಿಭಿನ್ನ ಅರ್ಥವಿದೆ. ಇಂದು ದೇಶದ ರಾಜಕೀಯದಲ್ಲಿ ಎರಡು ಪದಗಳ ಘರ್ಷಣೆ ನಡೆಯುತ್ತಿದೆ. ಎರಡು ವಿಭಿನ್ನ ಪದಗಳು. ಅವುಗಳ ಅರ್ಥಗಳು ವಿಭಿನ್ನವಾಗಿವೆ. ಒಂದು ಪದ ಹಿಂದೂ, ಇನ್ನೊಂದು ಪದ ಹಿಂದುತ್ವ. ಇದು ಒಂದು ವಿಷಯ ಅಲ್ಲ. ಇವು ಎರಡು ವಿಭಿನ್ನ ಪದಗಳು ಮತ್ತು ಅವರು ಸಂಪೂರ್ಣವಾಗಿ ವಿಭಿನ್ನ ಅರ್ಥ. ನಾನು ಹಿಂದೂ, ಆದರೆ ಹಿಂದುತ್ವವಾದಿ ಅಲ್ಲ. ‘ಮಹಾತ್ಮ ಗಾಂಧಿ ಹಿಂದೂ... ಗೋಡ್ಸೆ ಹಿಂದುತ್ವವಾದಿ. ವ್ಯತ್ಯಾಸವೇನು? ನಾನು ವ್ಯತ್ಯಾಸವನ್ನು ಹೇಳುತ್ತೇನೆ. ಏನೇ ನಡೆದರೂ ಹಿಂದೂ ಸತ್ಯವನ್ನು ಹುಡುಕುತ್ತಾನೆ. ಪ್ರಾಣ ಹೋದರು, ಕತ್ತರಿಸಲ್ಪಟ್ಟರು, ಹೊಸಗಿದರೂ ಕೂಡ ಹಿಂದೂ ಸತ್ಯವನ್ನೇ ಹುಡುಕುತ್ತಾನೆ. ಅವರ ಮಾರ್ಗ ಸತ್ಯಾಗ್ರಹ. ಅವನು ತನ್ನ ಇಡೀ ಜೀವನವನ್ನು ಸತ್ಯದ ಹುಡುಕಾಟದಲ್ಲಿ ಕಳೆಯುತ್ತಾನೆ' ಎಂದು ರಾಹುಲ್ ಹೇಳಿದ್ದರು.


ಇದನ್ನೂ ಓದಿ-BIG NEWS : ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆ ಹ್ಯಾಕ್!


'ಹಿಂದೂಗಳನ್ನು ಅಧಿಕಾರಕ್ಕೆ ತರಬೇಕಿದೆ'
ಮಹಾತ್ಮಾ ಗಾಂಧಿ ತನ್ನ ಇಡೀ ಜೀವನವನ್ನು ಸತ್ಯದ ಹುಡುಕಾಟಕ್ಕೆ ಮುಡಿಪಾಗಿಟ್ಟಿದ್ದರು ಹಾಗೂ ಅವರ ಜೀವನದ ಕೊನೆಯಲ್ಲಿ ಓರ್ವ ಹಿಂದುತ್ವವಾದಿ ಅವರ ಎದೆಗೆ ಮೂರು ಗುಂಡು ಹಾರಿಸಿದ. ಹಿಂದುತ್ವವಾದಿಗಳು ತಮ್ಮ ಇಡೀ ಜೀವನವನ್ನು ಅಧಿಕಾರದ ಚುಕ್ಕಾಣಿ ಹಿಡಿಯಲು ಕಳೆಯುತ್ತಾರೆ. ಅವರಿಗೆ ಕೇವಲ ಅಧಿಕಾರ ಬೇಕು ಮತ್ತು ಅದಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ. 'ಸತ್ಯಾಗ್ರಹ' ಅವರ ದಾರಿ ಅಲ್ಲ, 'ಸತ್ತಾ'ಗ್ರಹ' ಅವರ ದಾರಿ. ಈ ದೇಶ ಹಿಂದೂಗಳ ದೇಶ, ಹಿಂದುತ್ವವಾದಿಗಳ ದೇಶ ಇದಲ್ಲ ಹಾಗೂ ಇಂದು ಈ ದೇಶದಲ್ಲಿ ಹಣದುಬ್ಬರ ಇದೆ, ನೋವು ಇದೆ ಎಂದರೆ ಅದಕ್ಕೆ ಹಿಂದುತ್ವವಾದಿಯೇ ಕಾರಣ. ಹಿಂದುತ್ವವಾಗಿಗಳಿಗೆ ಯಾವುದೇ ಪರಿಸ್ಥಿತಿಯಲ್ಲಿ ಅಧಿಕಾರ ಬೇಕು. ಸತ್ಯದ ಕುರಿತು ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ. 2014ರಿಂದ ಹಿಂದುತ್ವವಾದಿಗಳ ಅಧಿಕಾರ ನಡೆಯುತ್ತಿದೆ, ಹಿಂದೂಗಳದ್ದಲ್ಲ. ಹೀಗಾಗಿ ನಾವು ಹಿಂದುತ್ವವಾದಿಗಳನ್ನು ಅಧಿಕಾರದಿಂದ ತೊಲಗಿಸಬೇಕಿದೆ ಹಾಗೂ ಮತ್ತೊಮ್ಮೆ ಹಿಂದುಗಳನ್ನು ಅಧಿಕಾರಕ್ಕೆ ತರಬೇಕಿದೆ' ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಹೇಳಿದ್ದರು.


ಇದನ್ನೂ ಓದಿ-ತಬ್ಲಿಘಿ ಜಮಾತ್ ಮೇಲೆ ಸೌದಿ ಅರೇಬಿಯಾ ನಿಷೇಧ, 'ಭಯೋತ್ಪಾದನೆಯ ಹೆಬ್ಬಾಗಿಲು' ಎಂದು ಬಣ್ಣಿಸಿದ ಸರ್ಕಾರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.