Parliament Canteen New Rate List ಬಿಡುಗಡೆ, ಯಾವ ಊಟದ ಪ್ಲೇಟ್ ಬೆಲೆ ಎಷ್ಟು?
Parliament Canteen New Rate List - ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 29 ರಿಂದ ಫೆಬ್ರವರಿ 15 ರವರೆಗೆ ನಡೆಯಲಿದೆ. ಈ ಹಿನ್ನೆಲೆ ಪಾರ್ಲಿಮೆಂಟ್ ಕ್ಯಾಂಟೀನ್ ನಲ್ಲಿ ಸಿಗುವ ಆಹಾರ ಪದಾರ್ಥಗಳ ನೂತನ ದರಪಟ್ಟಿ ಬಿಡುಗಡೆ ಮಾಡಲಾಗಿದೆ.
Parliament Canteen New Rate List - ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 29 ರಿಂದ ಫೆಬ್ರವರಿ 15 ರವರೆಗೆ ನಡೆಯಲಿದೆ. ಇದಕ್ಕೂ ಮೊದಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ದೊಡ್ಡ ನಿರ್ಧಾರ ತೆಗೆದುಕೊಂಡು ಸಂಸತ್ತಿನ ಕ್ಯಾಂಟೀನ್‌ನಲ್ಲಿ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದುಪಡಿಸಿದ್ದಾರೆ. ಇದರೊಂದಿಗೆ ಹೊಸ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಈಗ 100 ರೂಪಾಯಿಗಳ ಸಸ್ಯಾಹಾರಿ ಪ್ಲೇಟ್ ಊಟ ಸಿಗಲಿದ್ದರೆ ಮತ್ತು 700 ರೂಪಾಯಿಗೆ ನಾನ್ ವೆಜ್ ಬಫೆಟ್ ಲಂಚ್ ಸಂಸತ್ತಿನ ಕ್ಯಾಂಟೀನ್‌ನಲ್ಲಿ ಲಭ್ಯವೈರಲಿದೆ. ಸಂಸತ್ತಿನ ಕ್ಯಾಂಟೀನ್‌ನಿಂದ ಸಬ್ಸಿಡಿ ರದ್ದುಗೊಳಿಸುವಂತೆ ನಿರಂತರವಾಗಿ ಬೇಡಿಕೆಗಳನ್ನು ಇಡಲಾಗುತ್ತಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
ಕ್ಯಾಂಟೀನ್ ನ ಹೊಸ ದರಪಟ್ಟಿಯನ್ನೊಮ್ಮೆ ನೀವು ಅವಲೋಕಿಸಿದರೆ, ಕೇವಲ ರೊಟ್ಟಿ ಮಾತ್ರ ನಿಮಗೆ ಅಗ್ಗದ ದರದಲ್ಲಿ ಕ್ಯಾಂಟೀನ್ ನಲ್ಲಿ ಸಿಗಲಿದೆ. ಒಂದು ರೊಟ್ಟಿಯ ಬೆಲೆ ರೂ.3 ನಿಗದಿಪಡಿಸಲಾಗಿದೆ. ಇನ್ನೊಂದೆಡೆ ಮಾಂಸಾಹಾರಿ ಊಟಕ್ಕಾಗಿ ನೀವು 700 ರೂ. ಪಾವತಿಸಬೇಕು. ಇದಲ್ಲದೆ ಚಿಕನ್ ಬಿರಿಯಾನಿ ರೂ. 100, ಚಿಕನ್ ಕರಿ ರೂ.75, ಪ್ಲೇನ್ ದೋಸಾ ರೂ.30, ಮಾತನ್ ಬಿರಿಯಾನಿ ರೂ.150 ಗಳಿಗೆ ಸಿಗಲಿವೆ. ವೆಜಿಟೆಬಲ್ ಪಕೋಡಾಗೆ ನೀವು ರೂ. 50 ಪಾವತಿಸಬೇಕು.
ಸಂಸತ್ತಿನ ಕ್ಯಾಂಟೀನ್ ನ ಹೊಸ ದರಪಟ್ಟಿ ಈ ರೀತಿ ಇದೆ
[[{"fid":"201720","view_mode":"wysiwyg","fields":{"format":"wysiwyg"},"type":"media","field_deltas":{"5":{"format":"wysiwyg"}},"link_text":false,"attributes":{"class":"media-element file-wysiwyg","data-delta":"5"}}]]
[[{"fid":"201719","view_mode":"preview","fields":{"format":"preview"},"type":"media","field_deltas":{"4":{"format":"preview"}},"link_text":false,"attributes":{"class":"media-element file-preview","data-delta":"4"}}]]ಇದಕ್ಕೂ ಮೊದಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕ್ಯಾಂಟೀನ್‌ನಿಂದ ಸಬ್ಸಿಡಿಯನ್ನು ರದ್ದುಗೊಳಿಸುವ ಕುರಿತು ಮಾಹಿತಿ ನೀಡಿದ್ದರು ಮತ್ತು ಸಂಸದರು ಮತ್ತು ಇತರರಿಗೆ ನೀಡಲಾಗುವ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಹೇಳಿದ್ದರು. ಲೋಕಸಭೆಯ ವ್ಯವಹಾರ ಸಲಹಾ ಸಮಿತಿಯ ಎಲ್ಲ ಪಕ್ಷಗಳ ಸದಸ್ಯರು ಅಭಿಪ್ರಾಯವನ್ನು ಸಂಗ್ರಹಿಸುವ ಮೂಲಕ ಅದನ್ನು ರದ್ದುಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದರು. ಹೀಗಾಗಿ ಇದೀಗ ಕ್ಯಾಂಟೀನ್‌ನಲ್ಲಿ ಲಭ್ಯವಿರುವ ಆಹಾರವು ನಿಗದಿತ ಬೆಲೆಗೆ ಸಿಗಲಿದೆ.
ಇದನ್ನು ಓದಿ- Parliament Of India ಕ್ಯಾಂಟೀನ್ ಸಬ್ಸಿಡಿಗೆ ಬ್ರೇಕ್
ಪ್ರತಿ ವರ್ಷ ಸಂಸತ್ತಿನ ((Parliament) ಕ್ಯಾಂಟೀನ್‌ಗೆ ವಾರ್ಷಿಕವಾಗಿ ಸುಮಾರು 17 ಕೋಟಿ ರೂ. ಸಬ್ಸಿಡಿ ನೀಡಲಾಗುತ್ತಿತ್ತು. 2017-18ರಲ್ಲಿ ಆರ್‌ಟಿಐ ಸಂಸತ್ತಿನ ದರ ಪಟ್ಟಿಯನ್ನು ಬಹಿರಂಗಪಡಿಸಿತ್ತು. RTI ಮೂಲಕ ಪಡೆದ ಮಾಹಿತಿಯ ಪ್ರಕಾರ, ಸಂಸತ್ತಿನ ಕ್ಯಾಂಟೀನ್‌ನಲ್ಲಿ ಚಿಕನ್ ಕರಿ 50 ರೂ. ಮತ್ತು ವೆಜ್ ಥಾಲಿಯನ್ನು 35 ರೂ.ಗೆ ನೀಡಲಾಗುತ್ತಿತ್ತು. ಇದಲ್ಲದೆ ಮೂರು ಕೋರ್ಸ್ ಲಂಚ್ ಬೆಲೆಯನ್ನು 106 ರೂ.ಗಳಿಗೆ ನಿಗದಿಪಡಿಸಲಾಗಿತ್ತು. ಇದಲ್ಲದೆ ದಕ್ಷಿಣ ಭಾರತದ ಆಹಾರದಲ್ಲಿ, ಪ್ಲೇನ್ ದೋಸಾಗಾಗಿ ಸಂಸದರು ಕೇವಲ 12 ರೂಪಾಯಿಗಳನ್ನುಪಾವತಿಸುತ್ತಿದ್ದರು.
ಇದನ್ನು ಓದಿ-Modi ಸರ್ಕಾರದ ಮಹತ್ವಾಕಾಂಕ್ಷೆಯ Central Vista Redevelopment Planಗೆ SC ಹಸಿರು ನಿಶಾನೆ
ಜನವರಿ 29 ರಂದು ಪ್ರಾರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ರಾಜ್ಯಸಭೆಯು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಮತ್ತು ಲೋಕಸಭೆಯು ಸಂಜೆ 4 ರಿಂದ ರಾತ್ರಿ 8 ರವರೆಗೆ ನಡೆಯಲಿದೆ. ಈ ಮೊದಲೇ ನಿರ್ಧರಿಸಲಾಗಿರುವಂತೆ ಒಂದು ಗಂಟೆಯ ಅವಧಿ ಪ್ರಶ್ನೋತ್ತರ ಅವಧಿ ಇರಲಿದೆ ಎಂದು ಓಂ ಬಿರ್ಲಾ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ-ಸಿದ್ಧವಾಗಲಿದೆ ನೂತನ ಸಂಸತ್ ಭವನ, ಸಂಸದರಿಗೆ ಸಿಗಲಿವೆ ಆಧುನಿಕ ಸೌಲಭ್ಯಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.