ನವದೆಹಲಿ: 70ನೇ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ದೇಶದ 112 ಸಾಧಕರಿಗೆ ಕೇಂದ್ರ ಸರ್ಕಾರ ಅತ್ಯುನ್ನತ್ತ ನಾಗರಿಕ ಪ್ರಶಸ್ತಿಗಳನ್ನು ಶುಕ್ರವಾರ ಘೋಷಣೆ ಮಾಡಿದೆ. 


COMMERCIAL BREAK
SCROLL TO CONTINUE READING

ಕೇಂದ್ರ ಸರ್ಕಾರದ ಗೃಹ ಇಲಾಖೆಯ ವತಿಯಿಂದ ಪದ್ಮಭೂಷಣ, ಪದ್ಮಶ್ರೀ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, 4 ಮಂದಿಗೆ ಪದ್ಮವಿಭೂಷಣ, 14 ಮಂದಿಗೆ ಪದ್ಮಭೂಷಣ ಹಾಗೂ 94 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.


ಕರ್ನಾಟಕದಿಂದ ಆರ್ಟ್ ಡ್ಯಾನ್ಸರ್ ವಿಭಾಗದಲ್ಲಿ ಪ್ರಭುದೇವ್​, ವಿಜ್ಞಾನ ವಿಭಾಗದಲ್ಲಿ ರೋಹಿಣಿ ಗೊಡ್ಬೊಲೆ, ಪುರಾತತ್ವ ತಜ್ಞೆ ಶಾರಾದಾ ಶ್ರೀನಿವಾಸನ್​ ಹಾಗೂ ಸರೋದ್ ವಾದಕ ರಾಜೀವ್ ತಾರಾನಾಥ್ ಮತ್ತು ಸಮಾಜಸೇವೆ ಮತ್ತು ಪರಿಸರ ವಿಭಾಗದಲ್ಲಿ ಸಾಲುಮರದ ತಿಮ್ಮಕ್ಕ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಲಭಿಸಿದೆ. 


ಜಾನಪದ ಕಲಾವಿದೆ ತಿಜನ್​ ಬಾಯಿ, ಇಸ್ಮಾಯಿಲ್​ ಓಮರ್​,​ L&T ಮುಖ್ಯಸ್ಥ ಅನಿಲ್​ ಕುಮಾರ್​ ಮನಿಭಾಯ್​ ನಾಯ್ಕ್​ ಹಾಗೂ ಬಲವಂತ್ ಮೋರೆಶ್ವರ್​ ಪುರಂದರೆ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. 


ಅಲ್ಲದೇ, ನಟ ಖಾದರ್​ ಖಾನ್​(ಮರಣೋತ್ತರ), ನಟ ಮನೋಜ್​ ಬಾಜಪೇಯ್​, ಫುಟ್ಬಾಲ್​ ಆಟಗಾರ ಸುನೀಲ್​ ಚೆಟ್ರಿ, ಡೈರೆಕ್ಟರ್​ ಪ್ರಭುದೇವ್​, ಕ್ರಿಕೆಟರ್​ ಗೌತಮ್​ ಗಂಭೀರ್​, ಗಾಯಕ ಶಂಕರ್​ ಮಹದೇವನ್​ ಹಾಗೂ ಕುಸ್ತಿಪಟು ಭಜರಂಗಿ ಸೇರಿದಂತೆ 94 ಸಾಧಕರು ಪದ್ಮಶ್ರೀಗೆ ಪಾತ್ರರಾಗಿದ್ದಾರೆ.