ಜುಲೈ 18ರಿಂದ ಸಂಸತ್ ಮುಂಗಾರು ಅಧಿವೇಶನ
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18 ರಿಂದ ಆರಂಭವಾಗಲಿದ್ದು, ಆಗಸ್ಟ್ 10, 2018 ರವರೆಗೆ ಮುಂದುವರೆಯಲಿದೆ.
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18 ರಿಂದ ಆರಂಭವಾಗಲಿದ್ದು, ಆಗಸ್ಟ್ 10, 2018 ರವರೆಗೆ ಮುಂದುವರೆಯಲಿದೆ.
ಸೋಮವಾರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಪಿಎ) ಸಭೆಯಲ್ಲಿ ಮುಂಗಾರು ಅಧಿವೇಶನದ ದಿನಾಂಕಗಳನ್ನು ಶಿಫಾರಸು ಮಾಡಲಾಗಿದೆ.
ಈ ಅಧಿವೇಶನದಲ್ಲಿ, ಹಿಂದುಳಿದ ವರ್ಗಗಳ (ಎನ್ಸಿಬಿಸಿ) ರಾಷ್ಟ್ರೀಯ ಆಯೋಗಕ್ಕೆ ಸಂವಿಧಾನಾತ್ಮಕ ಸ್ಥಾನಮಾನದ ಪ್ರಕಾರ ಸಂವಿಧಾನದ (123 ನೇ) ತಿದ್ದುಪಡಿ ಮಸೂದೆ, 2017 ಅನ್ನು ಜಾರಿಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದಲ್ಲದೆ ಮಹತ್ವದ ಮಸೂದೆಗಳಾದ ತ್ರಿವಳಿ ತಲಾಖ್ ಮತ್ತು ತೃತಿಯ ಲಿಂಗಿಗಳಿಗೆ ಸಂಬಂಧಿಸಿದ ಮಸೂದೆಗಳೂ ಚರ್ಚೆಯಾಗುವ ಸಾಧ್ಯತೆಯಿದೆ.