ಈ ರಾಜ್ಯದಲ್ಲಿ 2021ರಿಂದ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಸರ್ಕಾರಿ ಉದ್ಯೋಗಕ್ಕೆ ಅನರ್ಹರು
ಈ ನಿಯಮ 2021 ರ ಜನವರಿ 1 ರಿಂದ ಜಾರಿಗೆ ಬರಲಿದ್ದು, ರಾಜ್ಯದಲ್ಲಿ ಜನಸಂಖ್ಯಾ ಸ್ಫೋಟವನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಗುವಾಹಟಿ: 2021 ರ ಜನವರಿ 1 ರಿಂದ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಸರ್ಕಾರಿ ಉದ್ಯೋಗಕ್ಕೆ ಅರ್ಹರಲ್ಲ ಎಂದು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಸರ್ಕಾರದ ಕ್ಯಾಬಿನೆಟ್ ಸಭೆಯ ನಂತರ ಸೋಮವಾರ ಈ ನಿರ್ಧಾರ ಬಂದಿದೆ. ಅಸ್ಸಾಂನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಗ್ರಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಕ್ಯಾಬಿನೆಟ್ ಸಭೆಯಲ್ಲಿ ಇದಲ್ಲದೆ ಮನೆ ಮತ್ತು ಕೃಷಿಗಾಗಿ ಭೂಹೀನ ಸ್ಥಳೀಯರಿಗೆ ಭೂಮಿಯನ್ನು ನೀಡುವುದು ಸೇರಿದಂತೆ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಆದಾಗ್ಯೂ, ಫಲಾನುಭವಿಗಳಿಗೆ ಕನಿಷ್ಠ 15 ವರ್ಷಗಳವರೆಗೆ ತಮ್ಮ ಭೂಮಿಯನ್ನು ಮಾರಾಟ ಮಾಡಲು ಅನುಮತಿಸುವುದಿಲ್ಲ.
ಮಹಿಳೆಯರಿಗೆ ವಿಧವೆಯ ಪಿಂಚಣಿ, ಟ್ರಿಪಲ್ ತಲಾಖ್ ಗೆ ಒಳಗಾದವರಿಗೆ ಅವಲಂಬನೆ ಭತ್ಯೆ, ಕೌಶಲ್ಯ ಅಪ್-ಗ್ರೇಡೇಶನ್ ತರಬೇತಿ ನೀಡುವವರೆಗೆ ಹಲವಾರು ಪ್ರಯೋಜನಗಳನ್ನು ತರಲು ಅಸ್ಸಾಂ ಸರ್ಕಾರ ಯೋಜಿಸಿದೆ. ಉದ್ಯೋಗಗಳಲ್ಲಿ ಮಹಿಳೆಯರಿಗೆ ಕೋಟಾವನ್ನು ಶೇಕಡಾ 50 ರವರೆಗೆ ಹೆಚ್ಚಿಸಲು ಕ್ಯಾಬಿನೆಟ್ ನಿರ್ಧರಿಸಿದೆ.
ಅಸ್ಸಾಂನ ಜನಸಂಖ್ಯೆ ಮತ್ತು ಮಹಿಳಾ ಸಬಲೀಕರಣ ನೀತಿಯು ಸರ್ಕಾರದ ಕ್ರಮವನ್ನು ಬೆಂಬಲಿಸಿದ್ದು, ಇದು ತಾರ್ಕಿಕ ಪ್ರಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಅಸ್ಸಾಂ ಸರ್ಕಾರ ದೇಶದಲ್ಲಿ ಸ್ಫೋಟಕ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಲು ನಿರಂತರವಾಗಿ ಯೋಜನೆಗಳನ್ನು ರೂಪಿಸುತ್ತಿದೆ.
(With IANS input)