ನವದೆಹಲಿ: ಮಹಾರಾಷ್ಟ್ರದ ಬಿಜೆಪಿ ನಾಯಕಿ ಹಾಗೂ ಸಚಿವೆ ಪಂಕಜಾ ಮುಂಡೆ ರಾಜ್ಯ ಚುನಾವಣೆಯಲ್ಲಿ ಸೋಲನ್ನು ಒಪ್ಪಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಪಾರ್ಲಿಯಿಂದ ಸ್ಪರ್ಧಿಸಿದ್ದ ಪಂಕಜಾ ಮುಂಡೆ ಅವರು ತನ್ನ ಸೋದರ ಸಂಬಂಧಿ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಭ್ಯರ್ಥಿ ಧನಂಜಯ್ ಮುಂಡೆ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ. ಅಂತಿಮ ಎಣಿಕೆ ಘೋಷಿಸುವ ಮೊದಲು ಅವರು ಸುಮಾರು 30,000 ಮತಗಳಿಂದ ಹಿಂದಿದ್ದರು.


'ನಾನು ಕ್ಷೇತ್ರಕ್ಕಾಗಿ ಕೆಲಸ ಮಾಡಿದ್ದೇನೆ, ನಾನು ಸರ್ಕಾರದಲ್ಲಿದ್ದರೂ, ನನ್ನ ಕ್ಷೇತ್ರ ಮತ್ತು ಜನರ ಬಗ್ಗೆ ನನ್ನ ಹೋರಾಟ ಮುಂದುವರೆಯಿತು. ಈ ಸೋಲಿನ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಪಿಟಿಐಗೆ ತಿಳಿಸಿದ್ದಾರೆ.


ಮಹಾರಾಷ್ಟ್ರದಲ್ಲಿ ಪ್ರಚಾರದ ಕೊನೆಯ ದಿನ ಮತ್ತು ಪಾರ್ಲಿಯಲ್ಲಿ ಪಂಕಜಾ ಮುಂಡೆ ಮಾತನಾಡುವಾಗ ಕುಸಿದಿದ್ದರು. ಅಲ್ಲಿ ಹಾಜರಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಅವರ ಸಹೋದರಿ ಮತ್ತು ಬೀಡ್ ಸಂಸದೆ ಪ್ರೀತಮ್ ಮುಂಡೆ ಅವರ ಸಹಾಯಕ್ಕೆ ಧಾವಿಸಿದರು.