ಸರ್ಜಿಕಲ್ ಸ್ಟ್ರೈಕ್ ಬಗ್ಗೆ Pakistan ಮಾಧ್ಯಮಗಳ ಮಹತ್ವದ ಹೇಳಿಕೆ
ತನ್ನ ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳಿಂದ ಬಳಲುತ್ತಿರುವ ಭಾರತ ಸರ್ಕಾರ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಬಹುದು.
ಇಸ್ಲಾಮಾಬಾದ್: ಭಾರತ ಮತ್ತೆ ಸರ್ಜಿಕಲ್ ಸ್ಟ್ರೈಕ್ ಮಾಡಬಹುದು ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಭಾರತದ ಗಡಿಯಲ್ಲಿರುವ ಸೈನಿಕರಿಗೆ ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಅಲ್ಲಿನ ಸರ್ಕಾರ ಸೂಚಿಸಿದೆ ಎಂದು ತಿಳಿಸಿವೆ. ಪಾಕಿಸ್ತಾನ ಮಾಧ್ಯಮಗಳು ಹೀಗೆ ವರದಿ ಮಾಡಿರುವುದು, ಪಾಕಿಸ್ತಾನ ಸರ್ಕಾರ ಭಾರತದ ಮೇಲೆ ಈ ರೀತಿ ಅನುಮಾನ ಪಡುತ್ತಿರುವುದಕ್ಕೆ ಕಾರಣ ಏನು ಗೊತ್ತಾ?
ಆಶ್ಚರ್ಯ ಆಗಬಹುದು, ಆದರೂ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆಯಿಂದ 'ಗಮನವನ್ನು ಬೇರೆಡೆ ಸೆಳೆಯಲು' ಭಾರತ ಸರ್ಕಾರವು ತಮ್ಮ (ಪಾಕಿಸ್ತಾನ) ಮೇಲೆ ಸರ್ಜಿಕಲ್ ಸ್ಟ್ರೈಕ್ (Surgical strike) ಮಾಡಬಹುದು ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಇದೇ ಹಿನ್ನೆಲೆಯಲ್ಲಿ ಭಾರತದ ಗಡಿಯಲ್ಲಿರುವ ಸೈನಿಕರಿಗೆ ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಅಲ್ಲಿನ ಸರ್ಕಾರ ಸೂಚಿಸಿದೆ. ಅದನ್ನು ಮಾಧ್ಯಮಗಳು ವರದಿ ಮಾಡಿವೆ.
ರೈತರ (Farmers) ಅನಿರ್ದಿಷ್ಟಾವಧಿ ಪ್ರತಿಭಟನೆಯಿಂದ 'ಗಮನವನ್ನು ಬೇರೆಡೆ ಸೆಳೆಯಲು' ಭಾರತ ಸರ್ಕಾರವು ಪಾಕಿಸ್ತಾನ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಬಹುದು ಎಂದು ಸೇನೆಗೆ ಸೂಚಿಸಿದೆ ಎಂದು ಪಾಕಿಸ್ತಾನದ ಪ್ರಮುಖ ಪತ್ರಿಕೆ 'ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್' ವರದಿ ಮಾಡಿದೆ.
ಬಾಲಾಕೊಟ್ ವಾಯುದಾಳಿ ಕುರಿತ ಚಿತ್ರದ ಹೆಸರು ಕೇಳಿ ಕಸಿವಿಸಿಗೊಂಡ ಪಾಕ್
ಸರ್ಜಿಕಲ್ ಸ್ಟ್ರೈಕ್ ಸಾಧ್ಯತೆಯಿಂದಾಗಿ, ಪಾಕಿಸ್ತಾನವು ಭಾರತದ ಗಡಿಯಲ್ಲಿರುವ ಸೈನಿಕರ ಬಗ್ಗೆ ಹೆಚ್ಚಿನ ಎಚ್ಚರಿಕೆ ನೀಡಿದೆ ಎಂದು ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆಗಳು ಉಲ್ಲೇಖಿಸಿವೆ. "ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ದುರ್ಬಲಗೊಳಿಸಲು ಭಾರತದ ನರೇಂದ್ರ ಮೋದಿ ಸರ್ಕಾರ ಏನು ಬೇಕಾದರೂ ಮಾಡಬಹುದು" ಎಂದು 'ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್' ಬರೆದಿದೆ.
ಪಾಕಿಸ್ತಾನದ ಸೇನೆ ಭಾರತ-ಪಾಕಿಸ್ತಾನ (India Pakistan) ಗಡಿಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿದೆ ಎಂದು ಹಲವಾರು ವಿಶ್ವಾಸಾರ್ಹ ಮೂಲಗಳು ಬಹಿರಂಗಪಡಿಸಿರುವುದಾಗಿ 'ಪಾಕಿಸ್ತಾನದ ಪತ್ರಿಕೆ ಜಿಯೋ ನ್ಯೂಸ್' ಸಹ ವರದಿ ಮಾಡಿದೆ. ತನ್ನ ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳಿಂದ ಬಳಲುತ್ತಿರುವ ಭಾರತ ಸರ್ಕಾರ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಬಹುದು. ಅಲ್ಪಸಂಖ್ಯಾತರು, ರೈತ ಚಳುವಳಿ ಮತ್ತು ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ಭಾರತವು ಸಾಕಷ್ಟು ಒತ್ತಡಕ್ಕೆ ಸಿಲುಕಿದೆ ಎಂದು ವಿವರಿಸಿದೆ.
ಐದು ವರ್ಷಗಳಲ್ಲಿ ಮೂರು ಬಾರಿ ಸರ್ಜಿಕಲ್ ಸ್ಟ್ರೈಕ್: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಅವರು ಭಾರತದಲ್ಲಿ ನಡೆಯುತ್ತಿರುವ ರೈತರ ಆಂದೋಲನದ ಬಗ್ಗೆ ಟ್ವೀಟ್ ಮಾಡಿದ್ದು, "ನಿರ್ದಯ ಮೋದಿ ಸರ್ಕಾರವು ಪಂಜಾಬ್ ರೈತರಿಗೆ ಬಗ್ಗುವುದಿಲ್ಲ. ಸರ್ಕಾರವು ರೈತರನ್ನು ವಿಭಜಿಸಲು ಪ್ರಯತ್ನಿಸಬಹುದು" ಎಂದಿದ್ದಾರೆ.