ನವದೆಹಲಿ: ಭಾರತದ ಪಾಕ್ ಸೇನೆ ವಿರುದ್ಧ ಸರ್ಜಿಕಲ್ ದಾಳಿ ನಡೆಸಿದ ದಿನವನ್ನು ಆಚರಿಸಿದ ಬೆನ್ನಲ್ಲೇ, ಪಾಕಿಸ್ತಾನ ಮಿಲಿಟರಿ ಹೆಲಿಕಾಪ್ಟರ್ ಒಂದು ಭಾರತದ ಗಡಿಯನ್ನು ದಾಟಿ ಬಂದು ಹಾರಾಟ ನಡೆಸಿ, ಆತಂಕ ಸೃಷ್ಟಿಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.


COMMERCIAL BREAK
SCROLL TO CONTINUE READING

ಪೂಂಚ್ ಜಿಲ್ಲೆಯ ಗುಲ್​ಪುರ್ ಸೆಕ್ಟರ್​ನಲ್ಲಿ ಮಧ್ಯಾಹ್ನ 12.13ರ ಸಮಯದಲ್ಲಿ ಭಾರತದ ಗಡಿ ದಾಟಿ 250ಮೀಟರ್ ಒಳಗೆ ಬಂದ ಪಾಕಿಸ್ತಾನಿ ಹೆಲಿಕಾಪ್ಟರ್ 5 ನಿಮಿಷಗಳ ಕಾಲ ಹಾರಾಟ ನಡೆಸಿ, ನಂತರ ಹಿಂತಿರುಗಿದೆ. ನಿಯಮದ ಪ್ರಕಾರ ಇತರ ದೇಶದ ಹೆಲಿಕಾಪ್ಟರ್ಗಳು ಗಡಿ ಪ್ರದೇಶದಿಂದ 1 ಕಿ.ಮೀ. ಈಚೆವರೆಗಷ್ಟೇ ಹಾರಲು ಅನುಮತಿ ಇದೆ. ಆದರೆ, ಈ ಹೆಲಿಕಾಪ್ಟರ್ ಪ್ರದೇಶವನ್ನೂ ದಾಟಿ 250 ಮೀಟರ್ ಒಳ ಪ್ರವೇಶಿಸಿದೆ ಎನ್ನಲಾಗಿದೆ. 


ಹೆಲಿಕಾಪ್ಟರ್ ಗಡಿ ದಾಟಿ ಒಳ ಬರುತ್ತಿದ್ದಂತೆಯೇ ಭಾರತದ ಸೈನಿಕರು ಗುಂಡು ಹಾರಿಸಲು ಯತ್ನಿಸಿದ್ಧಾರೆ. ಕೆಲ ಕ್ಷಣಗಳ ಕಾಲ ಭಾರತದ ಗಡಿಯೊಳಗೆ ಹಾರಾಡಿದ ಪಾಕ್ ಹೆಲಿಕಾಪ್ಟರ್ ನಂತರ ತನ್ನ ದೇಶಕ್ಕೆ ಮರಳಿ ಹೋಗಿದೆ. ಈ ಘಟನೆಯ 30 ಸೆಕೆಂಡುಗಳ ತುಣುಕನ್ನು ಎಎನ್ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ.