ನವದೆಹಲಿ: ಇನ್ಮುಂದೆ ನೀವು ನಿಮ್ಮ ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಮನೆಯಿಂದ ಹೊರಗೆ ಹೋಗಬೇಕಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಪ್ಯಾನ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ನಿಮ್ಮ ಮನೆ ಕೆಲಸ ಅಥವಾ ಬ್ಯಾಂಕಿಂಗ್ ಕೆಲಸ ಅಥವಾ ಹಣಕಾಸಿಗೆ ಸಂಬಂಧಿಸಿದ ಇನ್ನಾವುದೇ ಕೆಲಸ ಮಾಡಬೇಕಾದಲ್ಲಿ ಪ್ಯಾನ್ ಕಾರ್ಡ್ ಅವಶ್ಯಕ ದಾಖಲೆಯಾಗಿದೆ. ಇಂದಿನ ಪರಿಸ್ಥಿತಿಯಲ್ಲಿ  ನಿಮ್ಮ ಕಾರ್ಡ್‌ನಲ್ಲಿ ಯಾವುದೆ ಅಪ್ಡೇಟ್ ಸಮಸ್ಯೆ ಇದ್ದರೆ, ಈಗ ನೀವು ತಕ್ಷಣ ಅದಕ್ಕೆ ಪರಿಹಾರ ಪಡೆಯಬಹುದಾಗಿದೆ.


COMMERCIAL BREAK
SCROLL TO CONTINUE READING

ಪ್ಯಾನ್‌ ಕಾರ್ಡ್‌ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನುNSDLeGovernance  ಟ್ವಿಟರ್‌ ಮೂಲಕ ಪರಿಹರಿಸಲಿದೆ. ಪ್ಯಾನ್ ಕಾರ್ಡ್ ಹೊಂದಿರುವವರು ಈಗ ಯಾವುದೇ ಕೆಲಸವನ್ನು ಈ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಮಾಡಬಹುದು, ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ನಂತರವೂ, ಇದುವರೆಗೂ ವಿತರಣೆ, ಪ್ಯಾನ್ ಕಾರ್ಡ್‌ನಲ್ಲಿ ಹೆಸರು ಅಥವಾ ವಿಳಾಸದ ಬದಲಾವಣೆ, ನಂತರ ಪ್ಯಾನ್ ಕಾರ್ಡ್‌ನಲ್ಲಿ ಯಾವುದೇ ರೀತಿಯ ತಿದ್ದುಪಡಿ ಕೆಲಸವನ್ನು ಈ ಹ್ಯಾಂಡಲ್ ಮೂಲಕ ಮಾಡಬಹುದಾಗಿದೆ.


ಕೆಲ ಪ್ರಕರಣಗಳಲ್ಲಿ ಸಮಸ್ಯೆಗೆ ಸಂಬಂಧಿಸಿದ ವಿವರಗಳನ್ನು ಕಸ್ಟಮರ್ ಸರ್ವಿಸ್ ಇ-ಮೇಲ್ ಐಡಿಗೂ ಸಹ ಕಳುಹಿಸಲು ಹೇಳುವ ಸಾಧ್ಯತೆ ಇದೆ. ಆದರೆ, ನೀವು ದಾಖಲಿಸುವ ದೂರಿಗೆ ತ್ವರಿತಗತಿಯಲ್ಲಿ ಉತ್ತರ ಸಿಗಲಿದೆ. NSDLeGovernance ಸೇವೆಗಳನ್ನು ನಿರ್ವಹಿಸಲು ಹಾಗೂ ಒದಗಿಸಲು ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಉತ್ತಮ ರೀತಿಯಲ್ಲಿ ಉಪಯೋಗಿಸುತ್ತಿದೆ.


NSDL e-Governance Infrastructure ಪ್ಯಾನ್ ಕಾರ್ಡ್ ಸೇವೆಗಳು, ಯುಐಡಿ ಅಥವಾ ಆಧಾರ್ ಕಾರ್ಡ್ ದಾಖಲಾತಿ ಸೇವೆ, ಎನ್‌ಪಿಎಸ್ ಮುಂತಾದ ಸೇವೆಗಳು ರಿಟೇಲ್ ಗ್ರಾಹಕರವರೆಗೆ ತಲುಪಿಸುತ್ತದೆ.


ಪ್ಯಾನ್ ಕಾರ್ಡ್‌ಗಳು ಭಾರತೀಯರಿಗೆ ಪಾಲಿಗೆ ಪ್ರಮುಖವಾದ ದಾಖಲೆಯಾಗಿದೆ. ಪ್ಯಾನ್ ಸಂಖ್ಯೆ ಇಲ್ಲದೆ ಹೋದಲ್ಲಿ ಹಲವು ಹಣಕಾಸು ವಹಿವಾಟುಗಳು ನಿಂತುಹೋಗುವ ಸಾಧ್ಯತೆ ಇದೆ. ಪ್ಯಾನ್ ಕಾರ್ಡ್‌ನಲ್ಲಿ ತೆರಿಗೆದಾರರ ಹೆಸರು, ಹುಟ್ಟಿದ ದಿನಾಂಕ ಮತ್ತು ಫೋಟೋ ಇರುತ್ತದೆ. ಆದಾಯ ತೆರಿಗೆ ಇಲಾಖೆಯಿಂದ ಪ್ಯಾನ್ ನೀಡಲಾಗುತ್ತದೆ. ನಿಮ್ಮ ಪ್ಯಾನ್ ಕಾರ್ಡ್ ಮಾನ್ಯತೆ ನೀವು ಜೀವಿಸುವ ಅವಧಿಯವರೆಗೆ ಇರಲಿದೆ.