Partition Horrors Remembrance Day: ಆಗಸ್ಟ್ 14ನ್ನು ಇನ್ಮುಂದೆ `ವಿಭಜನೆಯ ಕರಾಳ ನೆನಪಿನ ದಿನ` ಎಂದು ಆಚರಿಸಲಾಗುವುದು, ಪ್ರಧಾನಿ ಮೋದಿ ಘೋಷಣೆ
Partition Horrors Remembrance Day - ಆಗಸ್ಟ್ 14 ರ ದಿನವನ್ನು ದೇಶದ ಇತಿಹಾಸದಲ್ಲಿ ಕಣ್ಣೀರಿನಿಂದ ಬರೆಯಲಾಗಿದೆ. ದೇಶ ವಿಭಜನೆಯಾದ ದಿನ ಇದು. ಪಾಕಿಸ್ತಾನವನ್ನು 14 ಆಗಸ್ಟ್ 1947 ರಂದು ಮತ್ತು ಭಾರತವನ್ನು 15 ಆಗಸ್ಟ್ 1947 ರಂದು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಲಾಯಿತು.
ನವದೆಹಲಿ: Partition Horrors Remembrance Day - ಆಗಸ್ಟ್ 14ನ್ನು ಇನ್ಮುಂದೆ 'ವಿಭಜನ್ ವಿಭಿಷಿಕಾ ಸ್ಮಾರಕ ದಿನ' ಎಂದು ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಲಾಗಿದೆ. ಇದಕ್ಕೆ ಕಾರಣಗಳನ್ನು ನೀಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi), ಈ ದಿನದಂದು ನಮ್ಮ ಲಕ್ಷಾಂತರ ಸಹೋದರ-ಸಹೋದರಿಯರು ದ್ವೇಷ ಮತ್ತು ಹಿಂಸಾಚಾರದಿಂದ ಸ್ಥಳಾಂತರಗೊಂಡಿದ್ದಾರೆ. ಅವರು ಮಾಡಿರುವ ಈ ತ್ಯಾಗದ ನೆನಪಿಗಾಗಿ ಆಗಸ್ಟ್ 14ರಂದು 'ವಿಭಜನ್ ವಿಭೀಶಿಕಾ ಸ್ಮಾರಕ್ ( Partition Horrors Remembrance) ದಿನ' ಎಂದು ಆಚರಿಸಲಾಗುವುದು ಎಂದು ಹೇಳಿದ್ದಾರೆ.
Afghanistan Crisis: ಅಫ್ಘಾನಿಸ್ತಾನದಲ್ಲಿ ಭಾರತೀಯರಿಗೆ ನಮ್ಮಿಂದ ಯಾವುದೇ ಅಪಾಯ ಇಲ್ಲ ಎಂದ ತಾಲಿಬಾನ್
ಆಗಸ್ಟ್ 14: ಭಾರತ ಮಾತೆಯ ಎದೆಯನ್ನು ಸೀಳಿ ದೇಶ ಇಬ್ಭಾಗವಾಗಿತು
ಆಗಸ್ಟ್ 14 (August 14) ರ ದಿನವನ್ನು ದೇಶದ ಇತಿಹಾಸದಲ್ಲಿ ಕಣ್ಣೀರಿನಿಂದ ಬರೆಯಲಾಗಿದೆ. ದೇಶ ವಿಭಜನೆಯಾದ ದಿನ ಇದು. ಪಾಕಿಸ್ತಾನವನ್ನು 14 ಆಗಸ್ಟ್ 1947 ರಂದು ಮತ್ತು ಭಾರತವನ್ನು 15 ಆಗಸ್ಟ್ 1947 (August 15) ರಂದು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಲಾಯಿತು. ಈ ವಿಭಜನೆಯ ಮೂಲಕ ಭಾರತವನ್ನು ಎರಡು ಭಾಗಗಳಾಗಿ ವಿಂಗಡಿಸುವುದರ ಜೊತೆಗೆ ಬಂಗಾಳವನ್ನು ಕೂಡ ವಿಭಜಿಸಲಾಯಿತು ಮತ್ತು ಬಂಗಾಳದ ಪೂರ್ವ ಭಾಗವನ್ನು ಭಾರತದಿಂದ ಬೇರ್ಪಡಿಸಿ ಪೂರ್ವ ಪಾಕಿಸ್ತಾನವನ್ನು ರೂಪಿಸಲಾಯಿತು, ಅದು 1971 ರ ಯುದ್ಧದ ನಂತರ ಬಾಂಗ್ಲಾದೇಶವಾಯಿತು.
ಇದನ್ನೂ ಓದಿ-ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಏನಾಗುತ್ತೆ? ಉಗ್ರ ಸಂಘಟನೆಯ ಕ್ರೂರ ಇತಿಹಾಸ ತಿಳಿಯಿರಿ
ಕೇವಲ ಹೇಳಿಕೆಗಾಗಿ ಮಾತ್ರ ಇದು ಒಂದು ದೇಶದ ವಿಭಜನೆಯಾಗಿದೆ. ಏಕೆಂದರೆ, ವಾಸ್ತವದಲ್ಲಿ ಅದು ಕೋಟ್ಯಂತರ ಜನರ ಹೃದಯ, ಕುಟುಂಬ, ಸಂಬಂಧ ಮತ್ತು ಭಾವನೆಗಳಿಗೆ ನೀಡಿದ ಬಲವಾದ ಪೆಟ್ಟಾಗಿದೆ. ಭಾರತ ಮಾತೆಯ ಎದೆಗೆ ನೀಡಲಾಗಿರುವ ಈ ಪೆಟ್ಟು ಶತಮಾನಗಳವರೆಗೆ ನೋವು ನೀಡುತ್ತಲೇ ಇರಲಿದೆ ಮತ್ತು ಮುಂದಿನ ಪೀಳಿಗೆ ಕೂಡ ಈ ಕರಾಳ ದಿನದ ನೋವು ಮತ್ತು ರಕ್ತಪಾತದ ದಿನದ ಛಾಯೇ ಅನುಭವಿಸುತ್ತಲೇ ಇರಲಿದೆ.
ಇದನ್ನೂ ಓದಿ-ndependence Day: ಆಗಸ್ಟ್ 15 ರಂದು ದೆಹಲಿಯಿಂದ ಕಾಶ್ಮೀರದವರೆಗೆ ಹೈ ಅಲರ್ಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ