ನವದೆಹಲಿ: ಯಂತ್ರವೊಂದು ನಿಮಗೆ ಪಾನಿಪುರಿ ವಿತರಿಸಲಿದೆ ಎಂಬುದನ್ನು ನೀವು ಎಂದಾದರೂ ಊಹಿಸಿದ್ದೀರಾ? ಹೌದು, ಇಂತಹುದೊಂದು ATM ಯಂತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಆದರೆ, ಈ ಯಂತ್ರದಿಂದ ನೀವು ಎಕ್ಸ್ಟ್ರಾ ಪಾನಿ ಆಗಲಿ ಅಥವಾ ಸಿಹಿ ಚಟ್ನಿ ಆಗಲಿ ಪಡೆಯುವ ಹಾಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ಪಾನಿಪುರಿ ATM ಅನ್ನು ನೋಡಿ ನೆಟ್ಟಿಗರು ಭಾರಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಹಲವು ಜನರು ಈ ವಿಶಿಷ್ಟ ಆವಿಷ್ಕಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಎಕೆಂದರೆ, ಕೊರೊನಾ ಪ್ರಕೋಪದ ಈ ಕಾಲದಲ್ಲಿ ಯಾವುದೇ ಓರ್ವ ವ್ಯಕ್ತಿಯ ಸಂಪರ್ಕವಿಲ್ಲದೆ ನೀವು ಪಾನಿ ಪುರಿ ಮಜಾ ಸವಿಯಬಹುದಾಗಿದೆ. ನೀವು ಕೂಡ ಈ ಮಶೀನ್ ನಿಂದ ಪಾನಿಪುರಿ ಸವಿಯಲು ಬಯಸುತ್ತೀರಾ?



COMMERCIAL BREAK
SCROLL TO CONTINUE READING

ಈ ಕುರಿತಾದ ವಿಡಿಯೋವೊಂದನ್ನು ಟ್ವೀಟ್ ಮಾಡಿರುವ ಬಳಕೆದಾರರೊಬ್ಬರು 'ಪಾನಿಪುರಿ ನೀಡುವ ATM' ಇಂದು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.