ಕರ್ತಾರ್ಪುರ್ ಕಾರಿಡಾರ್ ದಲ್ಲಿ ಪಾಕಿಸ್ತಾನದ ಹಿಡನ್ ಅಜೆಂಡಾ ಅಡಗಿದೆ -ಅಮರಿಂದರ್ ಸಿಂಗ್
ಕರ್ತಾರ್ಪುರ್ ಕಾರಿಡಾರ್ ವಿಚಾರದಲ್ಲಿ ಪಾಕಿಸ್ತಾನ ಹಿಡನ್ ಅಜೆಂಡಾವನ್ನು ಹೊಂದಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರವಾಗಿ ತಾವು ಮೊದಲಿನಿಂದಲೂ ಎಚ್ಚರಿಕೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ನವದೆಹಲಿ: ಕರ್ತಾರ್ಪುರ್ ಕಾರಿಡಾರ್ ವಿಚಾರದಲ್ಲಿ ಪಾಕಿಸ್ತಾನ ಹಿಡನ್ ಅಜೆಂಡಾವನ್ನು ಹೊಂದಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರವಾಗಿ ತಾವು ಮೊದಲಿನಿಂದಲೂ ಎಚ್ಚರಿಕೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಪಾಕಿಸ್ತಾನ ಬಿಡುಗಡೆ ಮಾಡಿರುವ ಕರ್ತಾರ್ಪುರ್ ಕಾರಿಡಾರ್ ಆರಂಭದ ಕುರಿತ ವಿಡಿಯೋವೊಂದರಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕರಾದ ಜರ್ನೈಲ್ ಸಿಂಗ್ ಭಿಂದ್ರಾನ್ವಾಲೆ, ಮೇಜ್ ಜನರಲ್ ಶಬೇಗ್ ಸಿಂಗ್ ಮತ್ತು ಅಮರಿಕ್ ಸಿಂಗ್ ಖಾಲ್ಸಾ ಅವರ ಪೋಸ್ಟರ್‌ಗಳನ್ನು ಕ್ಲಿಪ್‌ನಲ್ಲಿ ತೋರಿಸಿರುವ ಹಿನ್ನಲೆಯಲ್ಲಿ ಅಮರಿಂದರ್ ಸಿಂಗ್ ಅವರ ಹೇಳಿಕೆ ಬಂದಿದೆ.
'ಸಿಖ್ ಸಮುದಾಯವು ಕಳೆದ 70 ವರ್ಷಗಳಿಂದ ಪವಿತ್ರ ಕರ್ತಾರ್‌ಪುರ ದೇಗುಲಕ್ಕೆ ಹಾದಿಯನ್ನು ತೆರೆಯುವಂತೆ ಕೇಳುತ್ತಿದೆ, ಆದರೆ ಬೇಡಿಕೆಯನ್ನು ಸ್ವೀಕರಿಸುವ ಪಾಕಿಸ್ತಾನದ ಹಠಾತ್ ನಿರ್ಧಾರವು ಒಂದು ಬಾಹ್ಯ ಉದ್ದೇಶವನ್ನು ಸೂಚಿಸುತ್ತದೆ, ಇದು ಸಿಖ್ ಸಮುದಾಯದಲ್ಲಿ ತಮ್ಮ ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಸಿಂಗ್ ಹೇಳಿದ್ದಾರೆ.
ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಜೂನ್ 1984 ರಲ್ಲಿ ಆಪರೇಷನ್ ಬ್ಲೂ ಸ್ಟಾರ್ ಸಮಯದಲ್ಲಿ ಕೊಲ್ಲಲ್ಪಟ್ಟ ಮೂವರು ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ತೋರಿಸಲಾಗಿತ್ತು.