ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಬಜೆಟ್ ಮಂಡಿಸಿದ ಪರಿಕ್ಕರ್
ಪಣಜಿ: ಕಳೆದ ಒಂದು ವಾರಗಳಿಂದ ಅನಾರೋಗ್ಯದ ಕಾರಣದಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ಫೆ. 15 ರಂದು ದಾಖಲಾಗಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇಂದು ಚೇತರಿಸಿಕೊಂಡು ಮತ್ತೆ ವಿಧಾನಸಭೆಗೆ ಹಾಜರಾಗಿದ್ದಾರೆ.
ಮೇದೋಜ್ಜೀರಕ ಗ್ರಂಥಿ ಸಮಸ್ಯೆಯ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಈಗ ಚೇತರಿಸಿಕೊಂಡು ಶಾಸನಸಭೆಯಲ್ಲಿ ವಾರ್ಷಿಕ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಕೇವಲ ಐದು ನಿಮಿಷಗಳಷ್ಟೇ ಮಾತನಾಡಿದ ಅವರು,ಅನಾರೋಗ್ಯದ ಕಾರಣದಿಂದಾಗಿ ತಮಗೆ ಪೂರ್ಣ ಬಜೆಟ್ ನ್ನು ಶಾಸನ ಸಭೆಯಲ್ಲಿ ಮಂಡಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಈ ಬಾರಿ ಒಟ್ಟು 17,123 ಕೋಟಿ ರೂಗಳ ಬಜೆಟಿಗೆ ಚಾಲನೆ ಪರಿಕ್ಕರ್, ಕಳೆದ ಬಾರಿಯ ಬಜೆಟ್ ಗಿಂತ ಶೇ 6.84 ರಷ್ಟು ಹೆಚ್ಚಿದೆ ಎಂದು ತಿಳಿಸಿದ್ದಾರೆ.