ಗುಡ್ ನ್ಯೂಸ್: ಆಧಾರ್-ಪ್ಯಾನ್ ಲಿಂಕ್ ಗಡುವು ವಿಸ್ತರಣೆ
ಆರನೇ ಬಾರಿಗೆ ಸರ್ಕಾರ ಆಧಾರ್-ಪ್ಯಾನ್ ಲಿಂಕ್ ಗಡುವನ್ನು ವಿಸ್ತರಿಸಿದೆ.
ನವದೆಹಲಿ: 'ಆಧಾರ್' ಸಂಖ್ಯೆಯನ್ನು 'ಪ್ಯಾನ್' ಕಾರ್ಡ್ ನೊಂದಿಗೆ ಸಂಪರ್ಕಿಸಲು ಸರ್ಕಾರ ಮತ್ತೆ ಆರು ತಿಂಗಳು ಗಡುವು ವಿಸ್ತರಿಸಿದೆ. ಆರನೇ ಬಾರಿಗೆ ಸರ್ಕಾರ ಆಧಾರ್-ಪ್ಯಾನ್ ಲಿಂಕ್ ಗಡುವನ್ನು ವಿಸ್ತರಿಸಿದ್ದು, ಸೆಪ್ಟೆಂಬರ್ 30, 2019 ರವರೆಗೆ ಆಧಾರ್-ಪ್ಯಾನ್ ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ಯಾನ್-ಆಧಾರ್ ಜೋಡಣೆಗೆ ಈ ಮೊದಲು 2018ರ ಜೂ.30 ಕಡೆಯ ದಿನವಾಗಿತ್ತು. ನಂತರ ಇದನ್ನು ವಿಸ್ತರಿಸಿ 2019ರ ಮಾರ್ಚ್ 31 ರೊಳಗೆ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಸರ್ಕಾರ ಸೂಚಿಸಿತ್ತು.
ಇದೀಗ ಆಧಾರ್ ಸಂಖ್ಯೆಯನ್ನು ಪಾನ್ ಕಾರ್ಡ್ ಜೊತೆಗೆ ಸಂಪರ್ಕಿಸಲು ಸೆಪ್ಟೆಂಬರ್ 30, 2019 ಕೊನೆ ದಿನವಾಗಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ತಿಳಿಸಿದೆ. ಹೇಗಾದರೂ, ಏಪ್ರಿಲ್ 1, 2019 ರಿಂದ ಆದಾಯ ತೆರಿಗೆ ರಿಟರ್ನ್ ತುಂಬಲು ಆಧಾರ್ ಸಂಖ್ಯೆ ನಮೂದಿಸುವುದನ್ನು ಕಡ್ಡಾಯ ಎಂದು ಹೇಳಲಾಗಿದೆ.