ಭಾರತದ ಗಡಿ ಪ್ರವೇಶಿಸಿದ ಪಾಕ್ ಬಾಲಕ, ಮಾನವೀಯತೆ ಮೆರೆದ ಸೈನಿಕರು
ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ) ಗಡಿ ದಾಟಿ ಭಾರತದ ಗಡಿ ಪ್ರವೇಶಿಸಿದ 11 ವರ್ಷದ ಬಾಲಕನನ್ನು ಜಮ್ಮು ಕಾಶ್ಮೀರದ ಪೋಲಿಸರು ಮರಳಿ ಸ್ವೀಟ್ ನೀಡಿ ವಾಪಸ್ ಕಳುಹಿಸಿದ್ದಾರೆ.
11 ವರ್ಷದ ಬಾಲಕ ಮೊಹಮ್ಮದ್ ಅಬ್ದುಲ್ಲಾ ಅವರನ್ನು ಜೂನ್ 24 ರಂದು ಪೂಂಚ್ ಜಿಲ್ಲೆಯ ದೇಗ್ವಾರ್ ಪ್ರದೇಶದಲ್ಲಿ ಬಂಧಿಸಿ ಮತ್ತು ಅದೇ ದಿನ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಹಸ್ತಾಂತರಿಸಲಾಯಿತು.
ಬಾಲಕನ ವಯಸ್ಸಿನ ಮೇಲೆ ಮಾನವೀಯತೆ ಮೆರೆದ ರಕ್ಷಣಾ ಸಿಬ್ಬಂದಿ ಅಬ್ದುಲ್ಲಾನನ್ನು ಮಾನವೀಯ ನೆಲೆಯಲ್ಲಿ ಬಿಡುಗಡೆ ಮಾಡಿದರು.ಆ ಮೂಲಕ ಉಭಯ ದೇಶಗಳ ನಡುವಿನ ಸಂಬಂಧ ವೃದ್ದಿಗೆ ಬಾಂಧ್ಯವ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಂಡರು ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ರಕ್ಷಣಾ ಸಿಬ್ಬಂಧಿ "ಭಾರತೀಯ ಸೇನೆಯು ಮುಗ್ದ ಜನರೊಂದಿಗೆ ವ್ಯವಹರಿಸುವಾಗ ಯಾವಾಗಲು ನೀತಿ ಮತ್ತು ಮಾನವೀಯ ನೆಲೆಯಲ್ಲಿ ವರ್ತಿಸುತ್ತದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಗಡಿ ಪ್ರವೇಶಿಸಿದ ಬಾಲಕನಿಗೆ ಹೊಸ ಬಟ್ಟೆ ಮತ್ತು ಸಿಹಿ ತಿನಿಸುಗಳನ್ನು ಹೊಂದಿರುವ ಬಾಕ್ಸ್ ಗಳನ್ನು ನೀಡಿ ಪಾಕಿಸ್ತಾನದ ಅಧಿಕಾರಿಗಳಿಗೆ ಅವನನ್ನು ಹಸ್ತಾಂತರಿಸಲಾಯಿತು.