ನವದೆಹಲಿ: ರಾಷ್ಟ್ರ ಭದ್ರತೆಗಾಗಿ ಶ್ರೀಲಂಕಾದಲ್ಲಿ ಬುರ್ಖಾ ನಿಷೇಧದ ಕ್ರಮ ಕೈಗೊಂಡ ಬೆನ್ನಲ್ಲೇ ಭಾರತದಲ್ಲಿಯೂ ಬುರ್ಖಾ ನಿಷೇಧಿಸುವಂತೆ ಆಗ್ರಹಿಸಿರುವ ಶಿವಸೇನೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಐಎಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ. 


COMMERCIAL BREAK
SCROLL TO CONTINUE READING

ಶಿವಸೇನೆ ತನ್ನ 'ಸಾಮ್ನಾ' ಮುಖವಾಣಿಯಲ್ಲಿ ಬರೆದಿರುವ ಲೇಖನಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಓವೈಸಿ, ಬುರ್ಖಾ ನಿಷೇಧಕ್ಕೆ ಆಗ್ರಹಿಸುವ ಮೂಲಕ ಶಿವಸೇನೆ, ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ. ಈ ಕೂಡಲೇ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಓವೈಸಿ ಹೇಳಿದ್ದಾರೆ.


ಅಷ್ಟೇ ಅಲ್ಲದೆ, ಬುರ್ಖಾ ಧರಿಸುವುದು ಪ್ರತಿಯೊಬ್ಬರ ಇಚ್ಛೆಗೆ ಬಿಟ್ಟ ವಿಚಾರ. ಒಂದು ವೇಳೆ ರಾಷ್ಟ್ರದ ಭದ್ರತೆಗೆ ಬುರ್ಖಾ ಧರಿಸುವುದರಿಂದ ಅಪಾಯ ಒದಗಲಿದೆ ಎಂದಾದರೆ, ಸಾಧ್ವಿಗಳು ತೊಡುವ ಉಡುಪಿನಿಂದಲೂ ತೊಂದರೆ ಆಗುವ ಸಾಧ್ಯತೆಯಿದೆ ಎಂದು ಓವೈಸಿ ಕಿಡಿಕಾರಿದ್ದಾರೆ.


ಶಿವಸೇನೆಯ 'ಸಾಮ್ನಾ'ದಲ್ಲಿ ಪ್ರಕಟವಾಗಿರುವ ಲೇಖನವನ್ನು ಪೋಪಟ್‌ ಮಾಸ್ಟರ್‌-Popatmaster'(ಅರ್ಥಹೀನ) ಎಂದು ಕರೆದಿರುವ ಓವೈಸಿ, ಇದುವರೆಗೂ ಪ್ರಧಾನಿ ಮೋದಿ ವಿರುದ್ಧ ತೀವ್ರ ಟೀಕೆಗಳನ್ನು ಮಾಡುತ್ತಿದ್ದ ಶಿವಸೇನೆ, ಲೋಕಸಭಾ ಚುನಾವಣೆಗಾಗಿ ಬಿಜೆಪಿ ಜೊತೆ ಕೈಜೋಡಿಸಿದೆ ಎಂದು ಟೀಕಿಸಿದ್ದಾರೆ.